Ticker

6/recent/ticker-posts

Ad Code

Responsive Advertisement

ಬಳ್ಳಾರಿ : ವಾರ್ಡ್ ಸಮಿತಿ ರಚಿಸಲು ಅರ್ಜಿ ಸ್ವೀಕಾರ: ಜೂ.4ರವರೆಗೆ ಅವಧಿ ವಿಸ್ತರಣೆ

ಬಳ್ಳಾರಿ,ಮೇ 13: ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ 39  ವಾರ್ಡ್‍ಗಳಲ್ಲಿ ತಲಾ ಒಂದು ವಾರ್ಡ್‍ಗೆ ಒಂದು ವಾರ್ಡ್ ಸಮಿತಿಯನ್ನು ರಚಿಸಲು ಸರ್ಕಾರದ ನಿರ್ದೇಶನದಂತೆ, ಆಸಕ್ತಿಯುಳ್ಳ ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸದರಿ ಅರ್ಜಿಗಳನ್ನು ಮೇ 16ರವರೆಗೆ ಸ್ವಿಕರಿಸಲು ಕೊನೆಯ ದಿನಾಂಕವಾಗಿದ್ದು, ಸಾರ್ವಜನಿಕರ ಆಪೇಕ್ಷೆಯ ಮೇರೆಗೆ ಸ್ವೀಕರಿಸುವ ಅವಧಿಯನ್ನು  ಜೂ.4ರವರೆಗೆ  ಮುಂದೂಡಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರು ತಿಳಿಸಿದ್ದಾರೆ.

ಆಸಕ್ತ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

Post a Comment

0 Comments

Ad Code

Responsive Advertisement