ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಲೋಹಿಯಾ ಪ್ರಶಸ್ತಿ
ಬೆಂಗಳೂರು : ರಾಮಮನೋಹರ ಲೋಹಿಯಾ ವೇದಿಕೆ ಯು ಲೋಹಿಯಾ ರವರ ಜನ್ಮದಿನದ ಸಂದರ್ಭದಲ್ಲಿ ನೀಡುವ ಲೋಹಿಯಾ ಪ್ರಶಸ್ತಿಯನ್ನು ಈ ಬಾರಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ನೀಡಿದೆ.ನಿನ್ನೆ ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ನಡೆದ ಸಮಾರಂಭದಲ್ಲಿ ಇದನ್ನು ಅವರಿಗೆ ನೀಡಿ ಗೌರವಿಸಲಾಯಿತು.ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ,ಬಿ ಎಲ್ ಶಂಕರ್,ಪ್ರೊ.ಆನಂದ್ ಕುಮಾರ್,ನಾಡಗೌಡ,ಬಿ ಆರ್ ಪಾಟೀಲ್,ವಸುಂಧರಾ ಭೂಪತಿ, ವೀಣಾ ಮಹಾಂತೇಶ್,ಜೆ ಹುಚ್ಚಪ್ಪ, ಕೆ ಎಸ್ ನಾಗರಾಜು ಇನ್ನಿತರರು ಭಾಗವಹಿಸಿದ್ದರು.ಲೋಹಿಯಾ ವೇದಿಕೆ ಮುಖ್ಯಸ್ಥ ಶಿವಣ್ಣ ಉಪಸ್ಥಿತರಿದ್ದರು.
0 Comments