ಬಳ್ಳಾರಿ ಏ 29. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಹೆಚ್.ಹೋಸಳ್ಳಿ ಗ್ರಾಮದಲ್ಲಿ ಏಪ್ರಿಲ್ 03 ರಂದು ಗಾಳಿ ಮಳೆಗೆ ಸಿಡಿಲು ಬಡಿದು ಗಂಗಮ್ಮ ಎಂಬ ಮಹಿಳೆ ಸಾವನ್ನಪ್ಪಿದ್ದಳು ಮಾನ್ಯ ಶಾಸಕರಾದ ಎಂ.ಎಸ್.ಸೋಮಲಿಂಗಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ತಮ್ಮ ವೈಯಕ್ತಿಕ ಧನ ಸಹಾಯ ಮಾಡಿ ಮಾನ್ಯ ತಹಶಿಲ್ದಾರ ಮಂಜುನಾಥ ಅವರಿಗೆ ಸರ್ಕಾರ ದಿಂದ ಪರಿಹಾರ ನೀಡುವಂತೆ ಹೇಳಿದ್ದರು.
ಇಂದು ಹೆಚ್.ಹೋಸಳ್ಳಿ ಗ್ರಾಮಕ್ಕೆ ಬಿಜೆಪಿ ತಾಲೂಕ ಯುವಮೋರ್ಚ ಅಧ್ಯಕ್ಷ, ಶಾಸಕ ಸೋಮಲಿಂಗಪ್ಪನವರ ಪುತ್ರ, ಜನಪ್ರಿಯ ಯುವನಾಯಕರಾದ ಸಿದ್ದಪ್ಪನವರು ತಹಶಿಲ್ದಾರ ಮಂಜುನಾಥ ಅವರ ಜೊತೆ ಭೇಟಿ ನೀಡಿ ಸಿಡಿಲು ಬಡಿದು ಸಾವನ್ನಪ್ಪಿದ ಗಂಗಮ್ಮ ನ ಮಕ್ಕಳಿಗೆ ಮತ್ತು ಗಂಡನಿಗೆ 5 ಲಕ್ಷ ಆದೇಶ ಪತ್ರ ನೀಡಲಾಯಿತು. (ಇವರ ಬ್ಯಾಂಕಿನ ಖಾತೆ ಗೆ ಜಮಾ ಆಗಿದೆ) ಈ ಸಂದರ್ಭದಲ್ಲಿ ಊರಿನ ಹಿರಿಯ ಮುಖಂಡರಾದ ಶೇಕಪ್ಪ, ರಾಘವೇಂದ್ರ ರೆಡ್ಡಿ, ಎರ್ರಿಸ್ವಾಮಿ, ಶ್ರೀಶೈಲಪ್ಪ, ಮಲ್ಲಯ್ಯ, ಪರಶುರಾಮಪ್ಪ , ತಿಮ್ಮಪ್ಪ ಮುಂತಾದವರು ಇದ್ದರು.

0 Comments