Ticker

6/recent/ticker-posts

Ad Code

Responsive Advertisement

BELLARY NEWS ಶ್ರೀ ಕೆ ತಿಮ್ಮಪ್ಪಟಿವರ 22ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ

ಬಳ್ಳಾರಿ ಮೇ 22. ಶ್ರೀ. ಕೆ. ತಿಮ್ಮಪ್ಪ, ಮಾಜಿ ಅಧ್ಯಕ್ಷರು, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಇವರ 22 ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ದಿನಾಂಕ 22-5-2022 ಭಾನುವಾರದಂದು ಬೆಳಿಗ್ಗೆ 09:00 ಗಂಟೆಗೆ ಸರಿಯಾಗಿ ಸಂಸ್ಥೆಯ ಆವರಣದಲ್ಲಿರುವ ಪುತ್ತಳಿಗೆ ಮಾಲಾರ್ಪಣೆ ಮಾಡಿ ಶ್ರೀಯುತರಿಗೆ ಗೌರವ ಸಲ್ಲಿಸಿ ಸಂಸ್ಥೆಯ ಬೆಳವಣಿಗೆಯಲ್ಲಿ ಅವರು ಸಲ್ಲಿಸಿರುವ ಅಪಾರ ನಿಸ್ವಾರ್ಥ ಸೇವೆಯನ್ನು ಸ್ಮರಿಸಲಾಯಿತು. 

ಈ ಸುಸಂದರ್ಭದಲ್ಲಿ ಶ್ರೀ. ಕೆ. ತಿಮ್ಮಪ್ಪ, ಮಾಜಿ ಅಧ್ಯಕ್ಷರು ಇವರ ಪುತ್ರರಾದ ಕೆ. ಚನ್ನಪ್ಪ, ಮಾಜಿ ಅಧ್ಯಕ್ಷರು, ಬಿಡಿಸಿಸಿಐ ಮತ್ತು ಕೆ. ಶ್ಯಾಮ್ ಸುಂದರ್, ಮಾಜಿ ಕಾರ್ಯಕಾರಿ ಸಮಿತಿ ಸದದಸ್ಯರು, ಬಿಡಿಸಿಸಿಐ ಹಾಜರಿದ್ದರು. ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾದ ಬಿ. ಮಹರುದ್ರಗೌಡರು, ಗೌರವ ಕಾರ್ಯದರ್ಶಿಗಳಾದ ಯಶ್‍ವಂತ್‍ರಾಜ್ ನಾಗಿರೆಡ್ಡಿ, ಉಪಾಧ್ಯಕ್ಷರಾದ ಕೆ. ರಮೇಶ್ ಬುಜ್ಜಿ, ಇನ್ನೋರ್ವ ಉಪಾಧ್ಯಕ್ಷರಾದ ಕೆ. ಸಿ. ಸುರೇಶ್ ಬಾಬು, ಜಂಟಿ ಕಾರ್ಯದರ್ಶಿಗಳಾದ ಎಸ್. ದೊಡ್ಡನಗೌಡ್‍ರು, ವಿವಿಧ ಕಮಿಟಿಗಳ ಚೇರ್‍ಮನ್‍ಗಳು, ಕಾರ್ಯಕಾರಿ ಸಮಿತಿ ಸದಸ್ಯರು, ವಿಶೇಷ ಆಹ್ವಾನಿತರು ನೆರವೇರಿಸಿದರು. 



 


Post a Comment

0 Comments

Ad Code

Responsive Advertisement