ಬಳ್ಳಾರಿ ಏ 21. ಭಾರತೀಯ ಜನತಾ ಪಾರ್ಟಿ ಸಾಮಾಜಿಕ ನ್ಯಾಯ ಪಾಕ್ಷಿಕ ಅರ್ಧ ಮಾಸಿಕ ಯೋಜನೆ ಅಡಿಯಲ್ಲಿ ಬಳ್ಳಾರಿ ಜಿಲ್ಲಾ ಫಲಾನುಭವಿಗಳ ಪ್ರಕೋಷ್ಟ ವತಿಯಿಂದ ಹಾಗೂ ಪಂಚಾಯತ್ ರಾಜ್ ಪ್ರಕೋಷ್ಟದಿಂದ ಪ್ರತಿ ಮನೆಗೆ ನಳದಿಂದ ನೀರು (JAL JEEVAN MISSION) "ಹರ್ ಘರ್ ಜಲ್" ಯೋಜನೆಯಡಿಯಲ್ಲಿ ದಿನಾಂಕ 19-04-2022 ರಂದು 12 ಗಂಟೆಗೆ ಬಳ್ಳಾರಿಯ ಕಂಟೊನ್ಮೆಂಟ್ , ಸಿ.ಬಿ., ಪ್ರಾಂತದಲ್ಲಿ ಹಾಗೂ ಸಿರುಗುಪ್ಪ ಪ್ರಾಂತದಲ್ಲಿ ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೀ ಅವರ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಬೇಟಿ ನೀಡಿ ನಳ ಪೂಜೆಯನ್ನು ಶಾಸ್ತ್ರೋತ್ತವಾಗಿ ನೆರವೇರಿಸಿದೆವು. ಹಾಗೆಯೇ ಪ್ರಧಾನ ಮಂತ್ರಿಯವರ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ತಿಳಿಸಿದ್ದಹಾಗೆ ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರು ಕುಡಿಸುವ ಸಲುವಾಗಿ ಸಣ್ಣ ಮಣ್ಣಿನ ಪಾತ್ರೆಗಳನ್ನು ಫಲಾನುಭವಿಗಳ ಪ್ರಕೋಷ್ಟದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೆ ಹಾಗೂ ಮನೆ ಮನೆಗೆ ತೆರಳಿ ನೂರಾರು ಮನೆಯ ಮಾಲೀಕರಿಗೆ ಸಣ್ಣ ಮಣ್ಣಿನ ಪಾತ್ರೆಗಳನ್ನು ಉಡುಗೊರೆಯಾಗಿ ನೀಡಿದ್ದೇವೆ ಎಂದರು. ಸಾಂಕೇತಿಕವಾಗಿ ಐದಾರು ಮನೆಗಳ ಮೇಲ್ ಚಾವಣಿಯಲ್ಲಿ ಸಣ್ಣ ಮಣ್ಣಿನ ಪಾತ್ರೆಗಳನ್ನು ಇಟ್ಟು ಪಕ್ಷಿಗಳಿಗೆ ನೀರು ಕುಡಿಯುವ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟೆವು ಎಂದು ಬಳ್ಳಾರಿ ಜಿಲ್ಲೆಯ ಫಲಾನುಭವಿಗಳ ಪ್ರಕೋಷ್ಟದ ಜಿಲ್ಲಾ ಸಂಚಾಲಕರಾದ ಡಿ.ವಿನೋದ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದರು.
ಬೇಸಿಗೆಯಲ್ಲಿ ಉರಿಯುವ ಬಿಸಿಲಿಗೆ ಬೆಂದುತ್ತಿರುವ ಜೀವವುಳ್ಳ ಗಿಡ ಮರಗಳಿಗೆ ನೀರುಣಿಸಿದೆವು ಎಂದರು. ದೇಶದ ಮೂಲೆ ಮೂಲೆಗಳಲ್ಲಿ ಬಹಳಷ್ಟು ಮಟ್ಟಿಗೆ ನೀರಿನ ಸಮಸ್ಯೆಯನ್ನು ಬಗೆಹರಿಸಿದರು ಹಾಗೂ ಈ ಮೂಲಕ ಶುದ್ಧ ಕುಡಿಯುವ ನೀರನ್ನು ಸಾರ್ವಜನಿಕರಿಗೆ ಒದಗಿಸಿದ್ದಾರೆ.ಈ ಕಾರ್ಯಕ್ರಮದಲ್ಲಿ ಬಾಗವಹಿಸಿ, ಯಶಸ್ವಿಗೊಳಿಸಲು ಶ್ರಮಿಸಿರುವ ಬಳ್ಳಾರಿ ಜಿಲ್ಲೆಯ ಫಲಾನುಭವಿಗಳ ಪ್ರಕೋಷ್ಟದ ಜಿಲ್ಲಾ ಸಂಚಾಲಕರು ಡಿ.ವಿನೋದ್ ಕುಮಾರ್ ಸಹ ಸಂಚಾಲಕರು ಎಚ್.ಎಂ.ವೀರೇಶ್ ಸ್ವಾಮಿ ,ಬಿ.ಜೆ.ಪಿ ಹಿರಿಯ ಮುಖಂಡರು ಮಂಜುನಾಥ, ಎಂ.ಎಸ್ ರಘು, ಬಾಲಾಜಿ , ಪಂಚಾಯತ್ ರಾಜ್ ಪ್ರಕೋಷ್ಟದ ಸಹಸಂಚಾಲಕರು ಎನ್.ಕೆ.ಸುರೇಶ್, ಬಳ್ಳಾರಿ ಮಂಡಲದ ಬ.ಜೆ.ಪಿ. ಫಲಾನುಭವಿಗಳ ಪ್ರಕೋಷ್ಟದ ಸಂಚಾಲಕರು ವೀರಣ್ಣ ಗೌಡ ಹುಗಾರ್ ಸಹಸಂಚಾಲಕರು ನೀಲಕಂಠ ಆಚಾರ್ಯರು, ಮಂಡಲ ಸದ್ಯಸ್ಯರು ಅಖೀಲ್ ಚೌಧರಿ, ಬಾರ್ಗವನಾಯ್ಡು,ಆರ್.ಶರಣೇಶ್, ನರೇಂದ್ರ, ಸಾಗರ್, ಮೆಘರಾಜ್, ಉಪಸ್ಥಿತಿ ಇದ್ದರು.
ಅದೇರೀತಿ ಸಿರುಗುಪ್ಪದಲ್ಲಿ ಸಿರುಗುಪ್ಪ ಮಂಡಲದ ಫಲಾನುಭವಿಗಳ ಪ್ರಕೋಷ್ಟ ಸಂಚಾಲಕರು ಅಂಜುಅಮ್ಮಾ ಮತ್ತು ಅನೀಲ್, ಹನುಮೇಶ್, ಕಲೀಂ, ಸಿಕಿಂದರ್ ಬಾವಾಜಿ ಸಿಂಗ್ ಇವರುಗಳಿಂದ ಹರ ಘರ್ ಜಲ್ (JAL JEEVAN MISSION)) ಹಾಗೂ ನಳ ಪೂಜೆ ಕಾರ್ಯಕ್ರಮ ನೆರವೇರಿಸಿದರು ಎಂದು ಬಳ್ಳಾರಿ ಜಿಲ್ಲೆಯ ಫಲಾನುಭವಿಗಳ ಪ್ರಕೋಷ್ಟದ ಜಿಲ್ಲಾ ಸಂಚಾಲಕರು ಡಿ.ವಿನೋದ್ ಕುಮಾರ್ ತಿಳಿಸಿದ್ದಾರೆ.

0 Comments