ಬೆಂಗಳೂರು, ಫೆ 22: ಬಡವರ ಮಕ್ಕಳು ವ್ಯಾಸಂಗ ಮಾಡುವಂಥ ಸರಕಾರಿ ಶಾಲೆ ಕಾಲೇಜುಗಳಲ್ಲಿ ಮಕ್ಕಳ ನಡುವೆ ದ್ವೇಷ ಭಾವನೆ ಮೂಡಿಸಿ ಅಶಾಂತಿ ಉಂಟು ಮಾಡಲಾಗುತ್ತಿದೆ.
ಸರಕಾರಿ ಶಿಕ್ಷಣ ವ್ಯವಸ್ಥೆಯೇ ನಾಶವಾಗುವ ಹಂತ ಮುಟ್ಟಿದೆ. ಬಡಮಕ್ಕಳ ಮೇಲೆ ಆದ ಅನಾಹುತ ಇದರ ಬಗ್ಗೆ ಕಲಾಪದಲ್ಲಿ ಚರ್ಚೆ ಆಗಬೇಕಿತ್ತು. ಕೊರೊನಾ ಅನಾಹುತದಿಂದ ಎರಡು ವರ್ಷದಿಂದ ಶಿಕ್ಷಣ ರಂಗ ಪೂರ್ಣವಾಗಿ ನಾಶವಾಗಿದೆ. ಈ ವರ್ಷವೂ ಸಹ ಕೊರೊನಾ ಅನಾಹುತದ ನಂತರ 'ರಾಜಕೀಯದ ಕೋವಿಡ್' ಪ್ರಯೋಗವಾಗಿದೆ. ಎರಡೂ ರಾಷ್ಟ್ರೀಯ ಪಕ್ಷಗಳು ಇಡೀ ರಾಜ್ಯಕ್ಕೆ 'ರಾಜಕೀಯ ಕೋವಿಡ್ ' ಅನ್ನು ಹಬ್ಬಿಸುತ್ತಿವೆ ಎಂದು ಮಾಜಿ ಮುಖ್ಯಮಂತ್ರಿಗಳು ಕಿಡಿ ಕಾರಿದರು.
ರಾಜಕೀಯ ಕೋವಿಡ್‌ಗೆ ಔಷಧಿ ಇಲ್ಲ. ಇಡೀ ರಾಜ್ಯದ ನೆಮ್ಮದಿ ಶಾಂತಿಯನ್ನು ಬುಡಮೇಲು ಮಾಡುವ ರಾಜಕೀಯ ಸ್ವಾರ್ಥಕ್ಕೆ ಕೊನೆ ಇಲ್ಲದಾಗಿದೆ. ಅದಕ್ಕೆ ಈ ರೀತಿ ಗದ್ದಲ ಎಬ್ಬಿಸಿ ಕಲಾಪವನ್ನು ಮುಗಿಸಿದರು. ಸದನ ಸುಗಮವಾಗಿ ನಡೆಸಲು ಅವಕಾಶ ಕೊಡಿ. ಮತಾಂತರ ನಿಷೇಧ ಕಾಯ್ದೆ ವಿಷಯ ಇಟ್ಟುಕೊಂಡು ಬೆಳಗಾವಿ ಅಧಿವೇಶನವನ್ನೂ ಹಾಳುಗೆಡವಿದ್ದಾರೆ ಎಂದು ಅವರು ಹೇಳಿದರು.
Varthajala daily, Bengaluru
0 Comments