Ticker

6/recent/ticker-posts

Ad Code

Responsive Advertisement

ಬೆಂಗಳೂರಿನ ಭವಿಷ್ಯನಿಧಿ ಕಚೇರಿಯಲ್ಲಿ ಮಹಿಳಾ ಸಹಾಯ ಕೇಂದ್ರ ಪ್ರಾರಂಭ

ಬೆಂಗಳೂರು : ನಮ್ಮ ಭಾರತ ದೇಶದಲ್ಲಿ ಆಚರಿಸಲಾಗುತ್ತಿರುವ 75 ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಹಾಗೂ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಕಾರ್ಮಿಕ ಭವಿಷ್ಯ ನಿಧಿ ಸಂಘಟನೆಯು ಮೊದಲ ಹಂತವಾಗಿ ದೇಶದಾದ್ಯಂತ 5 ಪ್ರಮುಖ ಮೆಟ್ರೋ ನಗರಗಳಲ್ಲಿ   ಮಹಿಳಾ ಸಹಾಯ ಕೇಂದ್ರಗಳನ್ನು ಆರಂಭಿಸಿದ್ದು,  ವಿರ್ಚುವಲ್ ಮೂಲಕ ಕೇಂದ್ರ ಕಾರ್ಮಿಕ ಹಾಗೂ  ಉದ್ಯೋಗ ಖಾತೆ ಸಚಿವರಾದ ಭೂಪೇಂದ್ರ ಯಾದವ್ ರವರು ಇವುಗಳ ಉದ್ಘಾಟನೆಯನ್ನು  ನೆರವೇರಿಸಿದರು. 



ನಗರದ ರಿಚ್ಮಂಡ್ ವೃತ್ತದ ಬಳಿಯಿರುವ ಕಾರ್ಮಿಕರ ಭವಿಷ್ಯನಿಧಿ ಕಚೇರಿಯ ಆವರಣದಲ್ಲಿಯೂ ಸಹ ಮಹಿಳಾ ಸಹಾಯ ಕೇಂದ್ರದ ಉದ್ಘಾಟನೆಯನ್ನು ಸಾಂಕೇತಿಕವಾಗಿ ಕರ್ನಾಟಕ -ಗೋವಾ ಮತ್ತು ಬೆಂಗಳೂರು ವಲಯದ ಅಪರ ಕೇಂದ್ರೀಯ ಪಿಎಫ್ ಆಯುಕ್ತರಾದ ಮಾರುತಿ ಭೋಯಿ ರವರು ಟೇಪ್ ಕತ್ತರಿಸುವ ಮೂಲಕ ಬೆಂಗಳೂರಿನಲ್ಲಿ  ಚಾಲನೆಗೊಳಿಸಿದರು. ಈ ಸಂದರ್ಭದಲ್ಲಿ ಆಯುಕ್ತರುಗಳಾದ ಪ್ರಶಾಂತ್ ಕೆ., ಸೆಂದಿಲ್ ಕುಮಾರ್, ಮಲ್ಲೇಶ್ವರ ವಲಯದ ಆಯುಕ್ತರಾದ ಶ್ರೀಮತಿ ಇಂದಿರಾ ಹಾಗೂ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

EPS-95 ಬೆಮಸಾ ಮತ್ತು ಕರಾಸಾ ನಿವೃತ್ತ  ನೌಕರರ ಸಂಘ (ರಿ) ಕಾರ್ಯಾಧ್ಯಕ್ಷ ನಂಜುಂಡೇಗೌಡ ನೇತೃತ್ವದಲ್ಲಿ ನಿವೃತ್ತ ಪಿಂಚಣಿದಾರರಿಗೆ ಕನಿಷ್ಠ ಪಿಂಚಣಿ ರೂ. 7,500 + ತುಟಿ ಭತ್ಯ ಹಾಗೂ ವೈದ್ಯಕೀಯ ಸೌಲಭ್ಯವನ್ನು ನಿಗದಿಪಡಿಸುವ ಕುರಿತು  ಇದೇ ತಿಂಗಳು ಹನ್ನೊಂದು ರಂದು ಗುವಾಹಟಿಯಲ್ಲಿ ನಡೆಯಲಿರುವ ಸಿ.ಬಿ.ಟಿ. ಸಭೆಯಲ್ಲಿ ಅಂಗೀಕಾರವನ್ನು ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ -ಗೋವಾ ಮತ್ತು ಬೆಂಗಳೂರು ವಲಯದ ಅಪರ ಕೇಂದ್ರೀಯ ಪಿಎಫ್ ಆಯುಕ್ತರಾದ ಮಾರುತಿ ಭೋಯಿ ರವರಿಗೆ ನಗರದ ರಿಚ್ಮಂಡ್ ವೃತ್ತದ ಬಳಿಯಿರುವ ಕಾರ್ಮಿಕರ ಭವಿಷ್ಯನಿಧಿ ಕಚೇರಿಯ ಆವರಣದಲ್ಲಿ ನೂರಾರು ನಿವೃತ್ತ ನೌಕರರ ಸಮಕ್ಷಮದಲ್ಲಿ ಮನವಿ ಪತ್ರವನ್ನು ಸಲ್ಲಿಸಲಾಯಿತು.

Post a Comment

0 Comments

Ad Code

Responsive Advertisement