ಬಳ್ಳಾರಿ ಮೇ 31. ನಗರದ ಪ್ರತಿಷ್ಠಿತ ರಾವ್ ಬಹದ್ದೂರ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದವರಿಂದ ದಿನಾಂಕ : 02-06-2022 ರಿಂದ 04-06-2022 ವರೆಗೆ ವಿದ್ಯಾರ್ಥಿ ಪ್ರತಿಭಾನ್ವೇಷಣೆಯ “ನ್ಯಾಷನಲ್ ಲೆವೆಲ್ ಟೆಕ್ ಫೆಸ್ಟ್ ಟ್ಯಾಲೆಂಟ್ರಾನಿಕ್ಸ್-2022”: (National Level Tech Fest–“ TALENTRONICS-2022”) – ಮೂರು ದಿನಗಳ ಕಾರ್ಯಕ್ರಮವು ಜರುಗಲಿದೆ.
ಈ ಕಾರ್ಯಕ್ರಮದಲ್ಲಿ ವೀ.ವಿ.ಸಂಘದ ಪದಾಧಿಕಾರಿಗಳು ಅಧ್ಯಕ್ಷರಾದ ಹೆಚ್ .ಎಮ್ ಗುರುಸಿದ್ದಸ್ವಾಮಿ, ಉಪಾಧ್ಯಕ್ಷರು ಹಾಗೂ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಅಲ್ಲಂ ಚನ್ನಪ್ಪ, ಕಾರ್ಯದರ್ಶಿ ಬಸವರಾಜ.ಬಿ.ವಿ, ಸಹ ಕಾರ್ಯದರ್ಶಿ ಜೆ. ಶಾಂತವೀರನಗೌಡ, ಕೋಶಾಧಿಕಾರಿ ಗೋನಾಳ್ ರಾಜಶೇಖರಗೌಡ ಹಾಗೂ ರಾವ್ ಬಹದ್ದೂರ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರುಗಳಾದ ಎಂ.ಮಲ್ಲಿಕಾರ್ಜುನ ರೆಡ್ಡಿ, ಬಸವರಾಜ ರೂಪನಗುಡಿ, ಜಾನೆಕುಂಟೆ ಪೊoಪನ ಗೌಡ , ಕೊರ್ಲಗುಂದಿ ಬಸವನ ಗೌಡ, ಹಲಕುಂದಿ ಸತೀಶ್ ಕುಮಾರ್ , ಪ್ರಾಂಶುಪಾಲರಾದ ಡಾ|| ಟಿ. ಹನುಮಂತರೆಡಿ,್ಡ ಉಪಪ್ರಾಂಶುಪಾಲರು ಹಾಗೂ ವಿಭಾಗದ ಮುಖ್ಯಸ್ಥರು ಡಾ|| ಸವಿತ ಸೊನೊಳಿ ಇಸಿಇ ವಿಭಾಗದ ಭೋಧಕ, ಭೋಧಕೇತರರ ಸಿಬ್ಬಂದಿಯವರು ಹಾಗೂ ವಿದ್ಯಾರ್ಥಿ ವೃಂದದವರೂ ಹಾಗೂ ವಿವಿಧ ಜಿಲ್ಲೆ ಮತ್ತು ರಾಜ್ಯದ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಈ ಮೂರು ದಿನದ ಕಾರ್ಯಕ್ರದಲ್ಲಿ ವಿವಿಧ ವಿಭಾಗದ ವಿದ್ಯಾರ್ಥಿಗಳು ಪ್ರಾಜೆಕ್ಟ್ ಮಾಡೆಲ್, ಟೆಕ್ನಿಕಲ್ ಪೇಪರ್ ಪ್ರಜೆಂಟೇಷನ್, ಕೋಡಿಂಗ್, ಡಿಸೈನ್ ತಿಂಕಿಂಗ್, ಪೋಟೋಗ್ರಫಿ, ಸಿಂಗಿಂಗ್, ಚರ್ಚಾಗೋಷ್ಟಿ ಸ್ಪರ್ಧೆ, ಮತ್ತು ಇತರೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಉಪನ್ಯಾಸಕರಾದ ಪ್ರಶಾಂತ ಕೇಣಿ, ಶ್ರೀಮತಿ ಅಶ್ವಿನಿ .ಕೆ ಮತ್ತು ಶ್ರೀಮತಿ ವಾಣಿ ಹೆಚ್ ಈ ಕಾರ್ಯಕ್ರಮದ ಸಂಯೋಜಕರು ಭಾಗವಹಿಸಲಿದ್ದಾರೆ ಎಂದು ಡಾ|| ಟಿ. ಹನುಮಂತರೆಡ್ಡಿ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

0 Comments