Ticker

6/recent/ticker-posts

Ad Code

Responsive Advertisement

ದಾಖಲೆ ಮಟ್ಟದಲ್ಲಿ ಮಾಡಿ ಸಾರ್ವಜನಿಕರ ಹಣವನ್ನು ಲೂಟಿ ಮಾಡುತ್ತಿದೆ ಬಿಜೆಪಿ

  ರಾಜ್ಯ ಬಿಜೆಪಿ ಸರ್ಕಾರ ಪ್ರತಿ ನಿತ್ಯ ಪ್ರತಿ ಇಲಾಖೆಯಲ್ಲೂ ಭ್ರಷ್ಟಾಚಾರವನ್ನು ದಾಖಲೆ ಮಟ್ಟದಲ್ಲಿ ಮಾಡಿ ಸಾರ್ವಜನಿಕರ ಹಣವನ್ನು ಲೂಟಿ ಮಾಡುತ್ತಿದೆ ಹಾಗೂ ದಿನನಿತ್ಯವೂ ಪ್ರತಿ ಇಲಾಖೆಯ ಭ್ರಷ್ಟಾಚಾರದ  ಕರ್ಮಕಾಂಡ ಬಹಿರಂಗವಾಗುತ್ತಿದೆ ಮುಖ್ಯಮಂತ್ರಿ ಯಾವುದೇ ತನಿಖೆಗೆ ಮುಂದಾಗದೇ ಮೌನಕ್ಕೆ ಶರಣಾಗಿದ್ದರೆ ಪ್ರತಿ ಇಲಾಖೆಯಿಂದಲೂ ಮುಖ್ಯಮಂತ್ರಿ ವಾಮಮಾರ್ಗದಿಂದ ಹಣ ಪಡೆಯುತ್ತಿದ್ದಾರೆ ಎಂಬುದನ್ನು ರಾಜ್ಯದ ಜನತೆ ಮುಂದೆ ಬಹಿರಂಗ ಪಡಿಸಬೇಕು ಬಿಜೆಪಿಯ ಭ್ರಷ್ಟಾಚಾರವನ್ನು ಮರೆಮಾಚಲು ಕಾಶ್ಮೀರ್ ಫೈಲ್ಸ್ ಎಂಬ ಚಲನ ಚಿತ್ರವನ್ನು ವೀಕ್ಷಿಸುವ ಮೂಲಕ ರಾಜ್ಯದ ಜನತೆಯ ಸಂಕಷ್ಟವನ್ನು ಅರಿಯದ ನಿರ್ಲಕ್ಷ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಎಂದು ಬಹಿರಂಗವಾಗಿದೆ. 


 ಆರೋಗ್ಯ ಇಲಾಖೆಯಲ್ಲಿ ಕೋಟ್ಯಂತರ ಅವ್ಯವಹಾರ, ಸಾರಿಗೆ ಇಲಾಖೆ ಇದ್ದೂ ಸತ್ತಂತೆ

 ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಗಲು ದರೋಡೆ 

ಕಂದಾಯ ಇಲಾಖೆಯಲ್ಲಿ ನಿತ್ಯವೂ ವಸೂಲಿ ಹೀಗೆ ಪ್ರತಿ ಇಲಾಖೆಯಲ್ಲೂ ಸಹ ಭ್ರಷ್ಟಾಚಾರ ತಾಂಡವವಾಡುತ್ತಿದೆ ಈ ಬಿಜೆಪಿ ಸರ್ಕಾರ 40%ಲಂಚ ಪಡೆಯುವ ಸರ್ಕಾರ ಎಂಬುದು ಈಗ ಜನತೆಗೆ ತಿಳಿಯುತ್ತಿದೆ ರಾಜ್ಯದ ಅಭಿವೃದ್ಧಿ ಕಡೆ ಗಮನ ಹರಿಸದೆ ಧಾರ್ಮಿಕ ಹಾಗೂ ಭಾವನಾತ್ಮಕ ವಿಷಯಗಳನ್ನು ಕೆದಕಿ ಕೋಮುವಾದವನ್ನು ಸೃಷ್ಟಿಸುವುದೇ ಬಿಜೆಪಿ ಸರ್ಕಾರದ ಒಂದಂಶದ ಕಾರ್ಯಕ್ರಮವಾಗಿದೆ.

ಬೆಂಗಳೂರು ನಗರದ ಉಸ್ತುವಾರಿ ಆಗಿರುವ ಮುಖ್ಯಮಂತ್ರಿಗಳು ಬಿಜೆಪಿ ಸದಸ್ಯರಿಗೆ ಅನುದಾನ ನೀಡಿ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಹಣ ನೀಡದೆ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ.

 ಇವರು ಬಿಜೆಪಿ ಶಾಸಕರ ಅಭಿವೃದ್ಧಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆಯೇ  ಎಂಬುದನ್ನು ತಿಳಿಸಬೇಕು ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಬಿಜೆಪಿ ಪಕ್ಷದ ನಾಯಕರು ಹಾಗೂ ಶಾಸಕರು ಭ್ರಷ್ಟಾಚಾರದ ಬಗ್ಗೆ ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ   ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ನಿರ್ಮೂಲನೆ ಮಾಡದೇ ಹೋದರೆ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಿ ತೊಲಗಬೇಕು ಎಂದು ಆಗ್ರಹಿಸಿ  ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತ್ತು. ಈ ಸಂದರ್ಭದಲ್ಲಿ ಕವಿಕಾ ಮಾಜಿ ಅಧ್ಯಕ್ಷರಾದ ಎಸ್ ಮನೋಹರ್, 

ಪ್ರಚಾರ ಸಮಿತಿಯ ಅಧ್ಯಕ್ಷರುಗಳಾದ ಜಿ ಜನಾರ್ಧನ್ ಎ ಆನಂದ್ ಎಲ್ ಜಯಸಿಂಹ  ಪ್ರಕಾಶ್ ಪರಿಸರ ರಾಮಕೃಷ್ಣ  ಚಂದ್ರು ವೆಂಕಟೇಶ್ ಆದಿ  ಪುಟ್ಟರಾಜು ಮಾರನ್ ಮಂಜುನಾಥ್  ಹಾಗೂ ಮುಂತಾದವರು ಭಾಗವಹಿಸಿದರು.

Post a Comment

0 Comments

Ad Code

Responsive Advertisement