Ticker

6/recent/ticker-posts

Ad Code

Responsive Advertisement

Breaking News: ರೇಷ್ಮೆ ನಗರಿಯಲ್ಲಿ ಪಕ್ಷಾಂತರ ಪರ್ವ ಆರಂಭ

ರಾಮನಗರ, ಫೆ 26: ರಾಮನಗರ ಜಿಲ್ಲೆಯ ಕೆಲವು ಭಾಗಗಳಲ್ಲಿ ತೆನೆ ಇಳಿಸಿ ಕಮಲ ಹಿಡಿಸುವಲ್ಲಿ ಸೈನಿಕ ಯಶಸ್ವಿಯಾಗಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿಯವರ ಸ್ವಕ್ಷೇತ್ರವಾದ ಚನ್ನಪಟ್ಟಣದಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದೆ.

ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಈಗಾಗಲೇ ಜೆಡಿಎಸ್‌ನ ಕೆಲ ನಾಯಕರನ್ನು ತಮ್ಮಡೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯೂ ಆಗಿದ್ದಾರೆ. ಆದರೆ ಹೆಚ್ಡಿಕೆ ಮಾತ್ರ ಮತ್ತೊಂದು ರಣವ್ಯೂಹ ರಚಿಸಿದ್ದಾರೆ, ಆದರೆ ಎಲ್ಲವನ್ನು ಗೌಪ್ಯವಾಗಿಟ್ಟಿದ್ದಾರೆಂದು ತಿಳಿದುಬಂದಿದೆ. ರೇಷ್ಮೆನಗರ ರಾಮನಗರ ಹಾಗು ಚನ್ನಪಟ್ಟಣ ವಿ.ಸ.ಕ್ಷೇತ್ರಗಳು ಸದ್ಯಕ್ಕೆ ಜೆಡಿಎಸ್ನ ಹಿಡಿತದಲ್ಲಿವೆ, ಹೀಗಾಗಿ ಈ ದಳಪತಿಗಳ ಕೋಟೆ ಭೇಧಿಸಲು ಸೈನಿಕ ನಾನಾ ಕಸರತ್ತು ಆರಂಭಿಸಿದ್ದಾರೆ. ಜೆಡಿಎಸ್ ನಾಯಕರನ್ನು ಸೆಳೆದುಕೊಳ್ಳುವಲ್ಲಿ ಸಿ.ಪಿ. ಯೋಗೇಶ್ವರ್ ಯಶಸ್ವಿಯಾಗಿದ್ದಾರೆ.

ತೆನೆ ಇಳಸಿ ಕಮಲ ಹಿಡಿದವರು ಬಹಿರಂಗವಾಗಿಯೇ ಹೆಚ್ಡಿಕೆ ಮೇಲೆ ಆರೋಪ ಮಾಡುತ್ತಿದ್ದಾರೆ, ಇದಕ್ಕೆ ಹೆಚ್ಡಿಕೆ ಕೂಡ ಪ್ರತ್ಯಾರೋಪ ಮಾಡಿದ್ದಾರೆ. ಇನ್ನು ಈ ಭಾರಿ ಮುಂಬರುವ ಚುಣಾವಣೆಯಲ್ಲಿ ಕುಮಾರಸ್ವಾಮಿಯವರನ್ನು ಕಟ್ಟಿಹಾಕುವ ಸಲುವಾಗಿ ಚನ್ನಪಟ್ಟಣದಲ್ಲಿ ಪಕ್ಷಾಂತರ ಪರ್ವಕ್ಕೆ ಸಿ.ಪಿ.ವೈ ಕೈಹಾಕಿದ್ದಾರೆ. ಮುಂದಿನ ವಿ.ಸ. ಚುಣಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಿಂದಲೇ ಸಿ.ಪಿ.ವೈ ಹಾಗು ಹೆಚ್ಡಿಕೆ ಮುಖಾಮುಖಿಯಾಗಲಿದ್ದಾರೆ.

Varthajala daily, Bengaluru

Post a Comment

0 Comments

Ad Code

Responsive Advertisement