ಬಳ್ಳಾರಿ,ಮೇ 21: ಮೋಕ(ಭೈರದೇವನ ಹಳ್ಳಿ) ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯು 2021-22ನೆಯ ಸಾಲಿನ ಎಸ್.ಎಸ್.ಎಲ್.ಸಿ ಯಲ್ಲಿ ಶೇ.100 ಫಲಿತಾಂಶ ಪಡೆದುಕೊಂಡಿದ್ದು, ಒಟ್ಟು 48 ವಿದ್ಯಾರ್ಥಿಗಳಲ್ಲಿ 44 ಡಿಸ್ಟಿಂಕ್ಷನ್ ಮತ್ತು 4 ಜನ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಅನುಸೂಯಾ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಫಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆದ ಎಮ್.ಸಂದೀಪ 612(97.92), ದ್ವಿತೀಯ ಎಲ್.ಸಿ.ಹರೀಶ 611(97.76) ಹಾಗೂ ತೃತೀಯ ಸ್ಥಾನ ಪಿ.ಕುಮಾರಸ್ವಾಮಿ 607 (97.12), ಎಸ್.ವಿನೋದ ನಾಯ್ಕ 605(96.80), ಯು.ಪ್ರವೀಣ 602(96.32), ಟಿ.ಸಂಧ್ಯಾಬಾಯಿ 600(96) ಅಂಕಗಳನ್ನು ಪಡೆದು ವಸತಿ ಶಾಲೆಗೆ ಮತ್ತು ಗ್ರಾಮಕ್ಕೆ ಹಾಗೂ ಪೋಷಕ ಪ್ರತಿನಿಧಿಗಳಿಗೆ ಕೀರ್ತಿ ತಂದಿರುವುದು ಅತ್ಯಂತ ಹರುಷದಾಯಕವಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ತೇಜ್ ಆನಂದ ರೆಡ್ಡಿ ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಭೈರದೇವನÀಹಳ್ಳಿ ಹಾಗೂ ಮೋಕ ಗ್ರಾಮದ ಸದಸ್ಯರು, ಪ್ರತಿನಿಧಿಗಳು, ಅಧಿಕಾರಿಗಳು, ಹಾಗೂ ಜಿಲ್ಲಾ ಸಮನ್ವಯ ಅಧಿಕಾರಿಗಳು ಸೇರಿದಂತೆ ಶಾಲಾ ಸಿಬ್ಬಂದಿ ವರ್ಗವು ಮಕ್ಕಳ ಸಾಧನೆಗೆ ಶುಭ ಹಾರೈಸಿದ್ದಾರೆ.
.jpg)
0 Comments