Ticker

6/recent/ticker-posts

Ad Code

Responsive Advertisement

Flash News: ಯೋಗಿ ಆದಿತ್ಯನಾಥ್ ಆಸ್ತಿ ೧.೫ ಕೋಟಿ, ೧ ರಿವಾಲ್ವಾರ್, ೧ ಪಿಸ್ತೂಲ್ ಇದೆ !

ಉತ್ತರ ಪ್ರದೇಶ, ಫೆ ೦೪: ಇಂದು ಶುಕ್ರವಾರ ಗೋರಖ್ ಪುರ ಗ್ರಾಮೀಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಾಮಪತ್ರ ಸಲ್ಲಿಸಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಪಕ್ಷದ ಇತರೆ ಹಿರಿಯ ಮುಖಂಡರು ಯೋಗಿ ಆದಿತ್ಯನಾಥ್‌ರವರಿಗೆ ಸಾಥ್ ನೀಡಿದರು. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಬಿಜೆಪಿ ಭರ್ಜರಿ ಪ್ರಚಾರದ ನಡುವೆ ಯೋಗಿ ಆದಿತ್ಯನಾಥ್‌ರವರು ಪಕ್ಷದ ಹಿರಿಯರು ಹಾಗು ಮುಖಂಡರ ಜೊತೆಗೆ ತರೆಳಿ ನಾಮಪತ್ರ ಸಲ್ಲಿಸಿದರು.

ಯೋಗಿ ಆದಿತ್ಯನಾಥ್ ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ ಆಸ್ತಿ ವಿವರದಲ್ಲಿ ೧.೫ ಕೋಟಿ ರೂ ಹಾಗು ೧ ರಿವಾಲ್ವಾರ್ ಹಾಗು ೧ ಪಿಸ್ತೂಲ್ ಇದೆ ಎಂದು ಘೋಷಣೆ ಮಾಡಿಕೊಂಡಿದ್ದಾರೆ.

ಸ್ವ ಘೋಷಿತ ಆಸ್ತಿ ಪ್ರಕಾರ ಯೋಗಿ ಆದಿತ್ಯನಾಥ್ ಆಸ್ತಿ ೧,೫೪,೯೪,೦೫೪ ರೂ. ಆಗಿದೆ. ಇದರಲ್ಲಿ ಕೈಯಲ್ಲಿರುವ ನಗದು, ೬ ಬ್ಯಾಂಕ್ ಖಾತೆಗಳಲ್ಲಿ ಇರುವ ಮೊತ್ತವೂ ಸೇರಿದೆ.

೧೨ ಸಾವಿರ ರೂ. ಮೌಲ್ಯದ ಸ್ಯಾಮ್ ಸಂಗ್ ಮೊಬೈಲ್, ೧,೦೦,೦೦೦ ರೂ. ಮೌಲ್ಯದ ರಿವಾಲ್ವರ್ ಮತ್ತು ೮೦ ಸಾವಿರ ರೂ. ಮೌಲ್ಯದ ರೈಫಲ್ ಇದೆ. ಯೋಗಿ ಆದಿತ್ಯನಾಥ್ ಅವರ ಆಸ್ತಿ ೨೦೨೧ರಲ್ಲಿ ೧೩,೨೦,೬೪೩ ರೂ. ಆಗಿದೆ. ಆದರೆ ೨೦೧೯-೨೦ನೇ ಸಾಲಿಗೆ ಹೋಲಿಸಿದರೆ ೧೫,೬೮,೭೯೯ ರೂ.ಗಿಂತ ಕಡಿಮೆ ಆಗಿದೆ.

ಯೋಗಿ ಆದಿತ್ಯನಾಥ್ ಬಳಿ ಯಾವುದೇ ಕೃಷಿ ಅಥವಾ ಕೃಷಿಯೇತರ ಸ್ವಂತ ಭೂಮಿ ಇಲ್ಲ. ಅಲ್ಲದೇ ಸ್ವಂತ ವಾಹನ ಅಥವಾ ಸಾಲ ಇಲ್ಲ.

Varthajala Daily, Bengaluru

Contact for advertisements 9448119247

Post a Comment

0 Comments

Ad Code

Responsive Advertisement