ಬೆಂಗಳೂರು, ಮಾ.03: 13ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಅವರು ಅದ್ಧೂರಿ ಚಾಲನೆ ನೀಡಿದರು. ಗುರುವಾರ ಸಂಜೆ ಆಯೋಜಿತವಾಗಿದ್ದ ವರ್ಣರಂಜಿತ ಸಮಾರಂಭದಲ್ಲಿ ಬೆಂಗಳೂರು 13ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಅದ್ಧೂರಿ ಚಾಲನೆ ದೊರೆಯಿತು.
ಸಿ.ಎಂ. ಬೊಮ್ಮಾಯಿ ಅವರು ದೀಪ ಬೆಳಗಿಸುವ ಮೂಲಕ ಸಿನಿಮೋತ್ಸವ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಿನೆಮೋತ್ಸವವನ್ನು ವೇದಿಕೆಯಲ್ಲಿರುವ ಎಲ್ಲರೂ ಸಂತೋಷದಿ0ದ ಉದ್ಘಾಟನೆಗೊಳಿಸಿದ್ದೇವೆ. ಕೋವಿಡ್ ತೊಂದರೆಗಳು ಹಿನ್ನೆಲೆಗೆ ಸರಿದ ವಾತಾವರಣದಲ್ಲಿ ಸಿನೆಮೋತ್ಸವ ನಡೆಯುತ್ತಿದೆ. ಈ ಸಮಾರಂಭ ನಡೆಯುತ್ತಿರುವ ಸಭಾಂಗಣ ತುಂಬಿದೆ. 1934 ರಲ್ಲಿ ಇಂದೇ ದಿನ ಅಂದರೆ ಮಾರ್ಚ್ 03 ರಂದು ಕನ್ನಡದಲ್ಲಿ ಸತಿ ಸುಲೋಚನಾ ಸಿನೆಮಾ ತೆರೆಕಂಡಿತು. ಈ ದಿನವನ್ನು ವಿಶ್ವ ಕನ್ನಡ ಸಿನೆಮಾ ದಿನವೆಂದು ಘೋಷಣೆ ಮಾಡುತ್ತಿದ್ದೇನೆ ಎಂದರು.
ಕಡಿಮೆ ದಿನಗಳಲ್ಲಿ ಚಿತ್ರೋತ್ಸವ ಆಗಿದೆ.ಇಂದು ಡಿಜಿಟಲ್ ವರ್ಲ್ಡ್ ನಿರ್ಮಾಣವಾಗಿದೆ. ಇಂದು ಎಂಥಾ ತಂತ್ರಜ್ಞಾನ ಬಂದಿದೆ ಎಂದರೆ ದರ್ಶನ್ ಅವರು ಸಮಾರಂಭಕ್ಕೆ ಬಾರದಿದ್ದರೂ ಅವರು ಬಂದ0ತೆ 4ಡಿ ಯಲ್ಲಿ ತೋರಿಸಬಹುದು. ಚಿತ್ರರಂಗದಲ್ಲಿಯೂ ಅಪಾರ ತಂತ್ರಜ್ಞಾನ ಬಂದಿದೆ. ಕನ್ನಡ ಚಿತ್ರರಂಗ ಉಳಿಸಬೇಕಾದತೆ ವಿಶೇಷ ಶ್ತಮ ಹಾಕಬೇಕಾಗುತ್ತದೆ. ಸ್ಪೆಶಲ್ ಎಫೆಕ್ಟ್ ಜೊತೆಗೆ ಸ್ಪೆಷಲ್ ಎಫರ್ಟ್ ಬೇಕು. ಕನ್ನಡ ಉಳಿಯಲು ಬೆಳೆಯಲು ಸಿನೆಮಾ ಸಹಾಯವೂ ಅಗತ್ಯ. ಚಿತ್ರಮಂದಿರಗಳು ಒಂದೊ0ದೆ ಮುಚ್ಚುತ್ತಿವೆ. ಅದಕ್ಕಾಗಿ ಹೊಸ ತಂತ್ರಜ್ಞಾನ ಚಿತ್ರ ರಂಗಕ್ಕೆ ದೊರೆಯುವಂತೆ ಮಾಡಬೇಕು ಕುಟುಂಬದವರು ಮತ್ತೆ ಒಟ್ಟಾಗಿ ಬಂದು ಸಿನೆಮಾ ನೋಡುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಅಗತ್ಯವಾದ ಸಹಾಯ ಸಹಕಾರವನ್ನು ಸರ್ಕಾರ ನೀಡಲಿದೆ.
ಬೆಂಗಳೂರು ಚಲನಚಿತ್ರೋತ್ಸವ ನಂಬರಗ ಒನ್ ಆಗುವ ರೀತಿ ಮಾಡಬೇಕು. ಸಾಮಾಜಿಕ ಸಂದೇಶ ಇರುವಂಥ ಸಿನೆಮಾಗಳನ್ನು ತರಬೇಕು ಎಂದು ಹೇಳಿದರು. ಕಪ್ಪುಬಿಳುಪು ಸಿನೆಮಾಗಳಲ್ಲಿ ಸೃಜನಾತ್ಮಕತೆ ಅಪಾರ. ಇತ್ತೀಚೆಗೆ ಸ್ಪೆಷಲ್ ಎಫೆಕ್ಟ್ ತೋರಿಸಲು ಕಪ್ಪು ಬಿಳುಪು ಬಳಸಲಾಗುತ್ತದೆ. ಸಿನೆಮಾದವರು ಚಿತ್ರೋತ್ಸವ ನೋಡಬೇಕು. ಆಗ ಬೇರೆಡೆಗಳಲ್ಲಿ ಆಗಿರುವ ಮಾದರಿಯನ್ನು ನಾವೂ ಅಳವಡಿಸಿಕೊಳ್ಳಲು ಸಾಧ್ಯ ಎಂದರು.
ಖ್ಯಾತ ನಟ ಪುನೀತ್ ರಾಜ್ ಕುಮಾರ್ ಅವರನ್ನು ಸ್ಮರಿಸಿದ ಬೊಮ್ಮಾಯಿ ಅವರು ಪುನೀತ್ ಮಾಡಿರುವ ಕಾರ್ಯಗಳು ಶಾಶ್ವತವಾಗಿ ಉಳಿಯುತ್ತವೆ.. ಪುನೀತ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ನಿರ್ಧರಿಸಿದ್ದೇವೆ. ಶೀಘ್ರದಲ್ಲೇ ಸಮಾರಂಭದ ದಿನಾಂಕ ಪ್ರಕಟಿಸಲಾಗುವುದು. ಮೈಸೂರಿನಲ್ಲಿ ಚಿತ್ರನಗರಿ ಮಾಡಲು ಮುಂದಿನ ವರ್ಷ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ನಿವಾಸವನ್ನು ಸ್ಮಾರಕವಾಗಿ ಮಾಡಲು, ಚಲನಚಿತ್ರ ಅಕಾಡೆಮಿಯ ಥಿಯೇಟರ್ ಅನ್ನು ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದರು. ಸಮಾರಂಭದಲ್ಲಿ ಖ್ಯಾತ ನಟರು, ನಿರ್ಮಾಪಕರು, ಖ್ಯಾತ ನಟಿ ಭಾರತಿ, ಮಲೆಯಾಳಂ ಚಿತ್ರರಂಗದ ನಿರ್ದೇಶಕರು ಮತ್ತು ಅಶ್ವಿನಿ ಪುನೀತ್ ರಾಜ್ ಕುಮಾರ್ ಉಪಸ್ಥಿತರಿದ್ದರು. ವಾರ್ತಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸ್ವಾಗತಿಸಿದರು. ಅಕಾಡೆಮಿ ಅಧ್ಯಕ್ಷರು ಪ್ತಸ್ತಾವಿಕವಾಗಿ ಮಾತನಾಡಿದರು.
Varthajala, Daily, Bengaluru
0 Comments