ಬೆಂಗಳೂರು : ಬೆಂಗಳೂರಿನ ಜಾಲಹಳ್ಳಿಯ ಬಿಇಎಲ್ ಇಂಗ್ಲೀಷ್ ಪ್ರೈಮರಿ ಶಾಲೆ ಹಾಗೂ ಬಿಇಎಲ್ ಸಿಬಿಎಸ್ ಸಿ ಶಾಲೆಯಲ್ಲಿ 2022ರ,ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿತ್ತು.ಈ ಸಮ್ಮರ್ ಕ್ಯಾಂಪ್ ನ್ನು ಡಿಜಿಎಂ ಎಂಆರ್, ಎಂಎಸ್ ಹಾಗೂ ಎಡಿಎಸ್ ಎನ್ ಶ್ರೀಮತಿ ಲವಿನಾ ಮೈಕಲ್ ಉದ್ಘಾಟಿಸಿದರು.ಈ ವೇಳೆ ಮಾತನಾಡಿದ ಲವಿನಾ ಮೈಕಲ್,ಜವಹರಲಾಲ್ ನೆಹರು ಅವ್ರ ಜೀವನದ ಮೌಲ್ಯಗಳನ್ನು ತಿಳಿಸಿದ್ರು.ಮಕ್ಕಳ ಪ್ರತಿಭೆ ಹೊರಹೊಮ್ಮಲು ಈ ಬೇಸಿಗೆ ಶಿಬಿರಗಳು ಸಹಾಯಕವಾಗಿವೆ ಎಂದ್ರು.
ಈ ಬೇಸಿಗೆ ಶಿಬಿರದಲ್ಲಿ ಮೆಹೆಂದಿ,ಕ್ರಾಫ್ಟ್,ಪೇಟಿಂಗ್,ಅರೋಬಿಕ್ಸ್, ಡ್ಯಾನ್ಸ್,ಜುಂಬಾ,ವೇದಿಕ್ ಮ್ಯಾಥ್ಸ್,ಸಾಂಗ್ ಸೇರಿದಂತೆ ಹಲವು ಚಟುವಟಿಕೆಗಳನ್ನು ಸಂಪನ್ಮೂಲ ವ್ಯಕ್ತಿಗಳಿಂದ ಹೇಳಿಕೊಡಲಾಗುವುದು.ಮೊಬೈಲ್ ದಾಸರಾಗಿರೋ ಮಕ್ಕಳ ಮನಸ್ಥಿತಿ ಬದಲಿಸಿ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಲು ಈ ಶಿಬಿರಗಳು ಸಹಾಯಕವಾಗಿವೆ.ಈ ಶಿಬಿರ ಇಂದಿನಿಂದ 13 ನೇ ತಾರೀಖಿನವರೆಗೆ ಇರಲಿದೆ.ಉದ್ಘಾಟನೆ ವೇಳೆ ಮಕ್ಕಳ ನೃತ್ಯ,ಯೋಗ ಎಲ್ಲರ ಗಮನ ಸೆಳೆಯಿತು.
ಈ ಕಾರ್ಯಕ್ರಮದಲ್ಲಿ ಬಿಇಇಐ ಕಾರ್ಯದರ್ಶಿ ನರಸಿಂಹಕುಮಾರ್,ಬಿಇಇಐ ಕೋಶಾಧ್ಯಕ್ಷೆ ಕಲ್ಯಾಣಿ ಬಿ,ಬಿಇಇಐ ಮೇಂಬರ್
ರಂಜನ್ ಕುಮಾರ್ ಬಾರಿಕ್,ಬಿಇಇಐ ಕೋ ಆರ್ಡಿನೇಟರ್
ಗೋಪಾಲ್ ಕೃಷ್ಣ ,ಬಿಇಇಐ ಆಡಳಿತಾಧಿಕಾರಿ ರಘುಪತಿ ಸೇರಿದಂತೆ ಶಾಲಾ ಶಿಕ್ಷಕ ವೃಂದ ವೇದಿಕೆಯಲ್ಲಿದ್ದರು.
.jpeg)






.jpeg)



0 Comments