Ticker

6/recent/ticker-posts

Ad Code

Responsive Advertisement

Flash News: ಶಿವಮೊಗ್ಗದಲ್ಲಿ ನಡೆದ ಕೊಲೆಗೆ ಸರಕಾರ ತಪ್ಪು ಹೆಜ್ಜೆಗಳೇ ಕಾರಣ: ಕುಮಾರಸ್ವಾಮಿ

ಬೆಂಗಳೂರು, ಫೆ 22: ಹಿಜಾಬ್, ಕೇಸರಿ ಶಾಲು ಹಾಗೂ ಶಿವಮೊಗ್ಗದಲ್ಲಿ ನಡೆದ ಕೊಲೆಗೆ ಸರಕಾರ ತಪ್ಪು ಹೆಜ್ಜೆಗಳೇ ಕಾರಣ ಎಂದು ಮಾಜಿಮುಖ್ಯಮಂತ್ರಿ ಕುಮಾರಸ್ವಾಮಿ ಸರಕಾರದ ವಿರುದ್ದ ಗುಡುಗಿದರು.

ಬಡವರ ಮನೆ ಮಕ್ಕಳನ್ನು ಇಂಥ ಘಟನೆಗಳು ಬಳಿ ತೆಗೆದುಕೊಳ್ಳುತ್ತವೆ. ಶ್ರೀಮಂತರ ಮಕ್ಕಳು, ಉಳ್ಳವರ ಮಕ್ಕಳು ಅಥವಾ ಮೇಲ್ಜಾತಿಯವರ ಮಕ್ಕಳು ಇಂಥ ಘಟನೆಗಳಲ್ಲಿ ಭಾಗಿಯಾಗುವುದಿಲ್ಲ. ಎರಡೂ ಹೊತ್ತು ಊಟಕ್ಕೂ ಕಷ್ಟ ಇರುವ ಬಡವರ ಮಕ್ಕಳು ಇಂಥ ಷಡ್ಯಂತ್ರಕ್ಕೆ ಬಲಿ ಆಗುತ್ತಿದ್ದಾರೆ. ಇಂಥ ವಿಷಯಗಳ ಬಗ್ಗೆ ಸದನ ಚರ್ಚೆ ನಡೆಸಬೇಕಿತ್ತು. ಇನ್ನಾದರೂ ರಾಷ್ಟ್ರೀಯ ಪಕ್ಷಗಳು ಬಡಮಕ್ಕಳ ಜೀವನದ ಜತೆ ಚೆಲ್ಲಾಟ ಆಡುವುದನ್ನು ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದರು.

ಇದಕ್ಕೆಲ್ಲಾ ಕಾರಣ ಯಾರು ಅಂತ ವಿರೋಧ ಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಬೇಕಿತ್ತು. ಹಾಗೆ ಆಗಲಿಲ್ಲ. ಇದು ಅಧಿಕೃತ ಪ್ರತಿಪಕ್ಷ ಕಾಂಗ್ರೆಸ್‌ನ ನೈತಿಕ ಅಧಃಪತನವನ್ನು ತೋರಿಸುತ್ತದೆ ಎಂದ ಅವರು; ಇಂಥ ಘಟನೆಗಳಿಂದ ಅನೇಕ ಕುಟುಂಬಗಳು ಬೀದಿ ಪಾಲಾಗಿವೆ. ಇಂಥ ಒಬ್ಬ ಯುವಕ ಬಲಿಯಾದರೆ ಆ ಮನೆಯೇ ಬೀದಿಗೆ ಬಿದ್ದಂತೆ. ಆ ತಂದೆ ತಾಯಿ ಭವಿಷ್ಯವೇನು? ಅಂಥ ಕುಟುಂಬಗಳ ಪರಿಸ್ಥಿತಿ ಬಗ್ಗೆ ಎರಡು ರಾಷ್ಟ್ರೀಯ ಪಕ್ಷಗಳು ಯೋಚನೆ ಮಾಡುತ್ತಿಲ್ಲ. ಶಿವಮೊಗ್ಗದಲ್ಲಿ ಕೊಲೆ ಆಗಿರುವ ಆ ಯುವಕನದ್ದು ಶ್ರೀಮಂತ ಕುಟುಂಬ ಅಲ್ಲ. ಸಣ್ಣ ಸಮಾಜದ ಹುಡುಗ ಆತ. ಹೀಗೆ ಅನೇಕ ಉದಹರಣೆಗಳನ್ನು ಕೊಡಬಹುದು ಎಂದು ಕುಮಾರಸ್ವಾಮಿ ಅವರು ಹೇಳಿದರು.

Varthajala daily, Bengaluru

Post a Comment

0 Comments

Ad Code

Responsive Advertisement