*1961 ರಲ್ಲಿ ಮೈಸೂರು ಸರ್ಕಾರದ ವಿದ್ಯಾ ಇಲಾಖೆಗೆದಾನವಾಗಿ ಬಂದಿರುವ ಸುಮಾರು 2 ಕೋಟಿ ರೂ ಆಸ್ತಿಯು ಖಾಸಗಿಯವರ ವಶದಲ್ಲಿದ್ದರೂ ,ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯ!! !
ಮಧುಗಿರಿ : ಮಿಡಿಗೇಶಿ ಗ್ರಾಮದ ಶ್ರೀ ಅಡವಿ ಯೋಗೇಂದ್ರ ವಿದ್ಯಾರ್ಥಿನಿಲಯ ಸಂಘ ಮಿಡಿಗೇಶಿ 1948 ರಿಂದ 1961 ರವರೆಗೆ ವಿದ್ಯಾರ್ಥಿಗಳಿಗೆ ವಸತಿ ಊಟೋಪಚಾರಗಳನ್ನು ಮಾಡುತ್ತಾ ಬಂದಿದ್ದು, ದಿನಾಂಕ 12/10/1961 ರಂದು ಸಂಘದಲ್ಲಿರುವ ಎಲ್ಲಾ ಚರಾಸ್ತಿ ಹಾಗೂ ಸ್ಥಿರಾಸ್ತಿಗಳನ್ನು ಅಂದಿನ ಮೈಸೂರು ಸರ್ಕಾರದ ವಿದ್ಯಾ ಇಲಾಖೆಗೆ ದಾನವಾಗಿ ನೀಡಿರುತ್ತದೆ.
1961 ರ ದಾನ ಪತ್ರದ ಪ್ರಕಾರ ಮಿಡಿಗೇಶಿ ಗ್ರಾಮ ಪಂಚಾಯಿತಿ ಗೆ ಸೇರಿದ ಖಾನಿಷ್ಮಾರಿ ನಂ 454 ಸಾರೋಟಿನ ಮಹಡಿ ಇರುವ ಕಟ್ಟಡ ಪೂ-ಪ 100 ಅಡಿಗಳು ಉ-ದ 64 ಅಡಿಗಳು
ಚಕ್ಕುಬಂದಿ ಪೂರ್ವಕ್ಕೆ-ದುರ್ಗಮ್ಮನ ಗುಡಿ, ಪಶ್ಚಿಮಕ್ಕೆ ವೀರಭದ್ರಸ್ವಾಮಿ ದೇವಸ್ಥಾನ, ಉತ್ತರಕ್ಕೆ- ಸರ್ಕಾರಿ ರಸ್ತೆ ದಕ್ಷಿಣಕ್ಕೆ-ಚೌಡಮ್ಮನ ಕುದ್ರ, ಭೂತಪ್ಪನ ಗುಡಿ ಅಂಗಳ.
2) ಮಿಡಿಗೇಶಿ ಗ್ರಾಮ ಪಂಚಾಯಿತಿಗೆ ಸೇರಿದ ಖಾನಿಷ್ಮಾರಿ ನಂ55 ಮಂಗಳೂರು ಹೆಂಚಿನ ಮನೆ ಪೂರ್ವ-ಪಶ್ಚಿಮ 74 ಅಡಿಗಳು, ಉತ್ತರ-ದಕ್ಷಿಣ 63 ಅಡಿಗಳು,. ಕಟ್ಟಡದ ವಿಸ್ತೀರ್ಣ 50*56 ಅಡಿಗಳು. ಕಾಂಪೌಂಡ್ 74*27 ಅಡಿಗಳು.
ಚಕ್ಕುಬಂದಿ -ಪೂರ್ವಕ್ಕೆ ರಸ್ತೆ, ಪಶ್ಚಿಮಕ್ಕೆ-ತಿಪ್ಪಯ್ಯ ವೆಂಕಟಾಚಲಯ್ಯ ನವರ ನಿವೇಶನ, ಉತ್ತರಕ್ಕೆ-ಸರ್ಕಾರಿ ರಸ್ತೆ, ದಕ್ಷಿಣಕ್ಕೆ ಸರ್ಕಾರಿ ಓಣಿ.
1961 ರಲ್ಲಿ ಶ್ರೀ ಅಡವಿ ಯೋಗೇಂದ್ರ ವಿದ್ಯಾರ್ಥಿನಿಲಯ ಸಂಘ ಮಿಡಿಗೇಶಿ ರವರಿಂದ ಅಂದಿನ ಮೈಸೂರು ಸರ್ಕಾರದ ವಿದ್ಯಾ ಇಲಾಖೆಗೆ ಸರ್ವೇ ನಂ97, ಸರ್ವೆ ನಂ111, ಸರ್ವೆ ನಂ112, ಸರ್ವೆ ನಂ152 ರ ಜಮೀನುಗಳು ದಾನವಾಗಿ ಬಂದಿದ್ದು ಅಂದಿನಿಂದ ಇಂದಿನವರೆಗೂ ಮಾಲೀಕರ ಹೆಸರು ಇರುವ ಜಾಗದಲ್ಲಿ ಮೈಸೂರು ಸರ್ಕಾರ ವಿದ್ಯಾ ಇಲಾಖೆ ಎಂಬುದಾಗಿ ಇರುತ್ತದೆ.
(2022 ರ ಪಾಣಿಯಲ್ಲಿ )
2021 ಜೂನ್ ತಿಂಗಳ ವರೆಗೂ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ದಾನವಾಗಿ ಬಂದಿರುವ ಸ್ವತ್ತುಗಳ ಸಂಬಂಧ ಯಾವುದೇ ರೀತಿಯಾದ ದಾಖಲಾತಿಗಳು ಇರುವುದಿಲ್ಲ. ಇತ್ತೀಚೆಗೆ ದಾಖಲಾತಿಗಳನ್ನು ಸಂಗ್ರಹಿಸಿ ರುತ್ತಾರೆ .ಆಸ್ತಿಯನ್ನು ಖಾಸಗಿ ವ್ಯಕ್ತಿಗಳು ಅನುಭವಿಸುತ್ತಿದ್ದಾರೆ.
RTI ಕಾರ್ಯಕರ್ತ ಮಿಡಿಗೇಶಿ ಗ್ರಾಮದ ಮಂಜುನಾಥ್ ರವರು ನಾನು ವಿದ್ಯೆ ಕಲೆತ ಶಾಲೆಗೆ ಸಂಬಂಧಿಸಿದಂತ ಆಸ್ತಿಯನ್ನು ದಾನ ನೀಡಿರುವುದು ನನ್ನ ಗಮನಕ್ಕೆ ಬಂದಿತ್ತು. ಅದರ ಸಲುವಾಗಿ ಇಲಾಖೆವಾರು ಮಾಹಿತಿಗಳನ್ನು ಸಂಗ್ರಹಣೆ ಮಾಡಿದ್ದೇನೆ ಎಂದು ತಿಳಿಸಿದರು
ದಿನಾಂಕ 5/1/22 ರಂದು ಮಿಡಿಗೇಶಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ತಮ್ಮ ಇಲಾಖೆಗೆ ದಾನವಾಗಿ ಬಂದಿರುವ ಮಿಡಿಗೇಶಿ ಗ್ರಾಮ ಪಂಚಾಯಿತಿಗೆ ಸೇರಿದ 2 ಕಟ್ಟಡಗಳನ್ನು ತಮ್ಮ ಇಲಾಖೆ ಹೆಸರಿಗೆ ಖಾತೆ ಮಾಡಿಕೊಡಲು ದಾನ ಪತ್ರದ ನಕಲು ಲಗತ್ತಿಸಿ ಅರ್ಜಿ ಸಲ್ಲಿಸಿರುತ್ತಾರೆ.
ಅರ್ಜಿ ಸಲ್ಲಿಸಿ 45 ದಿನಗಳಾದರೂ ಮಿಡಿಗೇಶಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಂದ ಯಾವುದೇ ಮಾಹಿತಿ ಬಂದಿರುವುದಿಲ್ಲ.
ಈ ಮೇಲ್ಕಂಡ ಎರಡು ಸ್ವತ್ತುಗಳು ಶ್ರೀ ಅಡವಿ ಯೋಗೇಂದ್ರ ವಿದ್ಯಾರ್ಥಿನಿಲಯ ಸಂಘ ಮಿಡಿಗೇಶಿ ರವರಿಂದ 1961 ರಲ್ಲಿ ಅಂದಿನ ಮೈಸೂರು ಸರ್ಕಾರದ ವಿದ್ಯಾ ಇಲಾಖೆಗೆ ದಾನವಾಗಿ ಬಂದಿರುವ ಸ್ವತ್ತುಗಳು.
ಮಿಡಿಗೇಶಿ ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇದುವರೆಗೂ ಯಾವುದೇ ಕ್ರಮವನ್ನು ತೆಗೆದುಕೊಂಡಿರುವುದಿಲ್ಲ.
ಸರ್ವೇ ನಂಬರ್ 111 ಮತ್ತು 112 ರ ಜಮೀನುಗಳಲ್ಲಿ ಇತ್ತೀಚೆಗೆ ಖಾಸಗಿಯವರು ಭತ್ತವನ್ನು ನಾಟಿ ಮಾಡಿರುತ್ತಾರೆ 111 ಮತ್ತು 112 ಸರ್ವೆ ನಂ ಜಮೀನು ಸುಮಾರು 4 ಯಕರೆ ಇರುತ್ತದೆ. ಈ ಬಗ್ಗೆ ಮಿಡಿಗೇಶಿ ಯ ಗ್ರಾಮಸ್ಥರು ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಮಧುಗಿರಿ ರವರಿಗೆ ದೂರನ್ನು ನೀಡಿ ತಮ್ಮ ಇಲಾಖೆಯ ಜಮೀನಿನಲ್ಲಿ ಭತ್ತ ನಾಟಿ ಮಾಡಿರುವ ಖಾಸಗಿ ವ್ಯಕ್ತಿಗಳ ವಿರುದ್ಧ ಕಾನೂನುರೀತ್ಯ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.
0 Comments