ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ರೈನ್ ಬೋ ಚಿಲ್ಡ್ರನ್ಸ್ ಆಸ್ಪತ್ರೆ ಹಮ್ಮಿಕೊಂಡಿರುವ ಬೈಕ್ ರ್ಯಾಲಿಗೆ ಕರ್ನಾಟಕ ಸರ್ಕಾರದ ಗೌರವಾನ್ವಿತ ಆರೋಗ್ಯ ಸಚಿವರಾದ ಶ್ರೀ ಡಾ.ಕೆ.ಸುಧಾಕರ್ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಟಿ ಮೇಘನಾ ರಾಜ್ ಚಾಲನೆ ನೀಡಲಿದ್ದಾರೆ.
ಮಾರ್ಚ್ 12ರ ಶನಿವಾರ ಮಾರತಹಳ್ಳಿಯ ರೈನ್‌ಬೋ ಚಿಲ್ಡ್ರನ್ಸ್ ಆಸ್ಪತ್ರೆಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಹಿಳಾ ಬೈಕ್ ರ್ಯಾಲಿಗೆ ಚಾಲನೆ ನೀಡಲಿದ್ದು, ಬನ್ನೇರುಘಟ್ಟ ರಸ್ತೆಯ ರೈನ್‌ಬೋ ಮಕ್ಕಳ ಆಸ್ಪತ್ರೆಯಿಂದ ಖ್ಯಾತ ನಟಿ ಮೇಘನಾ ರಾಜ್ ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಈ ವಿಶೇಷ ರ್ಯಾಲಿಯನ್ನು ರೇನ್‌ಬೋ ಚಿಲ್ಡ್ರನ್ಸ್ ಆಸ್ಪತ್ರೆಯು ಬ್ರೇಕ್ ದಿ ಬಯಾಸ್ ಎಂಬ ಥೀಮ್ ನೊಂದಿಗೆ ಆಯೋಜಿಸಲಾಗಿದೆ.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಈ ವಿಶೇಷ ಮಹಿಳಾ ಬೈಕ್ ರ್ಯಾಲಿಯನ್ನು ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ, ಮಾರತಹಳ್ಳಿ ಮತ್ತು ಬನ್ನೇರುಘಟ್ಟ ರಸ್ತೆಯಿಂದ ಬೈಕ್ ಸವಾರರು ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರ ಸಮಾನತೆಗಾಗಿ, ಲಿಂಗ ತಾರತಮ್ಯ ನಿವಾರಿಸುವ ಧ್ಯೇಯದೊಂದಿಗೆ ಹಾಗೂ ಮಹಿಳೆಯರಿಗೆ ಸುರಕ್ಷಿತ ಬೆಂಗಳೂರನ್ನು ನಿರ್ಮಿಸಲು ಆಗ್ರಹಿಸಿ ಬೈಕ್ ರ್ಯಾಲಿ ನಡೆಸಲಿದ್ದಾರೆ.
0 Comments