ಮಾಗಡಿ: ತಾಲೂಕಿನ ಜೈನಬಸದಿ ಸ್ಥಳವಿರುವ ಸಂಕೀಘಟ್ಟ ಜಿಲ್ಲಾಉಸ್ತುವಾರಿ ಸಚಿವರ ತವರುಮನೆ ಇಲ್ಲಿ (ಮಾರ್ಚ 16) ಮೊಟ್ಟಮೊದಲ ಪಂಚಾಯಿತಿಗೊ0ದು ಪಬ್ಲಿಕ್ ಶಾಲೆ ಉದ್ಘಾಟನೆ ನಡೆಯಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಯತಿಕುಮಾರ್ ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥನಾರಾಯಣ,ಶಾಸಕ ಎ.ಮಂಜುನಾಥ್,ಜಿಲ್ಲಾ ಮತ್ತು ತಾಲೂಕು ಆಡಳಿತವರ್ಗದ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಗ್ರಾಮಪಂಚಾಯಿತಿಗೆ ಒಂದು ಪಬ್ಲಿಕ್ ಶಾಲೆಯಲ್ಲಿ 1 ರಿಂದ ಪಿಯುಸಿವರೆವಿಗೆ ಒಂದೆ ಸ್ಥಳದಲ್ಲಿ ಶಿಕ್ಷಣ ಕೊಡುವುದು. ಸುತ್ತಲ ಹತ್ತಾರು ಪ್ರಾಥಮಿಕ ಶಾಲಾ ಮಕ್ಕಳಿಗೆ ವಾಹನದ ವ್ಯವಸ್ಥೆ ಪೂರಕವಾದ ಪ್ರತಿವಿದ್ಯಾರ್ಥಿಗೆ ತಿಂಗಳಿಗೆ ಒಂದುಸಾವಿರ ಸಹಾಯಧನ,ಸುಭದ್ರ ಕಟ್ಟಡ,ಆಧುನಿಕ ಶೌಚಾಲಯ,ಕ್ರೀಡಾ ಮೈದಾನ, ವಿಷಯವಾರು ಬೋಧಕ,ಶಿಕ್ಷಕರ ವೃಂದ,ಪ್ರಯೋಗಾಲಯ,ಸಮವಸ್ತç,ಮಧ್ಯಾಹ್ನದ ಬಿಸಿಯೂಟ,ಶುದ್ಧಕುಡಿಯುವ ನೀರು, ಎಲ್ಲವೂ ಸರಕಾರಿ ಅನುದಾನದಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ಸಲುವಾಗಿ ಖಾಸಗಿ ಶಾಲೆಗಳ ದುಬಾರಿ ಶುಲ್ಕದವೆಚ್ಚವನ್ನುನಿಭಾಯಿಸಲು ಆಗದ ಕುಟುಂಬಗಳ ಪೋಷಕರಿಗೆ,ಮಕ್ಕಳಿಗೆ ಇದು ವರದಾನವಾಗಲಿದೆ,ಖಾಸಗಿ ಶಾಲೆಗಳಿಗೆ ಹೋಗುವವರನ್ನು ನಿರ್ಬಂಧ ಪಡಿಸುವುದಿಲ್ಲ" ಎಂದು ಶಾಸಕ ಎ.ಮಂಜು ವಿವರಿಸಿದ್ದಾರೆ.
ಇದು ಕಾಗೇರಿಯವರು ಶಿಕ್ಷಣಸಚಿವರು ಆಗಿದ್ದಾಗ ರೂಪಿಸಿದ ಯೋಜನೆಯ ಕನಸು. ಗ್ರಾಮೀಣ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚು ಅನುಕೂಲಗಳು ಇಲ್ಲಿವೆ. ಪ್ರತಿಹಳ್ಳಿಯಲ್ಲಿ ಸರಕಾರಿ ಶಾಲೆಯೊಂದೆ ಸರಕಾರದ ಕುರುಹು.ಅದು ಇಲ್ಲದಂತಾಗುತ್ತದೆ ಎಂಬ ರಾಜಕೀಯ ಕೀಟಲೆಗಳನ್ನು ನಿರೀಕ್ಷೆಮಾಡಿಯೆ ಈ ಯೋಜನೆಯನ್ನು ತಜ್ಞರಿಂದ ರೂಪಿಸಿದೆ.ತಾಲೂಕಿನಲ್ಲಿ ಇದು ಮೊಟ್ಟಮೊದಲ ಪಂಚಾಯಿತಿಗೊAದು ಮಾದರಿ ಪಬ್ಲಿಕ್‌ಶಾಲೆ ಉದ್ಘಾಟನೆ ಸಂಕೀಘಟ್ಟದಲ್ಲಿ ನಡಯುತಿದೆ.
0 Comments