ಬೆಂಗಳೂರು : ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕಾವೇರಿ ಆಸ್ಪತ್ರೆಯು ಪ್ರಾರಂಭಿಸಿರುವ ಮೊದಲ ವಿಶೇಷ ಮಹಿಳಾ ಮತ್ತು ಮಕ್ಕಳ ಆರೈಕೆ ಕೇಂದ್ರ - “ಮಾ ಕಾವೇರಿ” ಅನ್ನು ರಾಜ್ಯ ಕಂದಾಯ ಸಚಿವ ಆರ್. ಅಶೋಕ್ ಹಾಗೂ ನಟಿ ಅನು ಪ್ರಭಾಕರ್ ಮುಖರ್ಜಿ ಅವರು ಉದ್ಘಾಟಿಸಿದರು.
ಈ ವೇಳೆ ಕಂದಾಯ ಸಚಿವ ಆರ್ ಅಶೋಕ್ ಅವರು ಮಾತನಾಡಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಆರೋಗ್ಯಕ್ಕಾಗಿ ಒಂದೇ ಸೂರಿನಡಿ ವಿಶೇಷ ಅಗತ್ಯ ಪೂರೈಕೆಗೆ ಕಾವೇರಿ ಆಸ್ಪತ್ರೆ ಹೊಸ ಕೇಂದ್ರಗಳನ್ನು ಆರಂಭಿಸಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ ಕರ್ನಾಟಕದಲ್ಲಿ ಇತ್ತೀಚೆಗೆ ಆರಂಭಗೊಂಡ ಕಾವೇರಿ ಆಸ್ಪತ್ರೆ ಕೋವಿಂಡ್ ಸಂದರ್ಭದಲ್ಲಿ ಸೋಂಕಿತರಿಗೆ ಹಾರೈಕೆ ಕಾರ್ಯಗಳನ್ನು ಮಾಡಿಕೊಂಡು ಬಂದಿದೆ ಈಗ ಕಾವೇರಿ ಎಂಬ ಆರೈಕೆ ಕೇಂದ್ರವನ್ನು ತೆರೆದಿದ್ದು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚು ಆರೈಕೆ ಕೇಂದ್ರಗಳನ್ನು ತೆರೆಯಲಿ ಎಂದು ಆಶಿಸುತ್ತೇನೆ ಎಂದರು.
ನಂತರ ಕಾವೇರಿ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಸ್. ವಿಜಯಭಾಸ್ಕರನ್ ಮಾತನಾಡಿ ಸಮಾಜದ ಬಹಳಷ್ಟು ಹೊಸ ತಾಯಂದಿರಿಗೆ ಉತ್ತಮ ವೈದ್ಯಕೀಯ ಆರೈಕೆಯೊಂದಿಗೆ ಚಿಕಿತ್ಸೆಯ ಅಗತ್ಯವಿದೆ ಎಂಬುದನ್ನು ನಾವು ದಿನನಿತ್ಯ ನೋಡುತ್ತೇವೆ. ಉದಾಹರಣೆಗೆ, ಹೆಚ್ಚಿನ ಅಪಾಯದ ಸಂದರ್ಭಗಳಲ್ಲಿ ಅವರಿಗೆ ಸೂಪರ್ ಸ್ಪೆಷಾಲಿಟಿ ಸೌಲಭ್ಯಗಳು ಮತ್ತು ವೈದ್ಯ ತಂಡದ ನೆರವು ಬೇಕಾಗುತ್ತದೆ. ಪ್ರತಿ ತಾಯಿಗೆ ಗರ್ಭದಾರಣೆಯ ಸಂತಸ ಹಾಗೂ ಮಗುವಿನ ಪ್ರೀತಿಯನ್ನು ಒದಗಿಸುವುದು "ಮಾ ಕಾವೇರಿ"ಯ ಭರವಸೆ” ಎಂದರು.
ಈ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರಾದ ಸತೀಶ್ ರೆಡ್ಡಿ ಮತ್ತು ನಟ ರಘು ಮುಖರ್ಜಿ ಭಾಗವಹಿಸಿದ್ದರು.
0 Comments