“ಬೆ0ಗಳೂರು, ಮಾ.21: ಹೆಬ್ಬಾಳ ಅಂಡರ್ ಪಾಸ್ ನಲ್ಲಿ ನೀರು ತುಂಬಿದ್ದ ಕಾರಣ ಅಕ್ಷಯ ಎಂಬ ಹೆಣ್ಣುಮಗಳು ದುರ್ಮರಣಕ್ಕೀಡಾಗಿದ್ದಾಳೆ.
ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷö್ಯದಿಂದ ಹೆಣ್ಣುಮಗಳ ಜೀವ ಬಲಿಯಾಗಿದೆ ಎಂದರೆ ತಪ್ಪಲಾಗರದು. ಹೆಬ್ಬಾಳದ ಅಂಡರ್ ಪಾಸ್ ನಲ್ಲಿ ನೀರು ತುಂಬಿದ್ದ ಕಾರಣ ರಸ್ತೆ ದಾಟಲು ಹಲವರು ರಸ್ತೆ ವಿಭಜಕ ದಾಟಲು ಬಳಸುವುದು ಸಾಮಾನ್ಯ.
ಇದೆಕ್ಕೆಲ್ಲ ಬಿಬಿಎಂಪಿಯ ಉದಾಸೀನತೆ ಕಾರಣ ಎಂದರೆ ತಪ್ಪಾಗಲಾರದು.
ಅಂಡರ್ ಪಾಸ್ ನಲ್ಲಿ ತುಂಬಿದ್ದ ನೀರು ಖಾಲಿ ಮಾಡಿದ್ದರೆ ಸಾರ್ವಜನಿಕರು ರಸ್ತೆ ಬದಲಾಗಿ ಅಂಡರ್ ಪಾಸ್ ಬಳಸುತ್ತಿದ್ದರು. ನೀರು ತುಂಬಿದ್ದ ಕಾರಣ ರಸ್ತೆ ವಿಭಜಕ ದಾಟುವುದಕ್ಕೆ ಬಳಸುವುದು ಸಾಮಾನ್ಯ.
ಅದೇ ರೀತಿ ಇಂದಿನ ದಿನ, ಮಧ್ಯಾಹ್ನ, ಹೆಬ್ಬಾಳದ ಅಂರ‍್ಪಾಸ್ ಬಳಕೆಯಾಗದೆ ಹೆಣ್ಣುಮಗಳು ರಸ್ತೆ ಬಳಸಿ ವಿಭಜಕ ದಾಟುವ ಸಂದರ್ಭದಲ್ಲಿ ಬಿಬಿಎಂಪಿಯ ಕಸದ ಲಾರಿಯೊಂದ ಅಡ್ಡ ಬಂದುದರಿAದ ಅಪಘಾತಕ್ಕೊಳಗಾಗಿರುವ ಘಟನೆ ನಡೆದಿದೆ. ಅಕ್ಷಯ ಎಂಬ ಹೆಣ್ಣುಮಗಳ ಪ್ರಾಣಪಕ್ಷಿ ಹಾರಿಹೋಗಿದೆ. ಅಂಡರ್ ಪಾಸಿನಲ್ಲಿ ನೀರು ತುಂಬಿರುವ ಬಗ್ಗೆ ಪೊಲೀಸರಿಂದಲು ಕೂಡ ಬಿಬಿಎಂಪಿಗೆ ಮಾಹಿತಿ ಇದ್ದು, ಬಿಬಿಎಂಪಿಯ ಉದಾಸೀನತೆ ಈ ಘಟನೆಗೆ ಕಾರಣ.
ಮೊದಲೆ ತುಂಬಿದ್ದ ನೀರು ಖಾಲಿ ಮಾಡಿಸಿದ್ದರೆ ಈ ದುರ್ಘಟನೆ ಸಂಭವಿಸುತ್ತಿರಲಿಲ್ಲ ಎಂಬುದು ಜನರ ಅಭಿಪ್ರಾಯ. ಹೆಬ್ಬಾಳ ಪೋಲೀಸ್ ಠಾಣೆ ಮುಂಭಾಗದಲ್ಲಿ ಈ ಘಟನೆ ನಡೆದಿದೆ. ಸಾರ್ವಜನಿಕರು ಬಿಬಿಎಂಪಿ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದುದು ಕೇಳಿಬರುತ್ತಿತ್ತು.


0 Comments