ಭಗವಾನ್‌ಚೈತನ್ಯರು ಭಕ್ತಿಪರಂಪರೆಯಅಗ್ರೇಸರರು. ಅವರು ಕೃತಿಸಿದ `ಶಿಕ್ಷಾಷ್ಟಕ’ ಭಕ್ತಿರಸಕ್ಕೆಎತ್ತಿದಆರತಿ. ಚೈತನ್ಯರು `ಶಿಕ್ಷಾಷ್ಟಕ’ದ ಮೂಲಕ `ಭಕ್ತಿರಸ’ದ ಪರಮಸ್ವಾದವನ್ನು ನಮಗಿಲ್ಲಿ ಉಣಬಡಿಸಿದ್ದಾರೆ. ಅದು ಭಕ್ತಿಯ ಪರಾಕಾಷ್ಠೆಯನ್ನು ತಿಳಿಸುತ್ತದೆ. `ಭಕ್ತಿ’ ಒಳಗೂ ಉಂಟು; ಹೊರಗೂಉಂಟು. ನಮ್ಮ ಪರಂಪರೆಯಲ್ಲಿಒ0ಬತ್ತು ರಸಗಳಿಗೆ ಪ್ರಾಧಾನ್ಯಇರುವುದು ಸರಿಯಷ್ಟೆ. ಶ್ರೀಕೃಷ್ಣ-ರಾಧೆಯರ `ಶೃಂಗಾರರಸ’ವು `ಶಾಂತರಸ’ದಲ್ಲಿ ಪ್ರಶಮನಗೊಳ್ಳುತ್ತದೆ.
ಹಾಗೆ ನೋಡಿದರೆ, ರಾಧೆಯರದುದೈವಿಕ ಶೃಂಗಾರ. ಭಗವಾನ್‌ಚೈತನ್ಯರುಒಂಬತ್ತು ರಸಗಳ ಜತೆ ಹತ್ತನೆಯದಾಗಿ `ಭಕ್ತಿರಸ’ವನ್ನು ಜೋಡಿಸಿದ್ದಾರೆ. ಭಕ್ತನಿಗೂ ಭಗವಂತನಿಗೂ ಸಾಹಚರ್ಯದ ಸಂಬ0ಧವನ್ನು ಪರ್ಯಾಯವಾಗಿ ಒದಗಿಸಿ ಕೊಡುತ್ತದೆ. ಚೈತನ್ಯರ ಬಗೆಗೆ ಇಲ್ಲಿಯೇಒಂದೆರಡು ಮಾತುಗಳನ್ನು ಹೇಳಬೇಕು. ಅವರದ್ದು ಲೀಲಾಮಾನುಷ ವ್ಯಾಪಾರ. ಭಕ್ತರನ್ನುಉದ್ಧಾರದಕಡೆಗೆಕರೆದೊಯ್ಯಲುಚೈತನ್ಯರಾಗಿಅವರು ಬುವಿಯಲ್ಲಿ ಅವತರಿಸಿದರು. ಸತ್ಸಂಗ, ಸಂಕೀರ್ತನ, ಸಂಸ್ಮರಣ ಎಂಬ ತ್ರಿಪುಟಿಯಲ್ಲಿಅವರುಓಲಾಡಿದರು; ತಮ್ಮ ಬಳಿಗೆ ಬಂದವರನ್ನು ಓಲಾಡಿಸಿದರು. ಇದುಅಸಾಮಾನ್ಯಕ್ರಿಯೆ. ಭಗವಾನ್‌ಚೈತನ್ಯರುಕಲಿಯುಗದಕಾಮಧೇನುವಾಗಿ ಸಂಚರಿಸಿದರು. ಅವರ ಬಗೆಗೆ ಬಂಗಾಲಿ ಭಾಷೆಯಲ್ಲಿ ಬಂದಿರುವ `ಶ್ರೀಚೈತನ್ಯ ಚರಿತಾಮೃತಂ’ ಒಂದುಅಪೂರ್ವ ಮಹಾಕಾವ್ಯ. ಆ ಮಹಾಕಾವ್ಯದತುಂಬಾ `ಭಕ್ತಿರಸ’ದತೊರೆತುಂಬಿ ಹರಿಯುತ್ತದೆ. `ಶಿಕ್ಷಾಷ್ಟಕ’ವು ಆ ಮಹಾಕಾವ್ಯದ `ಅಂತ್ಯಲೀಲೆ’ಯಲ್ಲಿ ಬರುತ್ತದೆ.
ಶ್ರೀಚೈತನ್ಯ ಮಹಾಪ್ರಭುಗಳು ಜಗನ್ನಾಥಪುರಿಯಲ್ಲಿದ್ದಾಗ ಹಗಲೂ-ರಾತ್ರಿ ಶ್ರೀಕೃಷ್ಣನ ವಿರಹದಿಂದ ಭಾವಪರವಶರಾಗುತ್ತಿದ್ದರು. ಅವರ ಬಳಿ ಸ್ವರೂಪದಾಮೋದರಗೋಸ್ವಾಮಿ ಮತ್ತುರಾಮಾನಂದರಾಯರೆAಬ ಸಂಗಾತಿಗಳು ಸದಾಇರುತ್ತಿದ್ದರು. ಶ್ರೀಚೈತನ್ಯರು ಅವರಜತೆ ದಿವ್ಯಾನಂದದ ಹಾಡುಗಳನ್ನು ಸಂಕೀರ್ತಿಸುತ್ತಆಸ್ವಾದಿಸುತ್ತಿದ್ದರು. ಅವರು ಆ ದಿವ್ಯೋನ್ಮಾದದಲ್ಲಿ ಹರ್ಷ, ಶೋಕ, ದೈನ್ಯ, ರೋಷ, ಉದ್ವೇಗ, ಕಾತರ-ಮುಂತಾದ ಭಾವಗಳೊಡನೆ ಆಸ್ವಾದಿಸುತ್ತಿದ್ದರು. ಶ್ರೀಚೈತನ್ಯ ಮಹಾಪ್ರಭುಗಳು ತಮ್ಮ ಸಂಗಾತಿಗಳಿಗೆ ``ಈ ಕಲಿಯುಗದಲ್ಲಿ ಪವಿತ್ರನಾಮಗಳ ಸಂಕೀರ್ತನೆಯೇ ಮುಕ್ತಿಗೆ ಕಾರ್ಯಸಾಧುವಾದಉಪಾಯ’’ ಎಂದು ಪದೇ ಪದೇ ತಿಳಿ ಹೇಳುತ್ತಿದ್ದರು. ಪ್ರಭು ಶ್ರೀಕೃಷ್ಣನ ಪವಿತ್ರನಾಮವನ್ನು ಕೇವಲ ಸಂಕೀರ್ತನೆ ಮಾಡುವ ಮೂಲಕ ಮಾತ್ರ ವ್ಯಕ್ತಿಯುಎಲ್ಲಅನಪೇಕ್ಷಿತ ಹವ್ಯಾಸಗಳಿಂದ ಮುಕ್ತನಾಗಬಹುದೆಂದು ಅವರುಎಚ್ಚರಿಸುತ್ತಿದ್ದರು.
ಶಿಕ್ಷಾಷ್ಟಕವು ಹೆಸರೇ ಸೂಚಿಸುವಂತೆಎ0ಟು ಶ್ಲೋಕಗಳಿಂದ ಕೂಡಿರುವ ಭಕ್ತಿರಸದಊಟೆ. ಶಿಕ್ಷಾಷ್ಟಕದಲ್ಲಿ ಭಕ್ತಿರಸದ ಪರಾಕಾಷ್ಠೆ ಪ್ರತಿಯೊಂದು ಶ್ಲೋಕದಲ್ಲೂ ಮಡುಗಟ್ಟಿದೆ. ಚೈತನ್ಯಪ್ರಭುಗಳು ತಮ್ಮ ಭಕ್ತರಜತೆ ಶ್ರೀಕೃಷ್ಣಭಕ್ತಿಯನ್ನು ಸದಾ ಮುಳುಗಿಯೇ ಇರುತ್ತಿದ್ದರೆಂಬುದಕ್ಕೆ `ಶಿಕ್ಷಾಷ್ಟಕ’ವು ರುಜುವಾತುಗೊಳಿಸುತ್ತದೆ.
ನಾವೀಗ, ಇಲ್ಲಿರುವ ಶ್ಲೋಕಗಳ ಮೂಲಕ `ಭಕ್ತಿರಸ’ದ ಪಾನವನ್ನು ಮಾಡೋಣ. ಚೈತನ್ಯ ಪ್ರಭುಗಳು ಪ್ರಾರಂಭಿಸುವುದು ಹೀಗೆ: ``ಪ್ರಭು ಶ್ರೀಕೃಷ್ಣನ ಪವಿತ್ರನಾಮದ ಸಂಕೀರ್ತನೆಗೆ ಸರ್ವತ್ರವೂಜಯವಾಗಲಿ. ಅದು ಭಕ್ತರ ಹೃದಯದಕನ್ನಡಿಯನ್ನು ಸ್ವಚ್ಛಗೊಳಿಸಲಿ. ಆ ಸಂಕೀರ್ತನೆಯು ವರ್ಧಿಷ್ಣುವಾದಚಂದ್ರನ0ತೆ ಸೌಭಾಗ್ಯದ ಶ್ವೇತಕಮಲವನ್ನುಎಲ್ಲ ಜೀವಿಗಳಿಗೂ ಹರಡಲಿ. ಶ್ರೀಕೃಷ್ಣನ ಪವಿತ್ರನಾಮದ ಸಂಸ್ಮರಣೆಯು ದಿವ್ಯಜೀವನದಆನಂದ ಸಾಗರವನ್ನು ಸದಾ ವಿಸ್ತರಿಸುತ್ತಿರಲಿ.’’ ಇದು ಶ್ರೀಚೈತನ್ಯರ ಹಂಬಲ. ಅವರು ಮುಂದುವರಿದು ``ನಿನ್ನ ಪವಿತ್ರ ನಾಮದಲ್ಲಿ ಜೀವಿಗಳಿಗೆ ಸರ್ವಸೌಭಾಗ್ಯವೂಉಂಟು. ನಿನಗೆ ಕೃಷ್ಣ, ಗೋವಿಂದ ಎಂಬ ಹತ್ತಾರು ಹೆಸರುಗಳಿವೆಯಷ್ಟೆ. ಆ ಮೂಲಕ ನೀನು ವಿಸ್ತರಿಸುತ್ತಿದ್ದೀಯೆ. ನಿನ್ನ ಸಮಸ್ತಶಕ್ತಿಗಳಿಗೆ ನೀನೇ ಆಧಾರನಾಗಿದ್ದೀಯೆ. ನನ್ನ ಪ್ರೀತಿಯ ಪ್ರಭುವೆ, ಪತಿತರು ಮತ್ತುಬದ್ಧಾತ್ಮರಿಗೆ ನಿನ್ನ ಪವಿತ್ರನಾಮಗಳನ್ನು ಮುಕ್ತವಾಗಿ ಬೋಧಿಸುವ ಮೂಲಕ ನೀನು ಕರುಣೆಯನ್ನು ಅನುಗ್ರಹಿಸಿದರೂ ನಾನೆಷ್ಟು ನಿರ್ಭಾಗ್ಯ. ನನಗೆ ನಿನ್ನಲ್ಲಿ ಸದಾಅನುರಾಗಇರುವಂತೆಅನುಗ್ರಹಿಸು.’’ ಹೀಗೆಂದು ಭಕ್ತಿರಸದ ಮೂಲಕ ತಮ್ಮ ವಾಂಛೆಯನ್ನು ಶ್ರೀ ಚೈತನ್ಯರು ವ್ಯಕ್ತಪಡಿಸುತ್ತಾರೆ.
``ಸದಾ ಸಂಕೀರ್ತನೆ ಮಾಡುವುದು, ಅವನ ಪವಿತ್ರನಾಮವನ್ನು ಉಚ್ಚರಿಸುವುದು ಅಗತ್ಯ. ಜಗತ್ತಿನಒಡೆಯನೆ, ನನಗೆ ಐಹಿಕ ಸಂಪತ್ತುಎ0ದೂ ಬೇಡ. ಐಹಿಕ ಅನುಯಾಯಿಗಳಾಗಲಿ, ಸುಂದರ ಪತ್ನಿಯಂತುಎ0ದೆ0ದೂ ಬೇಡ. ಯಾವ ಬಗೆಯ ಕಾಮ್ಯ-ಕರ್ಮಗಳ ಫಲವನ್ನು ನಾನು ನಿನ್ನಿಂದ ಬಯಸುವುದಿಲ್ಲ. ಜನ್ಮಜನ್ಮಾಂತರಕ್ಕೂ ಪರಿಶುದ್ಧ ಭಕ್ತಿಸೇವೆಯನ್ನು ನಾನು ನಿನಗೆ ಸಲ್ಲಿಸುವಂತೆಅನುಗ್ರಹಿಸು. ನಿನ್ನ ಪಾದಕಮಲದ ಧೂಳಿನ ಒಂದುಕಣವಾಗಿ ನನ್ನನ್ನು ಪರಿಗ್ರಹಿಸು. ನನ್ನ ಪ್ರಿಯ ಪ್ರಭುವೆ, ನಿನ್ನ ಪವಿತ್ರ ನಾಮವನ್ನು ಸಂಕೀರ್ತನೆ ಮಾಡುವಾಗಕಣ್ಣೀರುಧಾರೆಧಾರೆಯಾಗಿ ಹರಿಯುತ್ತಿದ್ದರೆ ನನ್ನ ಕಣ್ಣುಗಳು ಸಾರ್ಥಕಗೊಂಡ0ತೆಯೇ ಸರಿ. ನಿನ್ನ ಪವಿತ್ರನಾಮದ ಸಂಕೀರ್ತನೆ ಮಾಡುವಾಗ ನನ್ನಕಂಠಗದ್ಗದವಾಗುತ್ತದೆ. ನನ್ನದೇಹದ ರೋಮರೋಮಗಳು ದಿವ್ಯಸುಖದಲ್ಲಿ ನಿಮಿರಿ ನಿಲ್ಲುತ್ತವೆ.’’ ಹೀಗೆಂದು ಚೈತನ್ಯಪ್ರಭುಗಳು ಆರ್ತತೆಯಿಂದ ಶ್ರೀಕೃಷ್ಣಲ್ಲಿ ಮೊರೆಇಡುವಲ್ಲಿಗೆ ಶಿಕ್ಷಾಷ್ಟಕವು ಮುಗಿಯುತ್ತದೆ.
ಶ್ರೀಕೃಷ್ಣನ ನೆನಪು ಚೈತನ್ಯಪ್ರಭುಗಳಿಗೆ ಅಮೃತಪ್ರಾಯವಾದುದು. ಅವನ ನೆನಹನ್ನು ಒಂದರೆಗಳಿಗೆ ಚೈತನ್ಯರು ಬಿಡಲಾರರು. ಅವರ ಸಮಸ್ತ ಇಂದ್ರಿಯಗಳೂ ಶ್ರೀಕೃಷ್ಣ ಎಂಬ ನೆನಪಿನ ಅಮೃತರಸದಿಂದತುAಬಿಹೋಗಿದೆ. ಶ್ರೀಕೃಷ್ಣನನ್ನು ಒಂದರೆಗಳಿಗೆ ಅವರು ಬಿಟ್ಟಿರಲಾರರು. ಅವನು ಬಿಟ್ಟು ಹೋದರೆಚೈತನ್ಯರಿಗೆಜಗತ್ತೇ ಶೂನ್ಯವಾಗಿ ಬಿಡುತ್ತದೆ. ಅವರ ಹೃದಯ ಸದಾ ಶ್ರೀಕೃಷ್ಣನನ್ನು ಆರಾಧಿಸುತ್ತದೆ. ಅವನೊಬ್ಬನೇಅವರ ಮನಸ್ಸನ್ನೂ ಸಮಸ್ತ ಹೃದಯವನ್ನೂ ಆವರಿಸಿಕೊಂಡಿದ್ದಾನೆ. ಶ್ರೀಚೈತನ್ಯರ ಆರಾಧನೆಯಲ್ಲಿ ಭಕ್ತಿಯೇ ಪ್ರಮುಖ. ಅದು ಮೇರೆಮೀರಿ ನಿಲ್ಲುತ್ತದೆ! ಚೈತನ್ಯರ ಸಮಸ್ತ ಚಟುವಟಿಕೆಗಳು ಭಕ್ತಿಕೇಂದ್ರಿತವಾಗಿವೆ. ಅವರ ಮಾತುಗಳೆಲ್ಲವೂ ಭಕ್ತಿರಸದಿಂದ ತೋಯ್ದುಹೋಗಿವೆ. ಇಂಥ ‘ಶಿಕ್ಷಾಷ್ಟಕ’ವನ್ನು ರಚಿಸಿದ್ದು ಶ್ರೀಚೈತನ್ಯ ಪ್ರಭುಗಳೇ. ಈ ಎಂಟು ಶ್ಲೋಕಗಳು ಶ್ರೀಚೈತನ್ಯ ಪ್ರಭುಗಳ ಆರಾಧಕರಿಗೆ ಪರಮಾದರವೂ ಪ್ರಿಯವೂ ಆಗಿವೆ. ಉತ್ತರಭಾರತದ ಭಕ್ತಿಸಂಪತ್ತಿಗೆ ಶ್ರೀಚೈತನ್ಯರ ಕೊಡುಗೆ ಅಪಾರ. ಭಾರತೀಯ ಸಂಸ್ಕೃತಿಯಅನನ್ಯತೆ ತು0ಬಿರುವುದು ಶ್ರೀಚೈತನ್ಯ ಚರಿತಾಮೃತದಲ್ಲೇ. ಇದು ವ್ಯಕ್ತಿಯನ್ನು ಭೂಮವಾಗಿಸುತ್ತದೆ. ಭಕ್ತಿರಸದ ಪ್ರವಾಹದಲ್ಲಿಎಲ್ಲರನ್ನು ಮಿಂದೇಳಿಸಿದ ಅನುಭವವನ್ನು ನಮಗೆ ತಂದುಕೊಡುತ್ತದೆ!
-ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ
0 Comments