Ticker

6/recent/ticker-posts

Ad Code

Responsive Advertisement

ಟೆಕ್ಸ್‍ಟೈಲ್ ಟೆಕ್ನಾಲಜಿ ಡಿಪ್ಲೋಮಾ ಕೋರ್ಸಿಗೆ ಪ್ರವೇಶ ಪ್ರಾರಂಭ

ಬೆಂಗಳೂರು, ಮೇ 20  (ಕರ್ನಾಟಕ ವಾರ್ತೆ) :ಸರ್ಕಾರಿ ಜವಳಿ ತಾಂತ್ರಿಕ ಸಂಸ್ಥೆಯು  2022-23ನೇ ಸಾಲಿನ ಪ್ರಥಮ ಸೆಮಿಸ್ಟರ್ ಟೆಕ್ಸ್‍ಟೈಲ್ ಟೆಕ್ನಾಲಜಿ ಡಿಪ್ಲೋಮಾ ಕೋರ್ಸಿಗೆ ಮೇ 19 ರಿಂದ ಆಫ್‍ಲೈನ್ ಪ್ರವೇಶ ಪ್ರಕ್ರಿಯೆಯು ಪ್ರಾರಂಭವಾಗಿದೆ.

ವಿದ್ಯಾರ್ಥಿಗಳು ಡಿಪ್ಲೋಮಾ ಕೋರ್ಸಿಗೆ ಪ್ರವೇಶ ಪಡೆಯಲು ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಶೇ 35 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಪ್ರವೇಶಕ್ಕೆ ಎಸ್.ಎಸ್.ಎಲ್.ಸಿ ಅಂಕಪಟ್ಟಿ, ವರ್ಗಾವಣೆ ಪ್ರಮಾಣಪತ್ರ / ನಿರಾಪೇಕ್ಷಣಾ ಪತ್ರ, ಕನಿಷ್ಟ 5 ವರ್ಷಗಳ ವ್ಯಾಸಂಗ ಪ್ರಮಾಣ ಪತ್ರ (ಎಸ್.ಎಸ್.ಎಲ್.ಸಿ ಒಳಗೊಂಡಂತೆ) ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಹಿಯೊಂದಿಗೆ, ಆದಾಯ ಮತ್ತು ಜಾತಿ ಪ್ರಮಾಣಪತ್ರ, ಆಧಾರ್ ಪ್ರತಿ, ದೇಹಧಾಡ್ರ್ಯ ಪ್ರಮಾಣಪತ್ರ, ಇತ್ತೀಚಿನ 4 ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳನ್ನು ಸಲ್ಲಿಸಬೇಕಾದ ದಾಖಲಾತಿಗಳು.

ಈ ಮೂರು ವರ್ಷದ ಡಿಪ್ಲೋಮಾ ಟೆಕ್ಸ್‍ಟೈಲ್ಸ್ ಟೆಕ್ನಾಲಜಿ ಕೋರ್ಸ್‍ನ್ನು ಮುಗಿಸಿದ ನಂತರ 100% ಉದ್ಯೋಗಾವಕಾಶವರುತ್ತದೆ. ವಿದ್ಯಾರ್ಥಿಗಳುಎಲ್ಲಾ ದಾಖಲೆಗಳೊಂದಿಗೆ ನೇರವಾಗಿ ಕಾಲೇಜಿಗೆ ಬಂದು ಪ್ರವೇಶ ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9481101049, 9448705205, 080-22267580 ನ್ನು ಸಂಪರ್ಕಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.


Post a Comment

0 Comments

Ad Code

Responsive Advertisement