ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರದ ಕಮಲನಗರದಲ್ಲಿ ದಿ.ಮಹದೇವಪ್ಪ ಪ್ರತಿಷ್ಠಾನ, ಇಂದಿರಾ ಹೆಲ್ತ್ ಕೇರ್ ಮತ್ತು ವಿಜಯ ನೇತ್ರಾಲಯ ಸಹಯೋಗದಲ್ಲಿ ನೂರಕ್ಕೂ ಹೆಚ್ಚು ಜನರಿಗೆ ಉಚಿತ ಕಣ್ಣಿನಪೂರೆ ಶಸ್ತ್ರ ಚಿಕಿತ್ಯೆ ಮತ್ತು ಕೊವಿಡ್-19 ಪರೀಕ್ಷೆ ಮಾಡಲಾಯಿತು. ಆಡಳಿತ ಪಕ್ಷದ ಮಾಜಿ ನಾಯಕ ಎಮ್.ಶಿವರಾಜುರವರು,ವಿಜಯ ನೇತ್ರಾಲಯದ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಎಮ್.ಶಿವರಾಜುರವರು ಮಾತನಾಡಿ ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಬಡವರು,ಮಧ್ಯಮವರ್ಗದ ಕುಟುಂಬದವರು ಹೆಚ್ಚಿನ ಜನಸಂಖ್ಯೆಯಲ್ಲಿ ವಾಸವಿದ್ದಾರೆ .
ಮನುಷ್ಯನಿಗೆ ಕಣ್ಣು ಬಹಳ ಮುಖ್ಯ ಖಾಸಗಿ ಆಸ್ಪತ್ರೆಯಲ್ಲಿ ಕಣ್ಣಿನಪೂರೆ ಶಸ್ತ್ರ ಚಿಕಿತ್ಯೆಗೆ 50ಸಾವಿರ ರೂಪಾಯಿ ವೆಚ್ಚವಾಗುತ್ತದೆ .ಕಡುಬಡವರು,ಕೂಲಿ ಕಾರ್ಮಿಕರು ಕುಟುಂಬದವರು ಇಷ್ಟು ವೆಚ್ಚ ಭರಿಸಲು ಅಸಾಧ್ಯ ಅದ್ದರಿಂದ ದಿ.ಮಹದೇವಪ್ಪ ಪ್ರತಿಷ್ಠಾನದ ವತಿಯಿಂದ ಕಣ್ಣಿನ ಶಸ್ತ್ರ ಚಿಕಿತ್ಯೆಯನ್ನು ವಿಜಯ ನೇತ್ರಾಲಯ ಸಹಯೋಗದಲ್ಲಿ ಸಂಪೂರ್ಣ ಉಚಿತವಾಗಿ ಮಾಡಲಾಗುತ್ತಿದೆ.
ಇಂದಿರಾ ಹೆಲ್ತ್ ಕೇರ್ ನಲ್ಲಿ ಪ್ರತಿ ದಿನ ಸಾರ್ವಜನಿಕರಿಗೆ ಉಚಿತವಾಗಿ ವೈದ್ಯಕೀಯ ಇ.ಸಿ.ಜಿ.ಸಕ್ಕರೆ ಖಾಯಿಲೆ ಮತ್ತು ಬಿ.ಪಿ.ಜನರಲ್ ಚಕ್ ಅಪ್ ಗಳನ್ನು ತಜ್ಞ ವೈದ್ಯರುಗಳಿಂದ ಪರೀಕ್ಷೆ ಮಾಡಲಾಗುತ್ತಿದೆ.
ಇಂದು ಹಿರಿಯ ನಾಗರಿಕರಿಗೆ ಕೊವಿಡ್-19ಪರೀಕ್ಷೆ ಮಾಡಿ,ಶಸ್ತ್ರ ಚಿಕಿತ್ಯೆ ಮಾಡಲಾಗುವುದು ಎಂದು ಹೇಳಿದರು.



0 Comments