Ticker

6/recent/ticker-posts

Ad Code

Responsive Advertisement

ಶಾಸಕ ಸೋಮಶೇಖರ್‍ರೆಡ್ಡಿಯವರಿಂದ ಎಸ್.ಆರ್ ಫ್ಯಾಮಿಲಿ ಡಾಬಾ ರೆಸ್ಟಾರೆಂಟ್ ಉದ್ಘಾಟನೆ

ಬಳ್ಳಾರಿ ಏ 21. ಬಳ್ಳಾರಿ ಗ್ರಾಮಾಂತರ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯ ಜೋಳದರಾಶಿ ಸಮೀಪದಲ್ಲಿ ಹೊಸದಾಗಿ ಆರಂಭಿಸಲಾದ ಎಸ್ ಆರ್ ಫ್ಯಾಮಿಲಿ ದಾಬಾ ಹೊಟೆಲ್‍ನ್ನು ನಗರ ಶಾಸಕರಾದ ಜಿ ಸೋಮಶೇಖರ್‍ರೆಡ್ಡಿ ಉದ್ಘಾಟಿಸಿದರು. 

 ಹಿಂದು ಜಾಗರಣ ವೇದಿಕೆಯ ಪ್ರಾಂತ ಸದಸ್ಯರಾದ ಶ್ರೀರಾಮುಲುರವರ ಡಾಬಾ ಹೊಟೆಲ್‍ನ್ನು ರಿಬ್ಬನ್‍ಕಟ್ ಮಾಡುವ ಮೂಲಕ ಆರಂಭಿಸಿದರು. ಈ ಭಾಗದಲ್ಲಿ ಒಂದು ಒಳ್ಳೆಯ ಫ್ಯಾಮಿಲಿ ಡಾಬಾ ಇರುವುದಿಲ್ಲವಾದ ಕಾರಣ ಈ ರಸ್ತೆಯು ಎರಡು ರಾಜ್ಯಗಳನ್ನು ಸಂಪರ್ಕಿಸುವ ರಸ್ತೆಯಾಗಿರುವುದರಿಂದ ಬಳ್ಳಾರಿ ನಂತರ ಗುಂತಕಲ್ ಅಥವಾ ಉರವಕೊಂಡದವರೆಗೆ ಯಾವುದೆ ಒಂದು ಒಳ್ಳೆಯ ಫ್ಯಾಮಿಲಿ ರೆಸ್ಟೋರೆಂಟ್ ಇಲ್ಲದನ್ನು ಮನಗಂಡು ಪ್ರಯಾಣಿಕರ ಅನುಕೂಲಕ್ಕೆಂದು ಎಲ್ಲಾ ಮೂಲಭೂತ ಸೌಕರ್ಯಗಳೊಂದಿಗೆ ಒಳ್ಳೆಯ ಫ್ಯಾಮಿಲಿ ಡಾಬವನ್ನು ಆರಂಭಿಸಲಾಗಿದೆ. ಸಾರ್ವಜನಿಕರು, ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಫ್ಯಾಮಿಲಿ ದಾಬಾದ ಮಾಲಿಕರಾದ ಶ್ರೀರಾಮುಲುರವರು ಸಾರ್ವಜನಿಕರಲ್ಲಿ ಕೋರಿದ್ದಾರೆ. 

ಈ ಸಂದರ್ಭದಲ್ಲಿ ಗ್ರಾಮಿಣ ಶಾಸಕರಾದ ಬಿ ನಾಗೇಂದ್ರ, ಗುಮ್ಮನೂರು ನಾರಾಯಣಸ್ವಾಮಿ, ಬಳ್ಳಾರಿ ಬಿ.ಜೆ.ಪಿ ಜಿಲ್ಲಾಧ್ಯಕ್ಷರಾದ ಮುರಹರಗೌಡ, ಮಹಾನಗರ ಪಾಲಿಕೆ ಸದಸ್ಯರಾದ ಮೋತ್ಕರ್ ಶ್ರೀನಿವಾಸುಲು, ಮಲ್ಲನಗೌಡ, ವಿ.ಎಚ್.ಪಿ ಯ ಅಶೋಕ್, ಅನಿಲ್‍ನಾಂಯ್ಡು ಪಕ್ಷದ ಮುಖಂಡರಾದ ಐನಾಥ್‍ರೆಡ್ಡಿ, ಆರ್.ಎಸ್.ಎಸ್ ರಾಜಶೇಖರ್ ಜಿ, ರಾಷ್ಟ್ರಪ್ರಚಾರ ಕನ್ವಿನರ್ ವೈ.ಸಿ.ಪಿ ರಾಮಚಂದ್ರರೆಡ್ಡಿ, ಮುರಾರಿ ಗೌಡ, ಶ್ರೀನಿವಾಸ್ ಮೋತ್ಕರ್, ಅನಿಲ್ ನಾಯ್ಡು, ಸೇರಿದಂತೆ ಅಕ್ಕ ಪಕ್ಕದ ಗ್ರಾಮಗಳ ಮುಖಂಡರುಗಳು ಇದ್ದರು.  




 

Post a Comment

0 Comments

Ad Code

Responsive Advertisement