ಚಿತ್ರದುರ್ಗ ಜಿಲ್ಲಾ ನಾಗರೀಕರ ಪರವಾಗಿ ಸಚಿವ ಸುನೀಲ್‌ಕುಮಾರ್ ವಿ. ಅವರಿಗೆ ಬೆಂಗಳೂರಿನಲ್ಲಿ ಮನವಿ ಸಲ್ಲಿಕೆ.
ರಾಷ್ಟಕ್ಕೆ ಸ್ವಾತಂತ್ರ ಲಭಿಸಿ 75 ವರ್ಷಗಳು ಸಂದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಲವು ಜನಪರ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಬಯಲುಸೀಮೆ, ಕೋಟೆನಾಡಿನ ಚಿತ್ರದುರ್ಗಕ್ಕೆ ಸರ್ಕಾರವು ವಿವಿಧ ಕ್ಷೇತ್ರಗಳಿಗೆ ತುರ್ತಾಗಿ ಹೆಚ್ಚಿನ ಆದ್ಯತೆಯ ನೀಡಬೇಕಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇಂಧನ ಸಚಿವರಾದ ಸುನೀಲ್‌ಕುಮಾರ್ ವಿ. ಅವರಿಗೆ ಚಿತ್ರದುರ್ಗದವರೇ ಆದ ಹಿರಿಯ ಪತ್ರಕರ್ತ ವೆಂಕಟಸುಬ್ಬು ಮೋಕ್ಷಗುಂಡ0 ಅವರು ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಭೇಟಿಮಾಡಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಕೆ. ಸದಾಶಿವ ಶೆಣೈ, ಚಿತ್ರದುರ್ಗದ ಯುವ ಉದ್ಯಮಿ ಸಂಕರ್ಷಣ, ಕಣಜನಹಳ್ಳಿ ವೆಂಕಟಾಚಲಯ್ಯ ಸೇರಿದಂತೆ ಕೆಲ ನಾಗರೀಕರು ಉಪಸ್ಥಿತರಿದ್ದರು.

0 Comments