Ticker

6/recent/ticker-posts

Ad Code

Responsive Advertisement

ವಾಣಿಜ್ಯ ಪರೀಕ್ಷೆಯ ಬೆರಳಚ್ಚು, ಶೀಘ್ರಲಿಪಿ ವಿಷಯಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು, ಮೇ 21,  (ಕರ್ನಾಟಕ ವಾರ್ತೆ) : ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಇತರೆ ಪರೀಕ್ಷೆಗಳು) ಮಲ್ಲೇಶ್ವರಂ, ಬೆಂಗಳೂರು ವತಿಯಿಂದ 2022ರ ಜುಲೈ ಮಾಹೆಯಲ್ಲಿ ನಡೆಯುವ ವಾಣಿಜ್ಯ ಪರೀಕ್ಷೆಯ ಬೆರಳಚ್ಚು, ಶೀಘ್ರಲಿಪಿ ಹಾಗೂ ಬರವಣಿಗೆ ವಿಷಯಗಳಿಗೆ ಮಾನ್ಯತೆ ಪಡೆದ ವಾಣಿಜ್ಯ ಸಂಸ್ಥೆಗಳಲ್ಲಿ ಅಭ್ಯಾಸ ಮಾಡುತ್ತಿರುವ ಅರ್ಹ ಅಭ್ಯರ್ಥಿಗಳಿಂದ ಮೇ 21 ರಿಂದ ಜೂನ್ 03 ರವರೆಗೆ ದಂಡರಹಿತವಾಗಿ ಹಾಗೂ ಜೂನ್ 04 ರಿಂದ ಜೂನ್ 06 ರವರೆಗೆ ದಂಡಸಹಿತವಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಸಂಬಂಧಪಟ್ಟ ಸಂಸ್ಥೆಯ ಮುಖ್ಯಸ್ಥರು ತಮ್ಮ ಸಂಸ್ಥೆಯಲ್ಲಿ ಅಭ್ಯಾಸ ಮಾಡುತ್ತಿರುವ ಅರ್ಹ ಅಭ್ಯರ್ಥಿಗಳ ಅರ್ಜಿಗಳನ್ನು ಮಂಡಳಿಯ ಜಾಲತಾಣhttps://sslc.karnataka.gov.in  ನಲ್ಲಿ ತಮ್ಮ ಸಂಸ್ಥೆಯ ಲಾಗಿನ್ ಆಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.


Post a Comment

0 Comments

Ad Code

Responsive Advertisement