Ticker

6/recent/ticker-posts

Ad Code

Responsive Advertisement

"ಪುರಂದರ ನಮನ " ಪ್ರಶಸ್ತಿ ಪ್ರದಾನ ಸಮಾರಂಭ 2022

ದಾಸವಾಣಿ ಸಂಸ್ಥೆಯ ವತಿಯಿಂದ ಫೆಬ್ರವರಿ 5, ಶನಿವಾರ ಸಂಜೆ 4-30ಕ್ಕೆ ಮಲ್ಲೇಶ್ವರದ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ ಶ್ರೀ ರಾಮ ಮಂದಿರದಲ್ಲಿ (ಅಂಚೆ ಕಚೇರಿ ಹತ್ತಿರ) ಪ್ರತಿ ವರ್ಷದಂತೆ ಈ ವರ್ಷವೂ "ಪುರಂದರ ನಮನ" ಪ್ರಶಸ್ತಿಯನ್ನು  ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ವಿದುಷಿ ಶ್ರೀಮತಿ ದಿವ್ಯಾ ಗಿರಿಧರ್, ಶ್ರೀಮತಿ ಮಾನಸಾ ಕುಲಕರ್ಣಿ ಮತ್ತು ಶ್ರೀಮತಿ ಚಂದ್ರಿಕಾ ಗಿರೀಶ್ ಇವರುಗಳಿಗೆ "ಪುರಂದರ ನಮನ" ಪ್ರಶಸ್ತಿ ಪ್ರದಾನ ಮಾಡಲಾಗುವುದು. 









ಈ ಸಮಾರಂಭದ ಮುಖ್ಯ ಅತಿಥಿಗಳಾಗಿ, ಶ್ರೀ ಜಗನ್ನಾಥದಾಸರು ಚಲನಚಿತ್ರದಲ್ಲಿ ಶ್ರೀ ಗೋಪಾಲದಾಸರ ಪಾತ್ರ ವಹಿಸಿರುವ  ಶ್ರೀ ಪ್ರಭಂಜನ ದೇಶಪಾಂಡೆ ಮತ್ತು ಇದೇ ಚಲನಚಿತ್ರದ ಸಂಗೀತ ನಿರ್ದೇಶಕರಾದ ಶ್ರೀ ವಿಜಯ ಕೃಷ್ಣ ಡಿ. ಇವರುಗಳು ಭಾಗವಹಿಸುವರು. ಇದೇ ಸಂದರ್ಭದಲ್ಲಿ ದಾಸವಾಣಿ ಸಂಸ್ಥೆಯು ಏರ್ಪಡಿಸಿದ್ದ ಪುರಂದರದಾಸರ ಹಾಡುಗಳ ಗಾಯನ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಶಸ್ತಿ ಪತ್ರ ನೀಡಲಾಗುವುದು ಎಂದು ದಾಸವಾಣಿ ಸಂಸ್ಥೆಯ ರೂವಾರಿ ಶ್ರೀ ಜಯರಾಜ್ ಕುಲಕರ್ಣಿ ಅವರು ತಿಳಿಸಿದ್ದಾರೆ.

Post a Comment

0 Comments

Ad Code

Responsive Advertisement