ಬೆಂಗಳೂರಿನ ಮಲ್ಲತ್ತಹಳ್ಳಿಯ ಪಾರ್ವತಮ್ಮ ರಾಮಯ್ಯ ಕನ್ವೆನ್ಷನ್ ಹಾಲ್'ನಲ್ಲಿ ಜರುಗಿದ, ವಿಜಯನಗರ ಎಜುಕೇಶನಲ್ ಅಕಾಡೆಮಿಯ ಬಿ.ಎಸ್.ಸಿ ನರ್ಸಿಂಗ್ ವಿದ್ಯಾರ್ಥಿಗಳ 20ನೇ ಬ್ಯಾಚ್ ಹಾಗೂ ಜಿ.ಎನ್.ಎಮ್ 28 ನೇ ಬ್ಯಾಚ್ ಇದರ ಹ್ಯಾಲೋಜೆನ್-2022 ಕಾರ್ಯಕ್ರಮದ ಉದ್ಘಾಟನೆಯನ್ನ ವಸತಿ ಸಚಿವರಾದ ವಿ.ಸೋಮಣ್ಣರವರು ಮತ್ತು ಅಕಾಡೆಮಿಯ ಅಧ್ಯಕ್ಷರು,ನಿಕಟಪೂರ್ವ ಬಿ.ಬಿ.ಎಂ.ಪಿ.ಸದಸ್ಯರಾದ ಡಾ||ಎಸ್.ರಾಜುರವರು ,ಕಾರ್ಯದರ್ಶಿ ಡಾ||ಶೇಯಸ್ಸ್ ರವರು ದೀಪಾ ಬೆಳಗಿಸಿ ಉದ್ಘಾಟನೆ ಮಾಡಿದರು.
ಇದೇ ಸಂದರ್ಭದಲ್ಲಿ ನರ್ಸಿಂಗ್ ವಿದ್ಯಾರ್ಥಿಗಳ ಕುರಿತು ವಸತಿ ಸಚಿವರಾದ ವಿ.ಸೋಮಣ್ಣರವರು ಮಾತನಾಡಿ ವೈದ್ಯರು ಎಷ್ಟು ಮುಖ್ಯವೊ ಅಷ್ಟೆ ಮುಖ್ಯ ದಾದಿಯರು .ಕೊರೋನ ಸಾಂಕ್ರಮಿಕ ಲಾಕ್ ಡೌನ್ ಸಮಯದಲ್ಲಿ ಸೋಂಕಿತರಿಗೆ ತಮ್ಮ ಜೀವದ ಹಂಗು ತೊರೆದು ಹಗಲಿರುಳು ರೋಗಿಗಳ ಸೇವೆ ಮಾಡಿ ಜೀವ ಉಳಿಸಿದರು.
ಮನುಷ್ಯ ಶ್ರೀಮಂತ ಎಂಬುದು ಮುಖ್ಯವಲ್ಲ,ಅವನು ಎಷ್ಟು ಆರೋಗ್ಯವಂತ ಎಂಬುದು ಮುಖ್ಯ.ಆರೋಗ್ಯವಂತ ಸಮಾಜ ಇದ್ದರೆ ದೇಶದ ಅಭಿವೃದ್ದಿ ಸಾಧ್ಯ ಅದ್ದರಿಂದ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಿರ್ಮಾಸಲಾಗಿದೆ ಎಂದು ಹೇಳಿದರು.
ಅಕಾಡೆಮಿಯ ಅಧ್ಯಕ್ಷರಾದ ಡಾ||ಎಸ್.ರಾಜುರವರು ಮಾತನಾಡಿ ಹೆತ್ತ ತಾಯಿ ಮಕ್ಕಳನ್ನ ಜೋಪಾನ ಮಾಡಿದಂತೆ ರೋಗಿಗಗಳನ್ನ ತಾಯಿಯ ಸ್ಥಾನದಲ್ಲಿ ನಿಂತು ದಾದಿಯರು ಕಾರ್ಯನಿರ್ವಹಿಸುತ್ತಾರೆ.
ರೋಗಿಗಳ ಪಾಲಿಗೆ ಸಾಕ್ಷತ್ ದೇವರಂತೆ ನಿಂತು ಅವರಿಗೆ ಧೈರ್ಯ,ಆತ್ಮಸ್ಥೃರ್ಯ ತುಂಬುವ ಕೆಲಸ ಮಾಡುತ್ತಾರೆ.
ನರ್ಸಿಂಗ್ ಕಲಿಯುವ ವಿದ್ಯಾರ್ಥಿಗಳು ಸಹನೆ,ತಾಳ್ಮೆ ಬೆಳಸಿಕೊಂಡು ರೋಗ ಮುಕ್ತ ಸಮಾಜಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.

.jpeg)

0 Comments