Ticker

6/recent/ticker-posts

Ad Code

Responsive Advertisement

Flash News: ಭಾಷಣ ಮಾಡುವುದಾದರೆ ನಾನೂ ಒಂದು ವರ್ಷ ಮಾತನಾಡಬಲ್ಲೆ: ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು, ಮಾ.10: ವಿಷಯಾಂತರ ಮಾಡಿ ರಾಜಕೀಯ ಭಾಷಣ ಮಾಡಬಹುದಾದರೆ ನಾನು 10 ದಿನ ಮಾತನಾಡಬಲ್ಲೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲೆಸೆದರೆ, ಅದಕ್ಕೆ ಪ್ರತಿಯಾಗಿ ರಾಜಕೀಯ ಭಾಷಣ ಮಾಡುವುದಾದರೆ ನಾನೂ ಒಂದು ವರ್ಷ ಮಾತನಾಡಬಲ್ಲೆ ಎಂದು ಎಚ್.ಡಿ.ಕುಮಾರಸ್ವಾಮಿ ಪ್ರತಿ ಸವಾಲು ಹಾಕಿದರು.

ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ಮುಂದುವರಿಸಿದ ಎಚ್.ಡಿ.ಕುಮಾರಸ್ವಾಮಿ, ಈಗಲ್‌ಟನ್ ಜಮೀನು ವಿವಾದ ಪ್ರಸ್ತಾಪಿಸಿ, ಪರೋಕ್ಷವಾಗಿ ಕಾಂಗ್ರೆಸ್ ಆಡಳಿತಾವಧಿಯ ಲೋಪ-ದೋಷಗಳನ್ನು ಪ್ರಸ್ತಾಪಿಸಿದರು. ಪರ್ಸೆಂಟೇಜ್, ಅಕ್ರಮಗಳು ನಡೆದಿವೆ ಎಂದರು. ಸಮಗ್ರವಾಗಿ ತನಿಖೆಗೆ ಒಳಪಡಿಸಬೇಕು ಎನ್ನುತ್ತಲೇ ಸುದೀರ್ಘವಾಗಿ ಮಾತನಾಡಿದರು. ಬಜೆಟ್‌ಗೆ ಸಂಬ0ಧಪಡದ ವಿಷಯವೆಂದ ಸಿದ್ದರಾಮಯ್ಯ ನೀವು ಅಧಿಕಾರದಲ್ಲಿದ್ದಾಗ ಈ ಬಗ್ಗೆ ಕ್ರಮವಹಿಸಬಹುದಿತ್ತು. ಈಗ ನಾವಂತೂ ಅಧಿಕಾರದಲ್ಲಿಲ್ಲ. ಮುಖ್ಯಮಂತ್ರಿ ಬೊಮ್ಮಾಯಿ ಅವರು ಯಾವುದೇ ರೀತಿಯ ತನಿಖೆ ನಡೆಸಲಿ. ತಪ್ಪುಗಳು ದೃಢಪಟ್ಟರೆ ಕಾರಣರಾದವರ ವಿರುದ್ಧ ಕ್ರಮಕೈಗೊಳ್ಳಲಿ ಎಂದರು. ಈ ಮಧ್ಯೆ ಎಚ್‌ಡಿಕೆ ವಿರುದ್ಧ ಏರಿದ ಧ್ವನಿಯಲ್ಲಿ ರಾಜಕೀಯ ಭಾಷಣ ಮಾಡುತ್ತಿದ್ದೇರ ಎಂದು ಸಿದ್ದರಾಮಯ್ಯ ಹರಿಹಾಯ್ದರೆ, ದಾಖಲೆ ಸಹಿತ ನಿಜಾಂಶ ಮಾತನಾಡಿದರೆ ಸಿಟ್ಟು ಬರುತ್ತದೆಯೇ ಎಂದು ಕುಮಾರಸ್ವಾಮಿ ತಿವಿದರು.

Varthajala, Daily, Bengaluru

Post a Comment

0 Comments

Ad Code

Responsive Advertisement