ಬಳ್ಳಾರಿ,ಮೇ 23: ಬಳ್ಳಾರಿ ಮಹಾನಗರಪಾಲಿಕೆ ವ್ಯಾಪ್ತಿಯ ಸಾರ್ವಜನಿಕರ ಕುಂದುಕೊರತೆಗಳ ದೂರುಗಳನ್ನು ನೊಂದಾಯಿಸಲು ಬಳಸಲಾಗುತ್ತಿದ್ದ ಜನಹಿತ (Janahita) ಅಪ್ಲಿಕೇಷನ್ ಏ.30ಕ್ಕೆ ಅಂತ್ಯವಾಗಿದ್ದು, ಸರ್ಕಾರದ ಆದೇಶದಂತೆ ಸಾರ್ವಜನಿಕರು ತಮ್ಮ ದೂರುಗಳನ್ನು ನೊಂದಾಯಿಸಲು ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ(iPGRS )ಯನ್ನು ಜಾರಿಗೊಳಿಸಲಾಗಿದೆ.
ಈ ವ್ಯವಸ್ಥೆಯಡಿ ಸಾರ್ವಜನಿಕರು ಐಪಿಜಿಆರ್‍ಎಸ್ iPGRS ನಿರ್ವಹಣೆ ಮಾಡಲು ಗೂಗಲ್ ಪ್ಲೇ ಸ್ಟೋರ್‍ನಲ್ಲಿ (Google Playstore) ನಲ್ಲಿ Janaspandana mobile Appನಲ್ಲಿ ಲಾಗಿನ್ ಮಾಡಿ ದೂರುಗಳನ್ನು ಸಲ್ಲಿಸಬಹುದು ಎಂದು ಮಹಾನಗರ ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. iPGRS(ಐಪಿಜಿಆರ್‍ಎಸ್) ನಿರ್ವಹಣೆಯಲ್ಲಿ ತೊಂದರೆಯಾದಲ್ಲಿ ಕಾಲ್ ಸೆಂಟರ್ ಸಂಖ್ಯೆ:1902 ಅಥವಾ ದೂ.080 22340369, 080-22340065 ಅಥವಾ ಇಮೇಲ್ support@ipgrs.karnataka.gov.in ನಲ್ಲಿ ಭೇಟಿ ನೀಡಬಹುದು ಎಂದು ಅವರು ತಿಳಿಸಿದ್ದಾರೆ.

0 Comments