" ರಾಯರ ಬೃಂದಾವನಕ್ಕೆ ಲಾವಂಚದಿಂದ ಅಲಂಕಾರ" ಬೆಂಗಳೂರಿನ ಜಯನಗರದ 5 ನೇ ಬಡಾವಣೆಯಲ್ಲಿರುವ ನಂಜನಗೂಡುಶ್ರೀರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಪರಮಪೂಜ್ಯ 108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ದಂತೆ ಗುರುವಾರದ ಪ್ರಯುಕ್ತ ವಿಶೇಷ "ಲಾವಂಚ"ದೊಂದಿಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನವನ್ನು ಅಲಂಕರಿಸಲಾಗಿತ್ತು .
ಪ್ರತಿ ಗುರುವಾರದಂತೆ ಈ ದಿನ ಸಂಜೆ"ವಿದುಷಿ- ಉಷಾ ಬಿ ನಿರ್ದೇಶನದಲ್ಲಿ - ಪದ್ಮಿನಿ ಪ್ರಿಯಾ ನೃತ್ಯ ಅಕಾಡೆಮಿಯ ವಿದ್ಯಾರ್ಥಿಗಳಿಂದ"ಭರತನಾಟ್ಯ" ಕಾರ್ಯಕ್ರಮವು ನೆರವೇರಿತು.
ಈ ಸಂದರ್ಭದಲ್ಲಿ ಆರ್ ಕೆ ವಾದೀಂದ್ರ ಆಚಾರ್ಯರು ಹಾಗೂ ಕಿಶೋರ್ ಆಚಾರ್ಯರು ಉಪಸ್ಥಿತರಿದ್ದರು.



0 Comments