ಗುತ್ತಿಗೆದಾರರ ಬಂಧು ಶ್ರೀ ಸಂತೋಷ್ ಪಾಟೀಲ್ ಅವರ ಆತ್ಮಹತ್ಯೆ ಕುರಿತು ಸಿಬಿಐ ತನಿಖೆ ನಡೆಸಬೇಕು ಇಲ್ಲವೇ ಹೈಕೋರ್ಟ್ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ಸ್ ಸಂಘ ಆಗ್ರಹಪಡಿಸಿದೆ. ಕಾಮಗಾರಿಗೆ ಬರಬೇಕಾದ ಮೊತ್ತವನ್ನು ಸರಕಾರ ಕೂಡಲೇ ಬಿಡುಗಡೆ ಮಾಡಬೇಕು. ಅಲ್ಲದೇ ಅವರ ಕುಟುಂಬಕ್ಕೆ ಕನಿಷ್ಠ 2 ಕೋಟಿ ರೂ. ಪರಿಹಾರ ನೀಡಬೇಕು ಎಂದು ಅಸೋಸಿಯೇಷನ್ ಒತ್ತಾಯ ಮಾಡಿದೆ.
ಕೆ.ಎಸ್.ಸಿ.ಎ. ಪದಾಧಿಕಾರಿಗಳ ತುರ್ತು ಸಭೆ ನಡೆಸಿ, ಅವರ ನಿಧನಕ್ಕೆ ಸಂತಾಪ ಸೂಚಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಅಸೋಸಿಯೇಷನ್ ಅಧ್ಯಕ್ಷ ಕೆಂಪಣ್ಣ ಅವರು ಮಾತನಾಡಿ, ಸಂತೋಷ್ ಪಾಟೀಲ್ ಅವರ ಸಾವಿಗೆ ಸರಕಾರವೇ ಕಾರಣ ಎಂದು ಆರೋಪಿಸಿ, ಸರಕಾರ ಹೇಗೆ ಗುತ್ತಿಗೆದಾರರನ್ನು ಶೋಷಣೆ ಮಾಡುತ್ತಿವೆ ಎನ್ನುವುದನ್ನೂ ತಿಳಿಸಿದರು.
ಲಂಚ ಅಥವಾ ಕಮೀಷನ್‌ಗೆ ಸಾಕ್ಷö್ಯ ಕೇಳುವುದು ಹಆಸ್ಯಾಸ್ಪದ ಸಂಗತಿ. ಲಂಚವನ್ನು ಕೊಡುವವರು ಅಥವಾ ತೆಗೆದುಕೊಳ್ಳುವವರು ದಾಖಲೆ ಮೂಲಕ ವ್ಯವಹರಿಸುವುದಿಲ್ಲ. ಯಾವ ರೂಪದಲ್ಲೋ ವ್ಯವಹಾರ ನಡೆದರೂ ಗುತ್ತಿಗೆದಾರರನ್ನು ಏಕೆ ಲಂಚ ಕೊಡುತ್ತೀರಿ ಎಂದು ಎಲ್ಲರೂ ಪ್ರಶ್ನಿಸುತ್ತಾರೆ. ಲಂಚವನ್ನು ಏಕೆ ತೆಗೆದುಕೊಳ್ಳುತ್ತೀರಿ ಎಂದು ರಾಜಕಾರಣಿಗಳನ್ನು ಏಕೆ ಪ್ರಶ್ನೆ ಮಾಡುವುದಿಲ್ಲ? ಇದು ಬಹು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಸಂತೋಷ್ ಪಾಟೀಲ್ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಯಾಗಲೇಬೇಕು. ಕುಟುಬಂಕ್ಕೆ ನ್ಯಾಯ ಒದಗಿಸಬೇಕು ಎಂದು ಈ ಸಂದರ್ಭದಲ್ಲ ಒಕ್ಕೊರಲಿನಿಂದ ಆಗ್ರಹಿಸಿದರು. ಭವಿಷ್ಯದಲ್ಲಿ ಇಂತಹ ಪ್ರಕರಣಗಳು ಮರುಕಳುಹಿಸುವ ಹಾಗೆ ಸರಕಾರ ಎಚ್ಚೆತ್ತುಕೊಳ್ಳಬೇಕಿದೆ ಎಂದರು.
.jpeg)
0 Comments