Ticker

6/recent/ticker-posts

Ad Code

Responsive Advertisement

ಕೃಷಿ ಕ್ಷೇತ್ರ ಭಾರತೀಯ ಆರ್ಥಿಕತೆಯ ಮೂಲ ಸ್ತಂಭ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಬೆಂಗಳೂರು ಮಾರ್ಚ್ 05,2022: ಕೃಷಿ ಕ್ಷೇತ್ರವು ಭಾರತೀಯ ಆರ್ಥಿಕತೆಯ ಮೂಲ ಸ್ತಂಭವಾಗಿದ್ದು, ಅದನ್ನು ಮತ್ತಷ್ಟು ಬಲಪಡಿಸಬೇಕಿದೆ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್  ಅವರು ಹೇಳಿದರು.


ಆರ್ಟ್ ಆಫ್ ಲಿವಿಂಗ್ ಸಂಸ್ಥೆಗೆ ಭೇಟಿ ನೀಡಿದ ಗೌರವಾನ್ವಿತ ರಾಜ್ಯಪಾಲರು, ಗೋಶಾಲೆಯನ್ನು ವೀಕ್ಷಣೆ ಮಾಡಿದರು. ನಂತರ ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಆಯೋಜಿಸಲಾಗಿದ್ದ " ಕಿಸಾನ್ ಸಮೃದ್ಧಿ ಮಹೋತ್ಸವ" ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ಕೃಷಿ ಪ್ರಧಾನ ದೇಶ. ಕೃಷಿಯನ್ನು "ಭಾರತದ ಆತ್ಮ" ಮತ್ತು "ಬೆನ್ನೆಲುಬು" ಎಂದು ಪರಿಗಣಿಸಲಾಗಿದೆ. ಭಾರತದ ಜನಸಂಖ್ಯೆಯ ಹೆಚ್ಚಿನ ಭಾಗವು ಕೃಷಿ ಮತ್ತು ಕೃಷಿ ಆಧಾರಿತ ಕೆಲಸ ಮಾಡುವ ಮೂಲಕ ತನ್ನ ಜೀವನವನ್ನು ಸಾಗಿಸುತಿದ್ದಾರೆ ಎಂದರು.

ಭಾರತದಲ್ಲಿ, ಹಸಿರು ಕ್ರಾಂತಿಯು ದೇಶವನ್ನು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯನ್ನಾಗಿ ಮಾಡಿದೆ. ಉತ್ಪಾದನೆಯ ಪ್ರಮಾಣ ಮತ್ತು ಮೌಲ್ಯ ಎರಡರಲ್ಲೂ ಭಾರತವು ಪ್ರಪಂಚದ ಮಳೆಯಾಶ್ರಿತ ಕೃಷಿ ದೇಶಗಳಲ್ಲಿ ಮೊದಲ ಸ್ಥಾನದಲ್ಲಿದೆ. ಒಟ್ಟು ಬೆಳೆ ಪ್ರದೇಶದ ಮೂರನೇ ಎರಡರಷ್ಟು ಪ್ರದೇಶದಲ್ಲಿ ಮಳೆಯಾಶ್ರಿತ ಕೃಷಿ ನಡೆಯುತ್ತದೆ. ಎಂದ ಅವರು,  ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು, ಕಿರುಧಾನ್ಯಗಳು, ಒರಟಾದ ಧಾನ್ಯಗಳು, ವಾಣಿಜ್ಯ ಬೆಳೆಗಳು ಹತ್ತಿ ಇತ್ಯಾದಿಗಳು ಮಳೆಯಾಶ್ರಿತ ಕೃಷಿಯನ್ನು ಅವಲಂಬಿಸಿವೆ ಎಂದು ಮಾಹಿತಿ ನೀಡಿದರು.

ಭಾರತದಲ್ಲಿ ಎರಡನೇ ಹಸಿರು ಕ್ರಾಂತಿಗೆ ಆಧುನಿಕ ತಂತ್ರಜ್ಞಾನದೊಂದಿಗೆ ಮಳೆಯಾಶ್ರಿತ/ಒಣ ಭೂಮಿಯನ್ನು ಬಳಸಬೇಕು. ಇಸ್ರೇಲ್‌ನ ಹವಾಮಾನ ಮತ್ತು ಭೌಗೋಳಿಕತೆಯು ಸ್ವಾಭಾವಿಕವಾಗಿ ಕೃಷಿಗೆ ಸೂಕ್ತವಲ್ಲ ಎಲ್ಲರಿಗೂ ತಿಳಿದಿರುವ ವಿಷಯ. ಆದರೂ ಇಸ್ರೇಲ್ ಕೃಷಿ ತಂತ್ರಜ್ಞಾನಗಳಲ್ಲಿ ವಿಶ್ವ ನಾಯಕ. ಇಸ್ರೇಲ್ ಕೃಷಿಯ ಒಂದು ಸ್ಮಾರ್ಟ್ ವಿಧಾನವನ್ನು ಅಳವಡಿಸಿಕೊಂಡಿದೆ. ಹನಿ ನೀರಾವರಿ ತಂತ್ರಜ್ಞಾನದ ಬಳಕೆಯಿಂದ ನೀರು ಮತ್ತು ಹಣ ಎರಡೂ ಉಳಿತಾಯವಾಗುತ್ತದೆ. "ಪ್ರತಿಯೊಂದು ಹನಿ ನೀರು ಮೌಲ್ಯಯುತವಾಗಿದೆ" ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರವು ಜಲ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲು ಬದ್ಧವಾಗಿದೆ. 'ಹರ್ ಖೇತ್ ಕೋ ಪಾನಿ' ಗುರಿಯೊಂದಿಗೆ 'ಪ್ರಧಾನ ಮಂತ್ರಿ ಕೃಷಿ ಸಿಂಚಯೀ ಯೋಜನೆ' ಆರಂಭಿಸಲಾಗಿದೆ ಎಂದು ತಿಳಿಸಿದರು.

ನೈಸರ್ಗಿಕ ಕೃಷಿ ಕೃಷಿಯ ಪ್ರಾಚೀನ ವಿಧಾನವಾಗಿದೆ. ಇದು ಭೂಮಿಯ ನೈಸರ್ಗಿಕ ಸ್ವರೂಪವನ್ನು ಕಾಪಾಡುತ್ತದೆ. ನೈಸರ್ಗಿಕ ಕೃಷಿಯಲ್ಲಿ ರಾಸಾಯನಿಕ ಕೀಟನಾಶಕಗಳನ್ನು ಬಳಸುವುದಿಲ್ಲ. ಸಾವಯವ ಕೃಷಿಯು ಮಣ್ಣಿನ ಫಲವತ್ತತೆ ಮತ್ತು ರೈತರ ಉತ್ಪಾದಕತೆಯನ್ನು ಹೆಚ್ಚಿಸಲು ಸಂಪೂರ್ಣವಾಗಿ ಸಹಕಾರಿಯಾಗಿದೆ. ಮಳೆಯಾಶ್ರಿತ ಪ್ರದೇಶಗಳಲ್ಲಿ ಸಾವಯವ ಕೃಷಿಯ ವಿಧಾನವು ಹೆಚ್ಚು ಲಾಭದಾಯಕವಾಗಿದೆ. ಸಾವಯವ ಪದ್ಧತಿಯಲ್ಲಿ ಕೃಷಿ ಮಾಡುವುದರಿಂದ ಉತ್ಪಾದನಾ ವೆಚ್ಚ ಕಡಿಮೆಯಾಗುವುದಲ್ಲದೆ, ಮಾರುಕಟ್ಟೆಯಲ್ಲಿ ಸಾವಯವ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿ ರೈತರ ಆದಾಯವೂ ಹೆಚ್ಚುತ್ತದೆ ಎಂದರು.

ಭಾರತವು ವಿಶ್ವದ ಅತಿದೊಡ್ಡ ಹಾಲು ಉತ್ಪಾದಕರಾಗಿದ್ದು, ಹೂವುಗಳು ಮತ್ತು ಔಷಧೀಯ ಸಸ್ಯಗಳು ಮತ್ತು ಗಿಡಮೂಲಿಕೆಗಳ ರಫ್ತುದಾರ ಭಾರತದಲ್ಲಿ ಹೇರಳವಾಗಿ ಕಂಡುಬರುತ್ತದೆ. ಈ ಕ್ಷೇತ್ರಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ರೈತರ ಆದಾಯವನ್ನು ಹೆಚ್ಚಿಸಬಹುದು ಎಂದ ಅವರು, ಕಿಸಾನ್ ಸಮೃದ್ಧಿ ಮಹೋತ್ಸವವು ರೈತರಿಗೆ ಅವರು ನೈಸರ್ಗಿಕ ಕೃಷಿ, ಸಾವಯವ ಕೃಷಿ, ಶೂನ್ಯ ಬಜೆಟ್ ಕೃಷಿ, ಆರ್ಥಿಕ ಭದ್ರತೆ ಮತ್ತು ಸಮೃದ್ಧಿಯನ್ನು ಸಾಧಿಸಲು, ಸ್ಥಳೀಯ ಬೀಜಗಳೊಂದಿಗೆ ಕೃಷಿ-ಜೀವವೈವಿಧ್ಯತೆ, ಆರ್ಥಿಕ ಸಾಕ್ಷರತೆ, ಬೆಳೆ ಉತ್ಪಾದನೆಯನ್ನು ಹೆಚ್ಚಿಸಲು ಮಾಹಿತಿಯನ್ನು ಒದಗಿಸುವ ಗುರಿಯನ್ನು ಹೊಂದಿದೆ.

ದೇಶದ ವಿವಿಧ ರಾಜ್ಯಗಳಿಂದ ಸಾವಿರಕ್ಕೂ ಹೆಚ್ಚು ಜನರು ಯಶಸ್ಸಿನ ಕಥೆಗಳನ್ನು ಹಂಚಿಕೊಳ್ಳಲು, ಉತ್ಪಾದನೆ ಮತ್ತು ಮಾರುಕಟ್ಟೆಯನ್ನು ಸುಧಾರಿಸಲು ತರಬೇತಿಯನ್ನು ಪಡೆಯಲು, ಉದಯೋನ್ಮುಖ ತಂತ್ರಜ್ಞಾನ ಮತ್ತು ಆದಾಯವನ್ನು ಹೆಚ್ಚಿಸಲು ಮತ್ತು ಧ್ಯಾನ ಮತ್ತು ಉಸಿರಾಟದ ತಂತ್ರಗಳನ್ನು ಕಲಿಯಲು ಮತ್ತು ತಂತ್ರಗಳನ್ನು ಅರ್ಥಮಾಡಿಕೊಳ್ಳಲು ಇಲ್ಲಿ ಸೇರಿರುವುದಕ್ಕೆ ಹರ್ಷಿಸುತ್ತೇನೆ ಎಂದು ಹೇಳಿದರು.
 
ಕೇಂದ್ರ ಸಚಿವರಾದ ಗಜೇಂದ್ರ ಸಿಂಹ ಶೋಕಾವತ್, ಶ್ರೀ ಶ್ರೀ ರವಿಶಂಕರ್ ಗುರೂಜಿ, ಆಚಾರ್ಯ ಲೋಕಶ್ ಜಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.

Post a Comment

0 Comments

Ad Code

Responsive Advertisement