Ticker

6/recent/ticker-posts

Ad Code

Responsive Advertisement

ಮಂತ್ರಾಲಯ ಶ್ರೀಗಳ 10ನೇ ಪಟ್ಟಾಭಿಷೇಕೋತ್ಸವದ ಸಿದ್ಧತೆ "ಪುಷ್ಪವೃಷ್ಟಿ- ಹಾಗೂ ಮುತ್ತಿನ ಅಭಿಷೇಕ"

ಜಯನಗರದ 5 ನೇ ಬಡಾವಣೆ ಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ   ಮಠದಲ್ಲಿ 16-5-2022 ಸೋಮವಾರ ದಿನ ದಂದು ಪರಮಪೂಜ್ಯ 108 ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರ 10 ನೇ ವೇದಾಂತ ಸಾಮ್ರಾಜ್ಯ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ಸಂಜೆ 6 ಗಂಟೆಗೆ ಪರಮಪೂಜ್ಯ ಗುರುಗಳ ಪಟ್ಟಾಭಿಷೇಕ ಮಹೋತ್ಸವದ  ವಿಶೇಷ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಾಗಿದೆ.


ಪೂಜ್ಯಗುರುಗಳಿಗೆ "ಪುಷ್ಪವೃಷ್ಟಿ- ಮುತ್ತಿನಅಭಿಷೇಕವೂನೆರವೇರ ಲಿದೆ ಎಂದು ಶ್ರೀಮಠದ ವ್ಯವಸ್ಥಾಪಕರಾದ ಆರ್ , ಕೆ ವಾದೀಂದ್ರ ಆಚಾರ್ಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು  ಈ ಸಂದರ್ಭದಲ್ಲಿ ಶ್ರೀಪಾದರ  ಪೂರ್ವಾಶ್ರಮದ   ತಂದೆಯವರಾದ ಡಾಕ್ಟರ್ ಪಂಡಿತ ಕೇಸರಿ ರಾಜಾ, ಎಸ್ ಗಿರಿಆಚಾರ್ಯರು ಹಾಗೂ ಇತರೆ ಗಣ್ಯ ವ್ಯಕ್ತಿಗಳು ಉಪಸ್ಥಿತಿ ಇರುವರು.

 ಮುತ್ತಿನ ಅಭಿಷೇಕ ಪುಷ್ಪವೃಷ್ಟಿ ನಂತರ ಪರಮ ಪೂಜ್ಯ ಶ್ರೀ ಪಾದರು ಭಕ್ತರಿಗೆ ಅನುಗ್ರಹ ಸಂದೇಶವನ್ನು ನೀಡಲಿದ್ದಾರೆ ಭಕ್ತಾದಿಗಳು ಈ ಮಹೋತ್ಸವಕ್ಕೆ ಆಗಮಿಸಿ ಗುರುಗಳ ದರ್ಶನ ಪಡೆದು ಫಲ ಮಂತ್ರಾಕ್ಷತೆಯನ್ನು ಸ್ವೀಕರಿಸಿ ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿ.

Post a Comment

0 Comments

Ad Code

Responsive Advertisement