ಮೇಕೆದಾಟು - 2.0 ಪಾದಯಾತ್ರೆ ನಿರೀಕ್ಷೆಯಂತೆಯೇ ಪ್ರಾರಂಭದಿ0ದಲೂ ಸದ್ದು ಮಾಡುತ್ತಿದ್ದು, ಇಂದು ಮಲ್ಲೇಶ್ವರದಲ್ಲಿ ಪ್ರತಿಧ್ವನಿಸಿತು.
ಕಾಂಗ್ರೆಸ್ ನ ಈ ಪಾದಯಾತ್ರೆಗೆ ಬೆಂಗಳೂರು ನಗರದಲ್ಲಿ 3ನೇ ದಿನವಾದ ಇಂದು ಗುರುವಾರ ಭರ್ಜರಿ ಯಶಸ್ಸು ಸಿಕ್ಕಿರುವುದು ಕಂಡಿದೆ. ಮಲ್ಲೇಶ್ವರ ಮುಖಾಂತರ ಹಾದು ಹೋದ ಈ ಯಾತ್ರೆ ಇಂದು ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಸಮಾರೋಪ ನಡೆಯಲಿದೆ.
ಬೆಂಗಳೂರಿಗರಿಗೆ ನಮ್ಮ ನೀರು; ನಮ್ಮ ಹಕ್ಕು... ಎಂಬ ಧ್ಯೇಯದೊಂದಿಗೆ ನಡೆಸುತ್ತಿರುವ ಹಕ್ಕೊತ್ತಾಯ ಪಾದಯಾತ್ರೆಯು ಮಲ್ಲೇಶ್ವರ ಸಂಪಿಗೆ ರಸ್ತೆ ಮುಖಾಂತರ ಚಾಮರಾಜಪೇಟೆಗೆ ತೆರಳಿ, ಆನಂತರ ಬಸವನಗುಡಿಯ ನ್ಯಾಷನಲ್ ಕಾಲೇಜ್ ನತ್ತ ತೆರಳಲಿದೆ.
ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿ ಸಾಗಿದ ಪಾದಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೆಪಿ.ಸಿ.ಸಿ. ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸಂಸದ ನಾರಾಯಣಸ್ವಾಮಿ, ಮಾಜಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ, ಕಾಂಗ್ರೆಸ್ ನ ಹಿರಿಯ ನಾಯಕರುಗಳಾದ ಬಿ.ಕೆ. ಹರಿಪ್ರಸಾದ್, ಈಶ್ವರ ಖಂಡ್ರೆ, ಲಕ್ಷಿö್ಮನಾರಾಯಣ, ಕೃಷ್ಣ ಭೈರೇಗೌಡ, ರಮಾನಾಥ ರೈ, ಯು.ಟಿ. ಖಾದರ್, ಎಂ.ಬಿ.ಪಾಟೀಲ್, ಪ್ರಿಯಾಂಕ ಖರ್ಗೆ, ಮಾಜಿ ಮೇಯರ್ ರಾಮಚಂದ್ರಪ್ಪ, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾರಾಮಯ್ಯ, ಕೆ.ಪಿ.ಸಿ.ಸಿ ವೈದ್ಯಕೀಯ ಘಟಕದ ಪ್ರಧಾನ ಕಾರ್ಯದರ್ಶಿ, ಡಾ. ಶಂಕರ ಗುಹಾ ದ್ವಾರಕಾನಾಥ್ ಬೆಳ್ಳೂರು, ಯುವ ನಾಯಕ ಬಾಲಾಜಿ ತಿಮ್ಲಾಪುರ, ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಹಿರಿಯ ನಾಯಕ ಅನೂಪ್ ಅಯ್ಯಂಗಾರ್, ಕೆ.ಸಿ. ಅಶೋಕ್, ಕೆ.ಪಿ.ಸಿ.ಸಿ. ಮಾಧ್ಯಮ ವಕ್ತಾರ ಬಿ.ಎಂ. ಪಾಟೀಲ್, ಯುವ ನಾಯಕ ರಕ್ಷಿತ್ ಶಿವರಾಂ, ಮಲ್ಲೇಶ್ವರ ಕಾಂಗ್ರೆಸ್ ಮುಖಂಡರಾದ ಗಿರೀಶ್ ಲಕ್ಕಣ್ಣ, ಬೆಂಗಳೂರು ಉತ್ತರ ಕಾರ್ಮಿಕ ವಿಭಾಗದ ಉಪಾಧ್ಯಕ್ಷರಾದ ಶ್ರೀಮತಿ ಮೈನಾ ದಿಲೀಪ್, ರಾಜರಾಜೇಶ್ವರಿ ನಗರದ ರಾಜ್‌ಕುಮಾರ್ ಪ್ರತಿಭಟನಾ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಅರಮನೆ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ವಿಶ್ವನಾಥ್ ಎಂ., ವಾರ್ಡ್ ಅಧ್ಯಕ್ಷ ಕೆ. ರವಿಚಂದ್ರ, ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಮುಖಂಡ ಹನುಮಂತೇಗೌಡ, ಕುವೆಂಪು ನಗರ ಬ್ಲಾಕ್ ಕಾಂಗ್ರೆಸ್ ಕಮಿಟಿ (ಬ್ಯಾಟರಾಯನಪುರ) ಉಪಾಧ್ಯಕ್ಷ ಎಲ್.ವೀರಣ್ಣ ಮುಂತಾದವರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
0 Comments