ಬೆಂಗಳೂರು, ಫೆ 22: ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಮುಖ ರಸ್ತೆಗಳಾದ ಆರ್ಟಿರಿಯಲ್, ಸಬ್ ಆರ್ಟಿರಿಯಲ್ ಹಾಗೂ ವಾರ್ಡ್ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚವ ಪ್ರಕ್ರಿಯೆ ಮುಕ್ತಾಯ ಹಂತದಲ್ಲಿದ್ದು, ಇಂದು ಪೂರ್ವ ವಲಯದ ಕೆಲವು ರಸ್ತೆಗಳಲ್ಲಿ ರಸ್ತೆ ಗುಂಡಿಗಳನ್ನು ಪೈತಾನ್ ಯಂತ್ರದ ಮೂಲಕ ಮುಚ್ಚುತ್ತಿರುವ ಸ್ಥಳಕ್ಕೆ ಮಾನ್ಯ ಮುಖ್ಯ ಆಯುಕ್ತರಾದ ಶ್ರೀ ಗೌರವ್ ಗುಪ್ತ ರವರು ಬೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರದ ಪೂರ್ವ ವಲಯದಲ್ಲಿ 17 ರಸ್ತೆ, ಪಶ್ಚಿಮ ವಲಯದಲ್ಲಿ 37 ರಸ್ತೆ, ದಕ್ಷಿಣ ವಲಯದಲ್ಲಿ 32 ರಸ್ತೆ, ಆರ್.ಆರ್.ನಗರ ವಲಯದಲ್ಲಿ 8 ರಸ್ತೆಗಳು ಹಾಗೂ 28 ಸಬ್ ಆರ್ಟಿರಿಯಲ್ ರಸ್ತೆ ಸೇರಿದಂತೆ 180 ಕಿ.ಮೀ ಉದ್ದದ 122 ರಸ್ತೆಗಳನ್ನು ವಿಶೇಷ ತಾಂತ್ರಿಕ ಪರಿಣಿತಿ ಹೊಂದಿರುವ ಪೈತಾನ್ ಯಂತ್ರದ ಮೂಲಕ ರಸ್ತೆ ಗುಂಡಿಗಳನ್ನು ಮುಚ್ಚಲು ನಿಯೋಜಿಸಲಾಗಿದೆ.
ಅದರಂತೆ ಇಂದು ಪೈತಾನ್ ಯಂತ್ರದ ಚಟುವಟಿಗೆಗಳನ್ನು ಮಾನ್ಯ ಮುಖ್ಯ ಆಯುಕ್ತರು ನಗರದ ಎಂಜಿ ರಸ್ತೆ, ಕಬ್ಬನ್ ರಸ್ತೆಯಲ್ಲಿ ವೀಕ್ಷಿಸಿದ್ದು, ಪೈತಾನ್ ಯಂತ್ರಗಳಿಗೆ ನಿಯೋಜನೆ ಮಾಡಿರುವ ರಸ್ತೆಗಳಲ್ಲಿ ರಸ್ತೆಗುಂಡಿಗಳಿಲ್ಲದ0ತೆ ಖಾತ್ರಿ ಪಡಿಸಿಕೊಳ್ಳುವಂತೆ ಪಾಲಿಕೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಈ ವೇಳೆ ರ.ಮೂ.ಸೌ - ಪೂರ್ವ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಗೀತಾ ಹಾಗೂ ಇನ್ನಿತರೆ ಸಂಬ0ಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
Varthajala daily, Bengaluru
0 Comments