ಮಧುಗಿರಿ : ರೈತರು ಆರ್ಥಿಕವಾಗಿ ಮುಂದುವರಿಯಲು ಹಾಲು ಉತ್ಪಾದನೆ ಬಹಳ ಮುಖ್ಯವಾಗಿದ್ದು, ಬೇಸಾಯ ಕೈಕೊಟ್ಟ ಸಂದರ್ಭದಲ್ಲಿ ಉಪಕಸುಬುಗಳಿಂದ ಹಳ್ಳಿಗಳಲ್ಲಿ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ತಾಲೂಕಿನ ಐ.ಡಿ.ಹಳ್ಳಿ ಹೋಬಳಿಯ ದೊಡ್ಡಯಲ್ಕೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಳೆಯನ್ನೇ ನಂಬಿಕೊಂಡು ವ್ಯವಸಾಯ ಮಾಡುವವರ ಪರಿಸ್ಥಿತಿ ಕಷ್ಟಕರವಾಗಿದೆ. ಹೈನುಗಾರಿಕೆಯು ಬಹಳ ದೊಡ್ಡ ಉದ್ಯಮವಾಗಿ ಲಕ್ಷಾಂತರ ಜನರಿಗೆ ಉದ್ಯೋಗವನ್ನು ಕಲ್ಪಿಸಿ ಕೊಟ್ಟಿದೆ. ರೈತರಿಗೆ ವ್ಯವಸಾಯ ಕೈ ಕೊಟ್ಟಾಗ ಹಾಲು ಉತ್ಪಾದನೆಯು ಸಹಕಾರಿಯಾಗಿದೆ. ಕೊಂಡವಾಡಿ ಚಂದ್ರಶೇಖರ್ ರವರು ತುಮುಲ್ ಅಧ್ಯಕ್ಷರಾಗಿದ್ದ ಸಂಧರ್ಭದಲ್ಲಿ ಹಾಲು ಉತ್ಪಾದಕರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಇದನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ತುಮುಲ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ಮಾತನಾಡಿ, ಹಾಲು ಉತ್ಪಾದಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತುಮೂಲ್ ನಿಂದ ಹಲವಾರು ಯೋಜನೆಗಳು ಅನುಷ್ಠಾನಗೊಳಿಸಿದ್ದು, ಇದರಿಂದ ರೈತರ ಮಕ್ಕಳಿಗೆ ಸಹಕಾರಿಯಾಗಲಿದೆ. ಗುಣಮಟ್ಟದ ಹಾಲು ಪೂರೈಕೆ ಮಾಡುವುದೇ ಆದಲ್ಲಿ ಸಂಘ ಆರ್ಥಿಕವಾಗಿ ಸದೃಢವಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ದೊಡ್ಡಯಲ್ಕೂರು ಗ್ರಾಮ ಪಂಚಾಯ್ತಿ ವತಿಯಿಂದ 14ನೇ ಹಣಕಾಸು ಯೋಜನೆಯಡಿಯಲ್ಲಿ ಅಂಗವಿಕಲರಿಗೆ ಚೆಕ್ ವಿತರಿಸಲಾಯಿತು ಹಾಗೂ ಕಂದಾಯ ಇಲಾಖೆ ವತಿಯಿಂದ ವಿವಿಧ ಪಿಂಚಣಿ ಮಂಜೂರಾತಿ ಆದೇಶ ಪತ್ರ ವನ್ನು ಸಹ ವಿತರಿಸಿದರು.
ಗ್ರಾಪಂ ಅಧ್ಯಕ್ಷೆ ನಾಗರತ್ನಮ್ಮ, ಉಪಾಧ್ಯಕ್ಷೆ ಅನಿತಮ್ಮ, ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯಕಾರಿ ಸಮಿತಿ ಅಧ್ಯಕ್ಷರಾದ ಬಿ.ನರಸಿಂಹ ಗೌಡ ,ಉಪಾಧ್ಯಕ್ಷರಾದ ನಾಗರಾಜು , ನಿರ್ದೇಶಕರುಗಳಾದ ಬಿ.ನರಸೇಗೌಡ, ಗಿರೀಶ್ ನರಸಿಂಹರಾಜು, ಸಿ.ಎನ್. ನರಸೇಗೌಡ, ವೈ.ರಾಮಕೃಷ್ಣಪ್ಪ, ವೈ.ಟಿ.ಕೃಷ್ಣಮೂರ್ತಿ, ಜುಂಜೇಗೌಡ,ಪುಟ್ಟಮೈಲಾರಪ್ಪ, ದಾಳಪ್ಪ,ಅನಿತಮ್ಮ, ಲಕ್ಷ್ಮೀದೇವಮ್ಮ, ವಿಸ್ತರಣಾಧಿಕಾರಿ ಶಂಕರ್ ನಾಗ್, ನೌಕರರಾದ ಧನಂಜಯಮೂರ್ತಿ, ಮಹೇಶ್, ಮಂಜುನಾಥ್, ಮುಖಂಡರುಗಳಾದ ಯರಗುಂಟೆ ರಾಮಚಂದ್ರಯ್ಯ, ವೆಂಕಟರಂಗಾರೆಡ್ಡಿ, ಜಿಲಾನ್, ರಿಯಾಜ್ ಅಹ್ಮದ್, ತಿಪ್ಪಾಪುರ ಅಶ್ವತ್ಥಪ್ಪ, ಕೂರ್ಲಾ ಬೋವಿ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರು ಹಾಜರಿದ್ದರು.
ವರದಿ:ನಾಗೇಶ್ ಜೀವಾ ಹೆಚ್ ಟಿ ಹಳ್ಳಿ

0 Comments