ಪತ್ರಕರ್ತರ ಸಂಘದ ಕಳೆದ ಸಾಲಿನ ರಾಜ್ಯಾಧ್ಯಕ್ಷ ಎನ್.ರಾಜು ಅವರು ಸಂಘದಲ್ಲಿ ಹಣ ದುರುಪಯೋಗ ಆಗಿದೆ ಎಂಬ ಹಿನ್ನಲೆಯಲ್ಲಿ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಈಗ ಹಳೆಯ ಕಥೆ. ಈಗ ಅವರೇ ಹೇಳುವ ಪ್ರಕಾರ ಹಣ ದುರುಪಯೋಗ ವಿಷಯದಲ್ಲಿ ಯಾರೆಲ್ಲಾ ಪಾಲುದಾರರು ಎಂದು ಪತ್ರಿಕಾ ಹೇಳಿಕೆ ಮೂಲಕ ಎಲ್ಲಾ ಪತ್ರಕರ್ತರಿಗೂ ಮನವರಿಕೆ ಮಾಡುವ ಪ್ರಯತ್ನ ಮಾಡುತ್ತಿರುವುದು ಸ್ವಾಗತಾರ್ಹವೇ ಸರಿ.
ಒಂದು ವೇಳೆ ಅವರ ಹೇಳಿಕೆ ನಿಜವಾಗಿದ್ದಲ್ಲಿ ಅವರಿಂದ ಹಣ ಪಡೆದ ಫಲಾನುಭವಿಗಳು ರಾಜು ಅವರಿಂದ ಪಡೆದ ಹಣ ಹಿಂತಿರುಗಿಸುವ ಮೂಲಕ ಮಾನವೀಯತೆ ಮೆರೆಯಬೇಕಾಗಿದೆ.
ರಾಜು ಅವರು ಸಂಘಕ್ಕೆ ಅರ್ಧ ಎಕರೆ ಜಮೀನು ಕೊಡಿಸಲು ಬಹಳವಾಗಿ ಶ್ರಮ ಪಟ್ಟಿರುವುದು ಪ್ರತಿಯೊಬ್ಬ ಪತ್ರಕರ್ತರಿಗೂ ತಿಳಿದ ವಿಚಾರವಾಗಿದೆ.ಈಗಲೂ ಕಾಲ ಮಿಂಚಿಲ್ಲ ಅವರಿಂದ ಅನುಕೂಲ ಪಡೆದವರು ಮತ್ತೆ ಆತ್ಮ ವಿಮರ್ಶೆ ಮಾಡಿಕೊಂಡು ಕೈಜೋಡಿಸುವ ಮೂಲಕ ಆದ ತಪ್ಪು ಸರಿಪಡಿಸುವತ್ತ ಚಿತ್ತಹರಿಸಬೇಕು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಕಳೆದ ಮೂವತ್ತು ವರ್ಷದಿಂದ ನಾನು ಸದಸ್ಯನಾಗಿ ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಹಲವಾರು ಜವಾಬ್ದಾರಿ ಸ್ಥಾನವನ್ನು ಪಡೆದು ಕೆಲಸ ಮಾಡಿದ್ದೇನೆ. ಮಾಧ್ಯಮ ಅಕಾಡೆಮಿ ಸದಸ್ಯನಾಗಿ ಕಾರ್ಯ ನಿರ್ವಹಿಸಿದ್ದೇನೆ. ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷನಾಗಿ ಕಂದಾಯ ಭವನಕ್ಕೆ ಕಛೇರಿ ಸ್ಥಳಾಂತರ ಮಾಡಿ ಪುನರ್ ನವೀಕರಣ ಮಾಡಲಾಯಿತು.
ಪತ್ರಿಕೆಗಳು ಮತ್ತು ಪತ್ರಕರ್ತರ ಸಮಸ್ಯೆಗಳನ್ನು ನಿವಾರಣೆ ಮಾಡಲು ಹೋರಾಟ ರೂಪಿಸಿ ಜಾಹೀರಾತು ದರ ಹೆಚ್ಚಳದ ಜೊತೆಗೆ ನಿಗದಿತ ಸಮಯದಲ್ಲಿ ಎಲ್ಲಾ ಪತ್ರಿಕೆಗಳಿಗೆ ದೊರಕುವಂತೆ ಮಾಡಿದ್ದು ಎಲ್ಲರಿಗೂ ತಿಳಿದ ವಿಚಾರ. ತಮ್ಮೆಲ್ಲರ ಬೆಂಬಲದಿ0ದ ಇದು ಸಾಧ್ಯವಾಗಿದ್ದು, ಇದರ ಜೊತೆಗೆ ಬೆಂಗಳೂರಿನ ಹೃದಯಭಾಗವಾಗಿರುವ ಹೊಸಕೆರೆಹಳ್ಳಿ ಸಮೀಪ ಅರ್ಧ ಎಕರೆ ಜಾಗ ಮಂಜೂರು ಮಾಡಿಸಲು ಆರು ತಿಂಗಳ ಶ್ರಮ ಹಾಕಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಧ್ಯವi ಸಲಹೆಗಾರ ಕೆ.ವಿ.ಪ್ರಭಾಕರ್ ರವರ ಸಹಾಯದಿಂದ ಜಾಗ ಮಂಜೂರು ಮಾಡಿಸಿ ಸಂಘಕ್ಕೆ ಆಸ್ತಿ ಮಾಡಿದ್ದು ತಪ್ಪಾಯಿತು ಎಂದು ಕಳೆದ ನಾಲ್ಕು ವರ್ಷದಿಂದ ಕೊರುಗುತ್ತಿರುವೆ.
2018ರಲ್ಲಿ ಮತ್ತೊಮ್ಮೆ ರಾಜ್ಯದ ಅಧ್ಯಕ್ಷನಾಗಿ ಆಯ್ಕೆಯಾದಾಗ ನನ್ನ ಜೊತೆಯಲ್ಲಿ ಇದ್ದವರೇ ಪಿತೂರಿ ನಡೆಸಿ ಆಕ್ರಮವಾಗಿ ಹಿಂಬಾಗಿಲಿನಿ0ದ ಅಧಿಕಾರಕ್ಕೆ ಬರುವಾಗ ನನ್ನ ಮೇಲೆ ದೂರು ದಾಖಲು ಮಾಡಿಸಿ ಅಧಿಕಾರಕ್ಕೆ ಬಂದರು.
ಜಾಗ ಮಂಜೂರು ಮಾಡಿಸಲು ಓಡಾಟಕ್ಕೆ ಇತರೆ ಬಾಪ್ತು ಹಣ ವೆಚ್ಚ ಮಾಡಬೇಕು ಎಂದು ಕಾರ್ಯಕಾರಿ ಸಮಿತಿಯಲ್ಲಿ ಚರ್ಚೆ ನಡೆದು ಪದಾಧಿಕಾರಿಗಳು ಬಳಸಿಕೊಳ್ಳಲು ಒಪ್ಪಿಗೆ ನೀಡಿದ್ದು ಸರಿಯಷ್ಟೆ. ಚುನಾವಣೆ ಮುಗಿದ ನಂತರ ಸಮಸ್ಯೆಗಳನ್ನು ಸೃಷ್ಟಿಸಿರುವುದು ಎಲ್ಲರ ಗಮನಕ್ಕೆ ಬಂದಿರುತ್ತದೆ. ಈ ಸಂಬ0ಧ ಹಾಸನದ ಮಾಜಿ ಅಧ್ಯಕ್ಷ ರವಿ ನಾಕಲಗೂಡರವರ ಮನೆಯಲ್ಲಿ ಕುಳಿತು ಚರ್ಚೆ ಮಾಡಿ ಹಣ ಹಿಂತಿರುಗಿ ಕೊಡುತ್ತವೆ ಎಂದ ಶಿವಾನಂದ ತಗಡೂರು 2 ಲಕ್ಷ ಹೆಚ್.ಬಿ.ಮದನಗೌಡ 6ಲಕ್ಷ ಕೆ,ಉಮೇಶ್ವರ್ 5 ಲಕ್ಷ ಮತ್ತು ಲೋಕೇಶ್ 2 ಲಕ್ಷ ಹಣ ಹಿಂತಿರುಗಿಸುವ ಮಾತನಾಡಿದ್ದು ಬಿಟ್ಟರೆ ಬರೀ ನನ್ನ ಮೇಲೆ ಆರೋಪಗಳನ್ನು ಮಾಡುತ್ತಾ ನಾಲ್ಕು ವರ್ಷಗಳ ಕಾಲ ಅಧಿಕಾರ ನಡೆಸಿ ಈಗ ಮತ್ತೊಮ್ಮೆ ಅಧಿಕಾರ ಹಿಡಿಯಲು ಸಂಚು ನಡೆಸುತ್ತಿದ್ದಾರೆ.
ಶಿವಾನಂದ ತಗಡೂರರಿಗೆ ಮಕ್ಕಳ ಮೇಲೆ ನಂಬಿಕೆ ಇದ್ದರೆ ಅವರ ಮೇಲೆ ಅಣೆ ಮಾಡಲಿ ಮದನಗೌಡ ಶ್ರವಣಬೆಳಗೊಳದ ಮಠದಲ್ಲಿ ಆಣೆ ಪ್ರಮಾಣ ಮಾಡಲಿ ಕಾರ್ಯಕಾರಿ ಸಮಿತಿ ಸಂಪೂರ್ಣ ಜವಾಬ್ದಾರಿ ಮತ್ತು ಸಹಿ ಹಾಕಿದವರು ಜವಾಬ್ದಾರಿ ಎಂಬುದನ್ನು ಮರೆತು ನಡೆದುಕೊಳ್ಳುವುದು ಎಷ್ಟರಮಟ್ಟಿಗೆ ಸರಿ. ನ್ಯಾಯಾಲಯದಲ್ಲಿ ದೂರು ಇರುವುದರಿಂದ ಸುಮ್ಮನಿರುವಂತೆ ವಕೀಲರು ಸೂಚನೆ ನೀಡಿರುವುದರಿಂದ ಮತ್ತು ಸಂಘದಿ0ದ ನಾನು ಬೆಳೆದಿರುವುದರಿಂದ ಸಂಘಕ್ಕೆ ಧಕ್ಕೆ ತರಬಾರದು ಎಂದು ಸಹಿಸಿಕೊಂಡಿದ್ದೇನೆ. ನಾನು ದುಬಾರಿ ವೆಚ್ಚ ಮಾಡಿರಬಹುದು ಆಸ್ತಿಯನ್ನು ಮಾಡಿದ್ದೇನೆ.
ಶಿವಾನಂದ ತಗಡೂರರಿಗೆ ಯಾವ ನೈತಿಕತೆ ಇದೆ. ಹಾಸನದ ವಿಜಯ ಕರ್ನಾಟಕ ಪತ್ರಿಕೆಯಿಂದ ಟರ್ಮಿನೇಟ್ ಆಗಿದ್ದು ಏಕೆ? ಎಂದು ಹೇಳಲಿ. ಸಚಿವ ಸೋಮಣ್ಣರಿಂದ ವಸತಿ ಇಲಾಖೆಯಿಂದ ನ್ಯಾಯಯುತ ನಿವೇಶನ ಪಡೆದಿರುವವರೇ...? ಬಹಳಷ್ಟು ವಿಚಾರಗಳನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುವೇ ಘನ ನ್ಯಾಯಾಲಯದಲ್ಲಿ ಇರುವ ಕೇಸ್ ಮುಗಿದ ಮೇಲೆ ಹಿಂದಿನಿ0ದಲೂ ಸಂಘ ನಡೆದಿರುವ ಎಲ್ಲಾ ಮಾಹಿತಿ ನನ್ನಲ್ಲಿ ಇದೆ.
-ಎನ್.ರಾಜು
0 Comments