Ticker

6/recent/ticker-posts

Ad Code

Responsive Advertisement

Fresh Flash news: ಬಿಜೆಪಿಯನ್ನು ದೂರವಿಡಲು ಅಂಬೇಡ್ಕರ್ ಹಿಂಬಾಲಕರು ಎಸ್ಪಿ ಸೇರಬೇಕು: ಅಖಿಲೇಶ್ ಯಾದವ್

ಬುಲಂದ್ಶಹರ್, ಫೆ 03: ಬಿಜೆಪಿಯನ್ನುಅಧಿಕಾರದಿಂದ ದೂರವಿಡಲು ಡಾ. ಅಂಬೇಡ್ಕರ್ ಹಿಂಬಾಲಕರು ತಮ್ಮ ಪಕ್ಷವನ್ನು ಸೇರ್ಪಡೆಗೊಳ್ಳಬೇಕು ಎಂದು ಸಮಾಜವಾದಿ ಪಕ್ಷದ (ಎಸ್ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಕರೆ ನೀಡಿದರು.

ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ತಮ್ಮ ಪ್ರಯತ್ನಕ್ಕೆ ಎಲ್ಲರೂ ಕೈಜೋಡಿಸಬೇಕು, ಸಹಕರಿಸಬೇಕು ಹಾಗು ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಅಧಿಕಾರ ನೀಡಬೇಕು ಎಂದು ಮನವಿ ಮಾಡಿದರು. 

ಈ ಮೂಲಕ ಸಂವಿಧಾನ, ಪ್ರಜಾಪ್ರಭುತ್ವವನ್ನು ಉಳಿಸಬಹುದು ಮತ್ತು ಜನರನ್ನು ರಕ್ಷಿಸಬಹುದು ಎಂದು ಹೇಳಿದರು.

ಒಂದು ವೇಳೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ರಕ್ಷಿಸಲು ಸಾಧ್ಯವಾಗದಿದ್ದರೆ ನಮ್ಮ ಹಕ್ಕಿಗೆ ಏನು ಸಂಭವಿಸಬಹುದು ಎಂಬುದನ್ನು ಯೋಚಿಸಿ ನೋಡಿ ಎಂದು ಹೇಳಿದರು.

ನಮ್ಮ ಪಕ್ಷದಲ್ಲಿ ಬಹು ಬಣ್ಣದ ಜನರು ಒಳಗೊಂಡಿದ್ದಾರೆ. ಕೆಂಪು, ಹಸಿರು, ಬಿಳಿ ಮತ್ತು ನೀಲಿ ಹೀಗೆ ಎಲ್ಲ ಬಣ್ಣದ ಜನರು ನಮ್ಮ ಪಕ್ಷದಲ್ಲಿದ್ದಾರೆ ಎಂದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ದ ವಾಗ್ದಾಳಿ ನಡೆಸಿದ ಅಖಿಲೇಶ್, ರಾಜ್ಯದ ಯುವ ಜನತೆಯು ಉದ್ಯೋಗವನ್ನು ಕಸಿದುಕೊಂಡಿರುವ ಬಿಜೆಪಿಯನ್ನು ಸೋಲಿಸಲಿದ್ದಾರೆ ಎಂದು ಹೇಳಿದರು.

Varthajala Daily, Bengaluru

Contact for advertisements 9448119247

Post a Comment

0 Comments

Ad Code

Responsive Advertisement