Ticker

6/recent/ticker-posts

Ad Code

Responsive Advertisement

Flash News: ನಗರದ ಸಿವಿಲ್ ಕೋರ್ಟ್ ಬಳಿ ಟಿಕೆಟ್ ಕಾಯ್ದಿರಿಸುವ ಕೇಂದ್ರ ಪುನಾರಂಭ

ಬೆ0ಗಳೂರು, ಮಾ.04: ದಿನಾಂಕ 07-03-2022ರಿಂದ ನಗರದ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿರುವಂತ ಗಣಕೀಕೃತ ರೈಲ್ವೆ ಟಿಕೆಟ್ ಕಾಯ್ದಿರಿಸುವಿಕೆ ಕೇಂದ್ರ ಪುನರಾರಂಭವಾಗಲಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ. ಅಲ್ಲದೇ ಕೋಲಾರದಲ್ಲಿಯೂ ಕೂಡ ಇದೇ ದಿನಾಂಕದ0ದು ಗಣಕೀಕೃತ ಪ್ರಯಾಣಿಕರ ಟಿಕೆಟ್ ಕಾಯ್ದಿರಿಸುವ ಕೇಂದ್ರದ ಸಮಯವನ್ನು ಪರಿಷ್ಕರಿಸಲಾಗಿದೆ.

ಈ ಕುರಿತಂತೆ ನೈರುತ್ಯ ರೈಲ್ವೆಯಿಂದ ಅಧಿಕೃತ ಮಾಹಿತಿ ಬಂದಿದ್ದು, ಬೆಂಗಳೂರಿನ ನಗರ ಸಿವಿಲ್ ನ್ಯಾಯಾಲಯದಲ್ಲಿರುವ ಗಣಕೀಕೃತ ಪ್ರಯಾಣಿಕರ ಟಿಕೆಟ್ ಕಾಯ್ದಿರಿಸುವ ಕೇಂದ್ರವು 07.03.2022 ರಿಂದ ಪುನಾರಂಭವಾಗಲಿದೆ.

ಕೆಲಸದ ಸಮಯವು ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 09.30 ರಿಂದ ಮಧ್ಯಾಹ್ನ 03.30 ಗಂಟೆಗಳವರೆಗೆ ಇರುತ್ತದೆ. ಮಧ್ಯಾಹ್ನ 01.15 ರಿಂದ 01.30 ಗಂಟೆಗಳ ವರೆಗೆ ಊಟದ ವಿರಾಮ.ಭಾನುವಾರ ರಜೆ ಎಂದು ತಿಳಿಸಿದೆ.

ಇನ್ನೂ ಮಧ್ಯಾಹ್ನ ಕೋಲಾರದಲ್ಲಿ ಪ್ರಯಾಣಿಕರ ಕಾಯ್ದಿರಿಸುವಿಕೆ ವ್ಯವಸ್ಥೆಗೆ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, 07.03.2022 ರಿಂದ ಜಾರಿಗೆ ಬರುವಂತೆ ಕೋಲಾರದಲ್ಲಿರುವ ಗಣಕೀಕೃತ ಪ್ರಯಾಣಿಕರ ಟಿಕೆಟ್ ಕಾಯ್ದಿರಿಸುವ ಕೇಂದ್ರದ ಸಮಯವನ್ನು ಪರಿಷ್ಕರಿಸಲು ಸಹ ಈ ಮೂಲಕ ನಿರ್ಧರಿಸಲಾಗಿದೆ.

ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 10.00 ಗಂಟೆಯಿ0ದ ಸಂಜೆ 05.00 ಗಂಟೆಗಳವರೆಗೆ ಕೆಲಸದ ಸಮಯವಿರುತ್ತದೆ. ಮಧ್ಯಾಹ್ನ 01.00 ಗಂಟೆಯಿ0ದ 02.00 ಗಂಟೆಯವರೆಗೆ ಊಟದ ವಿರಾಮ. ಭಾನುವಾರ ರಜೆ ಎಂದು ತಿಳಿಸಿದೆ.

ಪ್ರಸ್ತುತ, ಕಾಯ್ದಿರಿಸುವ ಕೇಂದ್ರವು ಬೆಳಿಗ್ಗೆ 08.00 ರಿಂದ ಮಧ್ಯಾಹ್ನ 02.00 ಗಂಟೆಗಳವರೆಗೆ ಕಾರ್ಯ ನಿರ್ವಹಿಸುತ್ತಿದೆ ಎಂದು ನೈರುತ್ಯ ರೈಲ್ವೆ ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

Varthajala, Daily, Bengaluru

Post a Comment

0 Comments

Ad Code

Responsive Advertisement