ಬೆಂಗಳೂರು ನಗರ ಜಿಲ್ಲೆ ಫೆ 24 (ಕರ್ನಾಟಕ ವಾರ್ತೆ): 2004ರ ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ನೇಮಕವಾಗಿರುವ ಸಕ್ಷಮ ಪ್ರಾಧಿಕಾರವು ಇಂಜಾಜ್ ಇಂಟರ್ ನ್ಯಾಷನಲ್ ಕಂಪನಿಯ ಠೇವಣಿದಾರು ಮತ್ತು ಸುರಕ್ಷಿತ ಸಾಲಗಾರರಿಂದ ಕ್ಲೈಮ್ ಗಳನ್ನು ಕರೆಯಲು ಅರ್ಜಿ ಆಹ್ವಾನಿಸಲಾಗಿದೆ.
ಕ್ಲೈಮ್ ಗಳನ್ನು ದಿನಾಂಕ 15-03-2022 ರಿಂದ ಸಲ್ಲಿಸಬಹುದಾಗಿದ್ದು ಈ ದಿನಾಂಕದಿಂದ 30 ದಿನಗಳ ಒಳಗಾಗಿ ಕ್ಲೈಮ್ ಗಳನ್ನು ಸಲ್ಲಿಸಬಹುದಾಗಿದೆ. ಆನ್ ಲೈನ್ ಮೂಲಕ ಸಲ್ಲಿಸಿದ ಕ್ಲೈಮುಗಳನ್ನು ಮಾತ್ರ ಸ್ವೀಕರಿಸಲಾಗುವುದು. ಠೇವಣಿದಾರರು ಸ್ವತಃ ಅಥವಾ ಸರ್ಕಾರಿ ಸೇವಾ ಕಿಯೋಸ್ಕ್, ಬೆಂಗಳೂರು-ಒನ್/ಕರ್ನಾಟಕ –ಒನ್/ನಾಗರೀಕ ಸೇವಾ ಕೇಂದ್ರಗಳ (CSCs). ಆಪರೇಟರ್ ಗಳ ನೆರವಿನಿಂದ ಸಲ್ಲಿಸಬಹುದು.
ಆನ್ ಲೈನ್ ಕ್ಲೈಮ್ ಅರ್ಜಿಯನ್ನು ಸಲ್ಲಿಸಲು ಕ್ಲೈಮುದಾರರು ತಮ್ಮ ಗುರುತನ್ನು ದೃಢೀಕರಿಸುವುದರ ಜೊತೆಗೆ , ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಒಟಿಪಿ ಅಥವಾ ಬಯೋ-ಮೆಟ್ರಿಕ್ ಆಧಾರಿತ ದೃಢೀಕರಣ , ಆಯಾ ಠೇವಣಿ ಯೋಜನೆಗೆ ಲಿಂಕ್ ಮಾಡಲಾದ ಕ್ಲೇಮುದಾರರ ಖಾತೆಯಿಂದ ಸಕ್ಷಮ ಪ್ರಾಧಿಕಾರದ ಬ್ಯಾಂಕ್ ಖಾತೆಗೆ ರೂ.1/NEFT/RTGC ಮೂಲಕ ವರ್ಗಾವಣೆ ಮಾಡಿದಾಗ ಲಭ್ಯವಾಗುವ ವಹಿವಾಟು ಸಂಖ್ಯೆ (UTR NO.) ಮೂಲಕ ಅಥವಾ ಅರ್ಜಿದಾರು ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ ಮುಂತಾದ ದಾಖಲೆಗಳೊಂದಿಗೆ ಸಕ್ಷಮ ಪ್ರಾಧಿಕಾರದ ಕಛೇರಿಗೆ ಖುದ್ದಾಗಿ ಭೇಟಿ ನೀಡಬಹುದಾಗಿದೆ.
ಸಕ್ಷಮ ಪ್ರಾಧಿಕಾರವು ಠೇವಣಿದಾರರಿಗೆ ಪೋಸ್ಟ್ ಮತ್ತು ಎಸ್ಎಂಎಸ್ ಅಥವಾ ರೆಕಾರ್ಡ್ ಮಾಡಿದ ಪೂರ್ವಮುದ್ರಿತ ಕರೆಗಳ ಮೂಲಕ ಲಭ್ಯವಿರುವ ವಿಳಾಸ ಮತ್ತು ಮೊಬೈಲ್ ಸಂಖ್ಯೆಗಳಿಗೆ ಸೂಚನೆಗಳನ್ನು ಕಳಿಹಿಸಲಾಗುವುದು. ವೆಬ್ ಸೈಟ್ ಮತ್ತು ಹೆಲ್ಪ್ ಡೆಸ್ಕ್ನ ವಿವರಗಳನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು ಎಂದು ಸಕ್ಷಮ ಪ್ರಾಧಿಕಾರಿ ಹಾಗೂ ಸಹಾಯಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
0 Comments