ಮಕ್ಕಳು ನಮ್ಮ ನಡುವೆ ಓಡಾಡುವ ಚೇತನಗಳು
ಬಳ್ಳಾರಿ,ಮೇ18: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯುಕ್ತಾಶ್ರಯದಲ್ಲಿ ಸಂಜಯಗಾಂಧಿ ಪಾಲಿಟೆಕ್ನಿಕ್ ಕಾಲೇಜ್‍ನಲ್ಲಿ ಮಕ್ಕಳಿಗೆ ಮತ್ತು ಸಿಬ್ಬಂದಿಗಳಿಗೆ “1098 ಮಕ್ಕಳ ಸಹಾಯವಾಣಿ ಮಾಸಚಾರಣೆ ಆಚರಿಸಲಾಯಿತು.
ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸತೀಶ ಬಾಳೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು ಮತ್ತು ಜಾಥಾಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಂಕಷ್ಟದಲ್ಲಿರುವ ಮಕ್ಕಳ ರಕ್ಷಣೆಗಾಗಿ ಕರೆ ಮಾಡಿ ಮಕ್ಕಳ ಸಹಾಯವಾಣಿ 1098 ಹಾಗೂ ಎಲ್ಲಾ ಇಲಾಖೆಗಳಿಂದ, ಸಂಘ ಸಂಸ್ಥೆಗಳ ಸಹಕಾರದಿಂದ ಮಕ್ಕಳಿಗಾಗಿ ಇರುವ ಮಕ್ಕಳ ಸಹಾಯವಾಣಿ 1098 ವ್ಯಾಪಕ ಪ್ರಚಾರವು ಮಾಡಬೇಕಾಗಿದ್ದು, ಎಲ್ಲಾ ಇಲಾಖೆಗಳ ಜವಾಬ್ದಾರಿಯಾಗಿದೆ ಹಾಗೂ ಪ್ರತಿಯೊಂದು ಶಾಲೆಗಳಲ್ಲಿ ಮಕ್ಕಳಿಗೆ ಮಕ್ಕಳ ಸಹಾಯವಾಣಿ 1098ರ ಮಾಹಿತಿ ಒದಗಿಸುವುದು ತುಂಬಾ ಅವಶ್ಯಕವಾಗಿದೆ ಎಂದು ತಿಳಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಎಸ್.ರಾಜಾನಾಯ್ಕ ಅವರು ಮಾತನಾಡಿ, ಮಕ್ಕಳು ನಮ್ಮ ನಡುವೆ ಓಡಾಡುವ ಚೇತನಗಳು, ಮಕ್ಕಳು ಬಹುತೇಕ ಎಲ್ಲಾ ಸಮುದಾಯಗಳ ಆಸ್ತಿ, ಮಕ್ಕಳು ನೆಮ್ಮದಿ ಸುಖ, ಸಂತೋಷ, ಕಲಿಯುವ ವಾತಾವರಣದಲ್ಲಿ ಬೆಳೆದು ಬಂದರೆ ಅಂತಹ ಮಕ್ಕಳಿರುವ ಸಮುದಾಯಕ್ಕೆ ಅರ್ಥ ಪೂರ್ಣ ಭವಿಷ್ಯವಿರುತ್ತದೆ ಎಂದರು.
ಮಕ್ಕಳು ಹುಟ್ಟಿನಿಂದ 18 ವರ್ಷದೊಳಗಿನ ಮಕ್ಕಳು ಬಾಲ್ಯವನ್ನು ಅನುಭವಿಸಬೇಕು. 1989ರಲ್ಲಿ ವಿಶ್ವಸಂಸ್ಥೆ ಮುಂದಿಟ್ಟ ಈ ವಿಚಾರಲ್ಲಿ ಜಗತ್ತಿನ ಬಹುತೇಕ ರಾಷ್ಟ್ರಗಳು ಒಪ್ಪಿಕೊಂಡಿವೆ. ಭಾರತವು ಸಹ 1992 ಡಿಸೆಂಬರ್-12 ರಂದು ಮಕ್ಕಳ ಹಕ್ಕುಗಳ ಒಡಂಬಡಿಕೆಗಳ ಸಹಿಹಾಕಿ ಒಪ್ಪಿಕೊಂಡಿದೆ. ಮಕ್ಕಳ ಹಕ್ಕುಗಳ ಒಳಂಬಡಿಕೆಗಳು ಇವೆ. ಮಕ್ಕಳಿಗೆ ಒಟ್ಟು 54 ಪರಿಚ್ಛೇಧಗಳಿವೆ. ಸುಸ್ಥಿರ ಅಭಿವೃದ್ಧಿ ಆಗಬೇಕಾದರೆ ಮೂಲಭೂತ ಹಕ್ಕುಗಳಾಗಿ ಬದುಕುವ ಹಕ್ಕು, ರಕ್ಷಣೆಯ ಹಕ್ಕು ಅಭಿವೃದ್ಧಿ ಹೊಂದುವ ಹಕ್ಕು ಹಾಗೂ ಭಾಗವಹಿಸುವ ಹಕ್ಕು ಅಗತ್ಯ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಕಲಾವತಿ ಅವರು ಮಾತನಾಡಿ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಮಕ್ಕಳ ಪ್ರಮಾಣ ಶೇ.41ರಷ್ಟು. ಅದರೆ ಮಕ್ಕಳಿಗಾಗಿ ಮೀಸಲಿಡುವ ಹಣ ತೀರಾ ಕಡಿಮೆ. ಜೀವಂತವಾಗಿ ಹುಟ್ಟಿದ ಒಂದು ಸಾವಿರ ಮಕ್ಕಳಲ್ಲಿ 37 ಮಕ್ಕಳು ಒಂದು ವರ್ಷ ಪೂರೈಸುವದರೊಂದಿಗೆ ಸಾವನ್ನಪಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಜಯಗಾಂಧಿ, ಪಾಲಿಟೆಕ್ನಿಕ್‍ಕಿನ ಕಾಲೇಜಿನ ನಿರ್ದೇಶಕರಾದ ನಮೃತ ಅವರು ಮಕ್ಕಳು ಬೆಳೆದು ಸಮುದಾಯಕ್ಕೆ ಸಹಾಯಕರಾಗಿ ರಾಜ್ಯ ಮತ್ತು ದೇಶವನ್ನು ಮುನ್ನಡೆಸುವವರು ಆಗಬೇಕು ಎಂಬುದು ಎಲ್ಲಾ ಸಮುದಾಯಗಳ ಆಶಯ. ಇಂತಹ ಆಶಯ ಅರ್ಥ ಪೂರ್ಣವಾಗಿ ಸಫಲವಾಗಬೇಕಾದರೆ ಆ ಸಮುದಾಯಗಳು ಮಕ್ಕಳ ಬಾಲ್ಯವನ್ನು ಸಂಪೂರ್ಣವಾಗಿ ಅನುಭವಿಸಬೇಕು ಎಂದರು.ವರಲ್ಡ್‍ವಿಷನ್ ಸಂಸ್ಥೆಯ ಪ್ರೇಮಲತ, ಡಾನ್‍ಬಾಸ್ಕೋ ಸಂಸ್ಥೆಯ ಜಿಲ್ಲಾ ಸಂಯೋಜಕ ಗಣೇಶ,ಮಕ್ಕಳು ಮತ್ತು ಕಾಲೇಜಿನ ಸಿಬ್ಬಂದಿ ಇದ್ದರು.

0 Comments