ಚಿರತೆ ದಾಳಿಗೆ ಕಂಗೆಟ್ಟಿದ್ದ ರೈತರು ಸತ್ತ ಕುರಿಯನ್ನು ತಂದು ತಾಲೂಕು ಕಚೇರಿ ಮುಂದೆ ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದ ವಿಷಯ ತಿಳಿದ ತಾಲೂಕು ಆಡಳಿತ ಎಚ್ಚೆತ್ತುಕೊಂಡು ಇಂದು ಮುಂಜಾನೆ ತಹಸಿಲ್ದಾರ್ ಮೋಹನಕುಮಾರಿ ನೇತೃತ್ವದಲ್ಲಿ ಸ್ಥಳೀಯ ಮುಖಂಡರೊಂದಿಗೆ ಸ್ಥಳಕ್ಕೆ ಆಗಮಿಸಿ ರೈತರ ಸಮಸ್ಯೆಯನ್ನು ಆಲಿಸಿದರು ಊರಿನ ಗ್ರಾಮಸ್ಥರು ತಹಸಿಲ್ದಾರ ಮೋಹನಕುಮಾರಿ ಅವರೊಂದಿಗೆ ತಮ್ಮ ಅಳಲನ್ನು ತೋಡಿಕೊಂಡರು ಪದೇಪದೇ ಅರಣ್ಯದಂಚಿನಲ್ಲಿರುವ ನಮ್ಮ ಜಾನುವಾರುಗಳ ಮೇಲೆ ಚಿರತೆ ದಾಳಿಯಾಗುತ್ತಿದೆ. ಚಿರತೆ ಈಗಾಗಲೇ ಐದಾರು ಬಾರಿ ದಾಳಿ ಮಾಡಿ ಜಾನುವಾರುಗಳ ಪ್ರಾಣ ಹಾನಿ ಮಾಡಿದೆ.
ನಾವು ಈ ವಿಷಯವನ್ನು ಅರಣ್ಯಾಧಿಕಾರಿಗಳ ತಿಳಿಸಿ ಮನವಿ ಮಾಡಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಕೇವಲ ಹೆಸರಿಗೆ ಮಾತ್ರ ಚಿರತೆ ಹಿಡಿಯಲು ಬೋನ್ ಇಟ್ಟಿದ್ದೇವೆ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಆದ್ದರಿಂದ ನಾವುಗಳು ಆದ್ದರಿಂದ ನಾವು ಮನನೊಂದು ಪ್ರತಿಭಟನೆ ಮಾಡಲು ಸಿದ್ಧರಾಗಿದ್ದೆವು ಅಷ್ಟರೊಳಗೆ ತಾವೇ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಲಿಸಿದ್ದಕ್ಕೆ ಸಂತೋಷವಾಯಿತು ಎಂದರು.
ತಾಲೂಕು ದಂಡಾಧಿಕಾರಿಗಳು ನನಗೆ ಸಮಸ್ಯೆಯ ಮನವರಿಕೆಯಾಗಿದೆ ಈ ಕೂಡಲೇ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದೇನೆ ಮೂರ್ನಾಲ್ಕು ಕಡೆ ಬೋನ್ ಇಟ್ಟು ಕೂಡಲೇ ಚಿರತೆಯ ಉಪಟಳ ತಪ್ಪಿಸಲು ಕ್ರಮ ಕೈಗೊಳ್ಳುವಂತೆ ಅರಣ್ಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು’
ತೂಬಗೆರೆ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಅಪ್ಪಯಣ್ಣ, ರೈತ ಸಂಘದ ಮುಖಂಡರಾದ ವಾಸು ತೂಬಗೆರೆ ಯುವ ಮುಖಂಡರಾದ ಉದಯ ಆರಾಧ್ಯ ಸ್ಥಳೀಯ ತೂಬಗೆರೆ ಪಶುವೈದ್ಯಾಧಿಕಾರಿ ರಂಗಪ್ಪ ಸ್ಥಳೀಯ ಮುಖಂಡರಾದ ಅಂಬರೀಶ್ ಹಾಗೂ ವಲಯ ಅರಣ್ಯ ಅಧಿಕಾರಿಗಳು ಗ್ರಾಮಸ್ಥರು ಹಾಜರಿದ್ದರು.
-Doddaballapur
.jpeg)
0 Comments