Ticker

6/recent/ticker-posts

Ad Code

Responsive Advertisement

ಜನರ ಬದುಕಿನ ಕಲೆಯೇ ಜನಪದ ಸಾಹಿತ್ಯವಾಗಿದ್ದು ಜನಪದವು ಬದುಕಿನ ಭಾಗ ವಾಗಬೇಕಿದೆ

 ಜನರ ಬದುಕಿನ ಕಲೆಯೇ ಜನಪದ ಸಾಹಿತ್ಯವಾಗಿದ್ದು ಜನಪದವು ಜನರ ಬದುಕಿನ ಒಂದು ಭಾಗ ವಾಗಬೇಕಾಗಿದೆ ಎಂದು ಸಂತ ಶಿಶುನಾಳ ಶರೀಫ್ ಸಾಹಿತ್ಯ ಪ್ರಚಾರಕ ಡಾ. ಎಂ.ಸಿ ನರಸಿಂಹಮೂರ್ತಿ ತಿಳಿಸಿದರು.




ತಾಲೂಕಿನ ಪುರವರ ಹೋಬಳಿಯ ಪುರವರದ ವಿಘ್ನೇಶ್ವರ ಸಮುದಾಯಭವನದಲ್ಲಿ ಸಾಂಸ್ಕೃತಿಕ ಕಲಾ ಟ್ರಸ್ಟ್ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಭಾರತ ಸ್ವಾತಂತ್ರದ ಅಮೃತ ಮಹೋತ್ಸವದ ಅಂಗವಾಗಿ 2021-22 ನೇ ಸಾಲಿನ ಗಡಿನಾಡು ಜನಪದ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ದೇಶದ ಪಾರಂಪರಿಕ ಬದುಕಿನ ಕುರುಹು ಕಲೆ ಮತ್ತು ಜನಪದವಾಗಿದೆ. ಇದನ್ನು ಸಂರಕ್ಷಿಸುವ ಹೊಣೆ ಎಲ್ಲರ ಮೇಲಿದೆ ಎಂದರು.

ಹಿರಿಯ ಸಾಹಿತಿ ಪ್ರೊ. ಮಲನ ಮೂರ್ತಿ ಮಾತನಾಡಿ, ಭಾವಗೀತೆಯ ಆಸ್ತಿಯ ಜನಪದ ಕಲೆಯಾಗಿದ್ದು ಇದಕ್ಕೆ ಗುರುಗಳೇ ಇಲ್ಲ ನೂತನ ಕಲೆಗಳಿಗೆ ಜಾನಪದವು ತಾಯಿ ಬೇರಾಗಿದ್ದು,ವಿವಿಧ ರೂಪದಲ್ಲಿದೆ. ಬದುಕಿನ ಜೊತೆಗೆ ಕಾಯಕವನ್ನು ಮಾಡುತ್ತಾ ಇತರ ಚಟುವಟಿಕೆಗಳಾಗಿ ಮೂಡಿಬಂದಿರುವುದು ಕಲೆ ಹಾಗೂ ಜನಪದ. ಜನಪದದಿಂದ ಹುಟ್ಟಿಕೊಂಡ ನೂತನ ಕಲೆಗಳು ಇಂದು ಮಾರುಕಟ್ಟೆಯ ಸರಕುಗಳಾಗಿವೆ. ಆದರೆ ಇಂದಿನ ಜನಪದ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡುವ ಕಾರ್ಯ ನಿಲ್ಲಬಾರದು. ಜನಪದ ದೇಶದ ನೂರಾರು ಸಮುದಾಯಗಳ ಬದುಕಿನ ದಾರಿಯಾಗಿದ್ದು ದೇಶದ ಸಾಂಸ್ಕೃತಿಕ ಗುರುತನ್ನು ಉಳಿಸಲು ಯುವಪೀಳಿಗೆ ಮುಂದಾಗಬೇಕು ಎಂದರು.

ಶಾಲೆಯ ಮುಖ್ಯ ಶಿಕ್ಷಕರಾದ ವೆಂಕಟರವಣಪ್ಪ ಮಾತನಾಡಿ

ಈ ಕಲಾ ಸಂಸ್ಕೃತಿಯನ್ನು ಆಚರಿಸುವುದರಿಂದ ಯಾವ ಭಾಷೆಗಳ ಬಗ್ಗೆಯೂ ವಿವಾದ ವಿರುವುದಿಲ್ಲ ಜೊತೆಗೆ ಜನಗಳಲ್ಲಿ ಬಾಂಧವ್ಯ ಕೂಡ ಬೆಳೆಯುತ್ತದೆ. ಕನ್ನಡನಾಡಿನ ಜನಪದ ಅಂದರೆ ಜನರ ಜೀವ ವಾಗಿರಬೇಕು ಜೊತೆಗೆ ಸಮಾಜಕ್ಕೆ ಜನಪದ ಕಲೆಯನ್ನು ಕಲಿಸಬೇಕು ಹಾಗೆಯೇ ಉಳಿಸುತ್ತಾ ಹೋಗಬೇಕು ಎಂದರು.

ಈ ವೇಳೆಯಲ್ಲಿ ತಾಲ್ಲೂಕು ಕಸಾಪ ಅಧ್ಯಕ್ಷೆ ಸಹನಾ ನಾಗೇಶ್, ಕವಯತ್ರಿ ವೀಣಾ ಶ್ರೀನಿವಾಸ್, ಕಲಾ ಟ್ರಸ್ಟ್ ನ ಅಧ್ಯಕ್ಷ ಅರಳಾಪುರ ಶಿವಣ್ಣ, ಕನ್ನಡಪರ ಹೋರಾಟಗಾರ ಶಿವಕುಮಾರ್ ಕಲಾವಿದ ಲಲಿತಾಂಬ, ಲಕ್ಷ್ಮಿ ನರಸಯ್ಯ, ಅರಳಾಪುರ ರಮೇಶ್ ಕುಮಾರ್, ಗಿರಿರಾಜು, ರಾಮಕುಮಾರ್, ಶಂಕರ್, ಚಂದ್ರಣ್ಣ, ಪುರವರ ಮುಖಂಡ ಪಿ‌.ಕೆ ರಂಗಸ್ವಾಮಯ್ಯ, ಕೃಷ್ಣಮೂರ್ತಿ, ನಾರಾಯಣ ಹಾಗೂ ಜನಪದ ಕಲಾತಂಡಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

-ವರದಿ:ನಾಗೇಶ್ ಜೀವಾ ಮಧುಗಿರಿ.

Post a Comment

0 Comments

Ad Code

Responsive Advertisement