Ticker

6/recent/ticker-posts

Ad Code

Responsive Advertisement

Flash News: ಬಿಬಿಎಂಪಿ 2022-23ನೇ ಸಾಲಿನ ಆಯವ್ಯಯಕ್ಕೆ ಸಾರ್ವಜನಿಕರಿಂದ ಸಲಹೆ/ಸೂಚನೆಗಳನ್ನು ಸಲ್ಲಿಸುವ ಬಗ್ಗೆ

ಬೆಂಗಳೂರು, ಫೆ 18: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2022-23ನೇ ಸಾಲಿನ ಕರಡು ಆಯವ್ಯಯದ ತಯಾರಿಕೆಯ ಸಿದ್ಧತೆ ಕಾರ್ಯ ಪ್ರಗತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಸಲಹೆ/ಸೂಚನೆಗಳನ್ನು ಪಡೆಯಲು ಉದ್ದೇಶಿಸಲಾಗಿದ್ದು, ನಗರದ ಸಾರ್ವಜನಿಕರು/ಸಂಘ-ಸ0ಸ್ಥೆಗಳು ತಮ್ಮ ಸಲಹೆ/ಸೂಚನೆಗಳನ್ನು ದಿನಾಂಕ: 03-03-2022ರ ಒಳಗಾಗಿ, ಪಾಲಿಕೆಗೆ ಸಲ್ಲಿಸಲು ಅನುಕೂಲವಾಗುವಂತೆ ಬಿಬಿಎಂಪಿ ಕೇಂದ್ರ ಕಛೇರಿಯ ಮುಖ್ಯ ದ್ವಾರದ ಬಳಿ ಸಲಹೆಗಳ ಸ್ವೀಕೃತಿ ಎಂಬ ಪೆಟ್ಟಿಗೆ(ಬಾಕ್ಸ್)ಯನ್ನು ಇರಿಸಲಾಗಿದೆ.

ಮುಂದುವರಿದು, ನಗರದ ಎಲ್ಲಾ ಸಾರ್ವಜನಿಕರು/ಸಂಘ-ಸ0ಸ್ಥೆಗಳು ತಮ್ಮ ಅಮೂಲ್ಯವಾದ ಸಲಹೆ/ಸೂಚನೆಗಳನ್ನು ದಿನಾಂಕ: 03-03-2022ರ ಒಳಗಾಗಿ ಸಲ್ಲಿಸಲು ಹಣಕಾಸು ವಿಭಾಗದ ಅಪರ ಆಯುಕ್ತರಾದ ಶ್ರೀ ನಾಗರಾಜ್ ಶೆರೇಗಾರ್ ರವರು ಕೋರಿರುತ್ತಾರೆ.

ಇ-ಮೇಲ್: adcfbbmp@gmail.com ಮೂಲಕವೂ ಪ್ರಸಕ್ತ ಸಾಲಿನ ಆಯವ್ಯಕ್ಕೆ ಸಲಹೆ/ಸೂಚನೆಗಳನ್ನು ಸಲ್ಲಿಸಬಹುದಾಗಿರುತ್ತದೆ.

Varthajala daily, Bengaluru

Post a Comment

0 Comments

Ad Code

Responsive Advertisement