Ticker

6/recent/ticker-posts

Ad Code

Responsive Advertisement

News: ಹಿರಿಯ ಗಾಯಕ ಮತ್ತು ಸಂಗೀತ ಸಂಯೋಜಕ ಬಪ್ಪಿ ಲಹಿರಿ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

ನವದೆಹಲಿ, ಫೆ 16: ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಿರಿಯ ಗಾಯಕ ಮತ್ತು ಸಂಗೀತ ಸಂಯೋಜಕ ಶ್ರೀ ಬಪ್ಪಿ ಲಹಿರಿ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ನಲ್ಲಿ ಪ್ರಧಾನಿ ಅವರು, "ಶ್ರೀ ಬಪ್ಪಿ ಲಹಿರಿ ಅವರ ಸಂಗೀತವು ಎಲ್ಲವನ್ನೂ ಒಳಗೊಂಡಿರುತ್ತದೆ, ವೈವಿಧ್ಯಮಯ ಭಾವನೆಗಳನ್ನು ಸುಂದರವಾಗಿ ವ್ಯಕ್ತಪಡಿಸುತ್ತದೆ. ಹಲವು ತಲೆಮಾರುಗಳ ಜನರು ಅವರ ಕೃತಿಗಳೊಂದಿಗೆ ಬೆಸೆದುಕೊಂಡಿದ್ದಾರೆ. ಅವರ ಉತ್ಸಾಹಭರಿತ ಜೀವಂತಿಕೆಯ ಸ್ವಭಾವವನ್ನು ಎಲ್ಲರೂ ಕಳೆದುಕೊಳ್ಳುತ್ತಾರೆ. ಅವರ ನಿಧನದಿಂದ ದುಃಖವಾಗಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ," ಎಂದಿದ್ದಾರೆ.

Varthajala daily, Bengaluru

Post a Comment

0 Comments

Ad Code

Responsive Advertisement