ಬೆಂಗಳೂರಿನ ವಿದ್ಯಾರಣ್ಯಪುರದ ಹೆಸರಾಂತ ಸಂಸ್ಥೆಯಾದ ಶ್ರೀರಾಮ ಭಕ್ತ ಸಭಾ ವತಿಯಿಂದ ಮಲ್ಲೇಶ್ವರಂ 5ನೇ ಮುಖ್ಯರಸ್ತೆಯಲ್ಲಿರುವ ಶ್ರೀ ಶ್ರೀಕಂಠೇಶ್ವರ ಭವನದಲ್ಲಿ ಏಪ್ರಿಲ್ 2 ರಿಂದ ಜರುಗುತ್ತಿರುವ 116ನೇ ಶ್ರೀರಾಮೋತ್ಸವ ಕಾರ್ಯಕ್ರಮ ದಲ್ಲಿ ಇಂದು (ಏಪ್ರಿಲ್ 5) ಕಿಶೋರಿಗಳಾದ ಕು|| ಅನಘಾ ಹೆಚ್ ಜೆ, ಕು|| ಅನ್ವಿತಾ ಸಾವಿತ್ರಿ ಮತ್ತು ಕು|| ಭೂಮಿಕಾ ಎಸ್ ಇವರುಗಳು ನಡೆಸಿಕೊಟ್ಟ "ದಾಸರ ಪದಗಳ ಗಾಯನ" ಕಾರ್ಯಕ್ರಮದಲ್ಲಿ, "ಮೊದಲ್ವಂದಿಪೆ ನಿನಗೆ ಗಣನಾಥ" ಎಂಬ ವಿಘ್ನೇಶ್ವರನ ಕೃತಿಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿ,"ತುಂಗಾ ತೀರದಿ ನಿಂತ", "ಘಟಿಕಾಚಲದಿ ನಿಂತ", "ಶಿವನೇ ನಾ ನಿನ್ನ ಸೇವಕನಯ್ಯಾ", "ನಿಲ್ಲೆ ನಿಲ್ಲೆ ಕೊಲ್ಹಾಪುರ ದೇವಿ", "ದೃಷ್ಟಿ ನಿನ್ನ ಪಾದದಲ್ಲಿ", "ದಾಸನೆನಿಸೋ ನಿನ್ನ" , "ಕ್ಷೀರಸಾಗರಕೆ ಶ್ರೀರಮಣ ಬಂದಂತೆ" (ಉಗಾಭೋಗ), "ರಾಮ ರಾಮ ರಾಮ ಸೀತಾ", "ಪಿಳ್ಳಂಗೋವಿಯ ಚೆಲ್ವ ಕೃಷ್ಣನ", "ಗಾನಕೇ ಸುಲಭವು ರಾಮನಾಮವು", "ಸಾಗಿಬಾರಯ್ಯಾ", "ತಾತ್ತಧಿಮಿತ", "ಕಾಳಿಂಗನ ಮೆಟ್ಟಿ", "ತೊಳಸದಕ್ಕಿಯ ತಿಂಬ ಕಿಲುಬು ತಳಿಗೆಯಳುಂಬ" ಹೀಗೇ ಇನ್ನೂ ಅಪರೂಪ ಹಾಡುಗಳನ್ನು ಮಕ್ಕಳು ಸುಶ್ರಾವ್ಯವಾಗಿ ಹಾಡಿದ್ದು, ನೆರೆದಿದ್ದ ಸಂಗೀತಾಭಿಮಾನಿಗಳ ಮನಸೂರೆಗೊಂಡಿತು.
ವಾದ್ಯ ಸಹಕಾರದಲ್ಲಿ, ಶ್ರೀ ಶ್ರೀನಿವಾಸ ಕಾಖಂಡಕಿ ಅವರು ತಬಲಾ ವಾದನದಲ್ಲಿ, ಶ್ರೀ ಅಮಿತ್ ಶರ್ಮಾ ಅವರು ಕೀ-ಬೋರ್ಡ್ ನಲ್ಲಿ ಸಾಥ್ ನೀಡಿದರು.
ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸಿ ವಿ. ವೆಂಕಟೇಶ್ ಅವರು, ಮಕ್ಕಳಿಗೆ ಪ್ರಸಾದ ಮತ್ತು ಪ್ರಶಸ್ತಿ ಪತ್ರ ನೀಡಿ, ಮಕ್ಕಳು ಇನ್ನೂ ಹೆಚ್ಚು ಹೆಚ್ಚು ಅಭಿವೃದ್ಧಿಯಾಗಲಿ ಎಂದು ಹಾರೈಸಿದರು.
-ವರದಿ : ಡಿ. ಎಸ್. ರಾವ್.

0 Comments