Ticker

6/recent/ticker-posts

Ad Code

Responsive Advertisement

bescom ಬೆಸ್ಕಾಂ ಸಿಬ್ಬಂದಿ ವಿದ್ಯುತ್ ಪುನರ್ ಸ್ಥಾಪಿಸುವ ಕಾರ್ಯದಲ್ಲಿ ನಿರತ


 ಬೆಂಗಳೂರುಮೇ 02 (ಕರ್ನಾಟಕ ವಾರ್ತೆ):

  ಭಾನುವಾರ ಸುರಿದ ಧಾರಾಕಾರ ಗಾಳಿ ಮಳೆಯಿಂದಾಗಿ ಬೆಂಗಳೂರು ನಗರ ಹಾಗು ಗ್ರಾಮಾಂತರ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದುಬೆಸ್ಕಾಂ ಸಿಬ್ಬಂದಿ ವಿದ್ಯುತ್ ಪುನರ್ ಸ್ಥಾಪಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ





ಭಾರೀ ಗಾಳಿ ಮಳೆಗೆ ಸುಮಾರು 238 ವಿದ್ಯುತ್ ಕಂಬಗಳು ಧರೆಗುರುಳಿದ್ದುಸುಮಾರು 300 ಮರಗಳು ಹಾಗು ಅದರ ಕೊಂಬೆಗಳು ವಿದ್ಯುತ್ ಕಂಬಗಳ ಮೇಲರಗಿವೆಇದರಿಂದಾಗಿ ಬೆಸ್ಕಾಂ ವ್ಯಾಪ್ತಿಯ ಹೆಚ್ಚಿನ ವಿಭಾಗ ಗಳಲ್ಲಿ ಹಲವು ತಾಸು ವಿದ್ಯುತ್ ವ್ಯತ್ಯಯ ಉಂಟಾಗಿತ್ತುಮುರಿದ ಕಂಬಗಳ ದುರಸ್ಥಿ ಕಾರ್ಯ ಮುಗಿದಿದ್ದುಹಲವೆಡೆ ವಿದ್ಯುತ್ ಮರುಜೋಡಣೆ ಆಗಿದೆ ಎಂದು ಬೆಸ್ಕಾಂನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ

ರಾಮನಗರಚಂದಾಪುರಕನಕಪುರ ಹಾಗು ಮಾಗಡಿ ವಿಭಾಗ ಗಳಲ್ಲಿ ಹೆಚ್ಚು ಹಾನಿ ಸಂಭವಿಸಿದ್ದು ಮುರಿದ ಕಂಬಗಳ ತೆರವು ಕಾರ್ಯ ಭರದಿಂದ ಸಾಗಿದೆಬೆಂಗಳೂರು ನಗರದ ಕೆಲವು ಬಡಾವಣೆಗ¼ಲ್ಲಿ ನಿನ್ನೆ ರಾತ್ರಿಯೇ  ವಿದ್ಯುತ್ ಮರು ಸ್ಥಾಪನೆ ಕಾರ್ಯ  ಮುಗಿದಿದ್ದುಉಳಿದ ಪ್ರದೇಶಗಳಲ್ಲಿ ಸೋಮವಾರ 5 ಗಂಟೆ ಒಳಗೆ ಮುರಿದಿರುವ ಎಲ್ಲ ವಿದ್ಯುತ್ ಕಂಬಗಳನ್ನು ಬದಲಿಸಲಾಗುವುದು ಎಂದು ಬೆಸ್ಕಾಂನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ

ಮುರಿದಿರುವ ವಿದ್ಯುತ್ ಕಂಬಗಳಲ್ಲಿ ಸುಮಾರು 40 ಶೇಕಂಬಗಳನ್ನು ಬದಲಿಸಲಾಗಿದೆಸಂಜೆ ಒಳಗೆ ಎಲ್ಲ 238 ಕಂಬಗಳ ಮರು ಸ್ಥಾಪನೆ ಆಗಲಿದೆ ಎಂದು ಬೆಸ್ಕಾಂ ತಿಳಿಸಿದೆ

ಬೆಂಗಳೂರು ದಕ್ಷಿಣ ವಿಭಾಗ ದಲ್ಲಿ 21 ಕಂಬಗಳು ಮುರಿದಿದ್ದು,7 ಕಂಬಗಳ ಮರು ಸ್ಥಾಪನೆ  ಆಗಿದೆಉಳಿದ 14 ಕಂಬಗಳ ಮರು ಸ್ಥಾಪನೆ ಕಾರ್ಯ ನಡೆಯುತ್ತಿದೆಪೂರ್ವ ವಿಭಾಗದಲ್ಲಿ ಹಾನಿಗೊಳಗಾದ ಎಲ್ಲ 13 ಕಂಬಗಳ ಮರು ಸ್ಥಾಪನೆ ಆಗಿದ್ದು ವಿದ್ಯುತ್ ಪೂರೈಕೆ ನೀಡಲಾಗಿದೆಅದೇ ರೀತಿ ಪಶ್ಚಿಮ ವಿಭಾಗದಲ್ಲಿ 7 ಕಂಬಗಳು ಮುರಿದಿದ್ದು 2 ಕಂಬಗಳ ಜೋಡಣೆ ಕಾರ್ಯ ಮುಗಿದಿದೆÀ, ಇನ್ನುಳಿದ ಕಂಬಗಳನ್ನು ಸಂಜೆ ಒಳಗೆ ಜೋಡಿಸಲಾಗುವುದು

ರಾಮನಗರದ ವಿಭಾಗದಲ್ಲಿ 100 ಹಾಗು ಕೋಲಾರ ವಿಭಾಗದಲ್ಲಿ 70 ಕಂಬಗಳು ಹಾನಿಗೊಳಗಾಗಿದ್ದುಪುನರ್ ಸ್ಥಾಪನೆ ಕಾರ್ಯ ಭರದಿಂದ ಸಾಗಿದೆಸಂಜೆ ಒಳಗೆ ಎಲ್ಲ ಕಂಬಗಳ ದುರಸ್ಥಿ ಕಾರ್ಯ ಮುಗಿಯಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ

ವಿದ್ತುತ್ ಮುರು ಜೋಡಣೆ ಕಾರ್ಯದಲ್ಲಿ ಬೆಸ್ಕಾಂನ ಒಟ್ಟು 855 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆಭಾನುವಾರ ರಾತ್ರಿ 228 ಸಿಬ್ಬಂದಿ ಮತ್ತು ಸೋಮವಾರ 627 ಸಿಬ್ಬಂದಿ ವಿದ್ಯುತ್ ದುರಸ್ಥಿ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಬೆಸ್ಕಾಂ ತಿಳಿಸಿದೆ.


Post a Comment

0 Comments

Ad Code

Responsive Advertisement