Ticker

6/recent/ticker-posts

Ad Code

Responsive Advertisement

"ಮನಸೆಳೆದ ಭಕ್ತಿ ಸಂಗೀತ"

ಬೆಂಗಳೂರಿನ ಗಾಂಧೀಬಜಾರ್ ನಲ್ಲಿರುವ ಪ್ರಸನ್ನವರದ ಶ್ರೀ ಶ್ರೀನಿವಾಸ ಸ್ವಾಮಿ ದೇವಸ್ಥಾನ (ಸೋಸಲೆ ಶ್ರೀ ವ್ಯಾಸರಾಜ ಮಠ)ದಲ್ಲಿ, ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ "ಹರಿನಾಮ ಸಂಕೀರ್ತನೆ" ಕಾರ್ಯಕ್ರಮದಲ್ಲಿ ಶ್ರೀಮತಿ ರಂಜಿತಾ ಪ್ರಸಾದ್ ಮತ್ತು ಶ್ರೀಮತಿ ಭಾವನಾ ಮೂರ್ತಿ ಅವರು ಮೊದಲಿಗೆ ವಿಘ್ನೇಶ್ವರನನ್ನು ಪ್ರಾರ್ಥಿಸುತ್ತಾ, ಶ್ರೀ ಜನಾರ್ಧನ ವಿಠಲ ದಾಸರ "ಮೋದಕ ಪ್ರಿಯನ ಗಜಾನನ" ಎಂಬ ಕೃತಿಯೊಂದಿಗೆ ತಮ್ಮ ಗಾಯನ ಸೇವೆಯನ್ನು ಪ್ರಾರಂಭಿಸಿ, ನಂತರ "ಬಾರೋ ನಮ್ಮ ಮನೆಗೆ" (ಮಧ್ವೇಶ ವಿಠಲ), "ತುಂಗಾ ತೀರದಿ ನಿಂತ" (ಜನಾರ್ಧನ ವಿಠಲ), ಶಿವ ಶಿವ ಶಿವ ಎನ್ನಿರೋ" (ಕನಕದಾಸರು), "ಪವಮಾನ ಜಗದ ಪ್ರಾಣ" (ವಿಜಯದಾಸರು), "ನಿಲ್ಲೇ ನಿಲ್ಲೇ ಕೊಲ್ಹಾಪುರ ದೇವಿ" (ಭೀಮೇಶ ಕೃಷ್ಣ), "ಬಾ ಬಾ ಭಕುತರ ಪ್ರಿಯಾ" (ವಿಜಯವಿಠಲ), "ಎಂತು ನಿನ್ನ ಮೆಚ್ಚಿಸುವೆ" (ವಿಜಯ ವಿಠಲ), "ಮೊಸರು ಕಡೆದಳಮ್ಮ" (ಪ್ರಸನ್ನವೆಂಕಟದಾಸರು), "ಸಿಂಹರೂಪನಾದ ಶ್ರೀ ಹರಿ" (ಪುರಂದರದಾಸರು), "ತಾತ್ತ ಧಿಮಿತ" (ಪುರಂದರದಾಸರು), "ಏನು ಕಾರಣದಿಂದ ಮಲಗಿರುವೆಯೋ" (ವಿಜಯದಾಸರು), ಇನ್ನೂ ಮೊದಲಾದ ಹಲವಾರು ಅಪರೂಪದ ಕೃತಿಗಳನ್ನು ಸುಶ್ರಾವ್ಯವಾಗಿ ಹಾಡಿ, ಕೊನೆಯಲ್ಲಿ ಶ್ರೀ ವಿಜಯದಾಸರ "ಜಯಮಂಗಳಂ ನಿತ್ಯ ಶುಭಮಂಗಳಂ" ಎಂಬ ಕೃತಿಯೊಂದಿಗೆ ಅಂದಿನ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು. 




ಇವರ ಗಾಯನಕ್ಕೆ ವಾದ್ಯ ಸಹಕಾರದಲ್ಲಿ, ವಿದ್ವಾನ್ ಶ್ರೀ ಅಮೃತೇಶ್ ಕುಲಕರ್ಣಿ ತಬಲಾದಲ್ಲಿ, ವಿದ್ವಾನ್ ಶ್ರೀ ಅಮಿತ್ ಶರ್ಮಾ ಕೀ-ಬೋಡ್೯ನಲ್ಲಿ ಸಾಥ್ ನೀಡಿದರು. ಒಟ್ಟಿನಲ್ಲಿ ಈ ಕಾರ್ಯಕ್ರಮವು ನೆರೆದಿದ್ದ ಸಂಗೀತಾಭಿಮಾನಿಗಳ ಮನಸೂರೆಗೊಂಡಿತು.

ಶ್ರೀ ರಾಮ ಮಂದಿರ  ಮತ್ತು ದಾಸವಾಣಿ ಸಮೂಹದ ಸಂಯುಕ್ತಾಶ್ರಯದಲ್ಲಿ ಮಲ್ಲೇಶ್ವರಂ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ ಶ್ರೀ ರಾಮ ಮಂದಿರದಲ್ಲಿ ಮಾರ್ಚ್ 12 ರಂದು ಶೇಷಾದ್ರಿಪುರದ ಶ್ರೀ ಸುಶಮೀಂದ್ರ ಭಜನಾ ಮಂಡಳಿಯ ಸದಸ್ಯರಿಂದ ಭಜನಾಮೃತ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

 -ದೇಸಾಯಿ ಸುಧೀಂದ್ರ

Post a Comment

0 Comments

Ad Code

Responsive Advertisement