ಬೆಂಗಳೂರು, ಫೆ 16: ಸದನದಲ್ಲಿ ರಾಷ್ಟ್ರಧ್ವಜಹಡಿದು ಧರಣಿಗಿಳಿದ ಕಾಂಗ್ರೆಸ್ ಸದಸ್ಯರು, ವಿಧಾನಸಭೆ ಕಲಾಪವನ್ನ ನಾಳೆಗೆ ಮುಂದೂಡಿದ ಸಭಾಧ್ಯಕ್ಷ ಕಾಗೇರಿ.
ಭೋಜನ ವಿರಾಮದ ನಂತರ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದ0ತೆ ಸದನದಲ್ಲಿ ಕಾಂಗ್ರೆಸ್ ಸದಸ್ಯರು ಸದನದ ಭಾವಿಗಿಳಿದು ಧರಣಿ ಮುಂದುವರೆಸಿದರು. ಜೊತೆಗೆ ರಾಷ್ಟ್ರಧ್ವಜವನ್ನ ಹಿಡಿದು ಧರಣಿ ನಡೆಸಲು ಮುಂದಾದ ಕಾಂಗ್ರೆಸ್ ಸದಸ್ಯರಿಗೆ ಸಭಾಧ್ಯಕ್ಷರು ವಿರೋಧ ವ್ಯಕ್ತಪಡಿಸಿದರು.
ರಾಷ್ಟ್ರಧ್ವಜವನ್ನ ನಿಮ್ಮ ಪ್ರತಿಭಟನೆಗೆ ಬಳಸಿಕೊಳ್ಳುವುದು ಸರಿಯಲ್ಲ. ನಿಮ್ಮ ರಾಜಕೀಯ ಪಕ್ಷಕ್ಕೆ ದೊಡ್ಡ ಇತಿಹಾಸ ಇದೆ. ರಾಷ್ಟ್ರಧ್ವಜವನ್ನ ಈ ರೀತಿಯ ಉದ್ದೇಶಕ್ಕೆ ಬಳಸಿಕೊಳ್ಳಬಾರದು, ರಾಷ್ಟçಧ್ವಜವನ್ನ ಹಿಡಿದು ನಿಮಿಗಿಷ್ಟಬಂದ0ತೆ ಆಡಿಸುವುದಕ್ಕೆ ಇದೇನು ನಿಮ್ಮ ಪಕ್ಷದ ಧ್ವಜನಾ ಎಂದು ಆಕೋಶಪಟ್ಟರು. ಇದಕಿಂತ ದೇಶದ್ರೋಹ ಚಟುವಟಿಕೆ ಮತ್ತೊಂದಿಲ್ಲ ಎಂದು ಕಾಂಗ್ರೆಸ್ ನಡೆಗೆ ಸ್ಪೀಕರ್ ರವರು ಅಸಮಾಧಾನ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ ರಾಷ್ಟ್ರಧ್ವಜಕ್ಕೆ ಅದರೆದೇ ಆದ ಘನತೆ ಗೌರವ ಇದೇ, ಅದಕ್ಕೆ ಗೌರವ ಕೊಡುದುವುದನ್ನು ಮೊದಲು ಕಲಿಯಬೇಕು. ರಾಷ್ಟ್ರಧ್ವಜಕ್ಕೆ ಕಾಂಗ್ರೆಸ್ ಸದಸ್ಯರು ಅವಮಾನ ಮಾಡುತ್ತಿದ್ದಾರೆ, ಇದರಿಂದ ರಾಷ್ಟçಧ್ವಜ ಸಂಹಿತೆ ಉಲ್ಲಂಘಿಸಿದ0ತಾಗಿದೆ, ಇದು ಸಂವಿಧಾನ ಭಾಹಿರ ಎಂದು ತಮ್ಮ ಆಕೋಶವನ್ನ ಹೊರಹಾಕಿದರು.
ಪಟ್ಟು ಬಿಡದ ಕಾಂಗ್ರೆಸ್ ಸದಸ್ಯರು ಧರಣಿ ಮುಂದುವರೆಸಿದ್ದರಿ0ದ ಸಭಾಧ್ಯಕ್ಷ ಕಾಗೇರಿ ಸದನದ ಕಾರ್ಯಕಲಾಪವನ್ನ ನಾಳೆಗೆ ಮುಂದೂಡಿದರು.
Varthajala daily, Bengaluru
0 Comments